ಶಿಡ್ಲಘಟ್ಟ, ಜ.30- ಬಾವಿಯೊಳಗೆ ಬಿದ್ದ ಮೊಬೈಲ್ ತೆಗೆಯಲು ಹೋದ ಯುವಕ ಉಸಿರು ಗಟ್ಟಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಗುಡಿಹಳ್ಳಿಯಲ್ಲಿ ನಡೆದಿದೆ. ಅನಿಲ್‍ಕುಮಾರ್ (35) ಮೃತಪಟ್ಟ ಯುವಕ. ತೋಟದಲ್ಲಿರುವ ಶೆಡ್ ಬಳಿ ಕೆಲಸ ಮಾಡುತ್ತಿದ್ದಾಗ ಮೂಬೈಲ್ ಕೈ ಜಾರಿ ಶೆಡ್ ನಲ್ಲಿರುವ ಕಿರು ಬಾವಿಗೆಬಿದ್ದಿದೆ.
ಬಾವಿಯಲ್ಲಿ ಬಿದ್ದ ಮೋಬೈಲ್ ತೆಗೆದುಕೊಳ್ಳಲು ಯುವಕ ಬಾವಿಗಿಳಿದಿದ್ದಾನೆ ಮಧ್ಯಾಹ್ನವಾದರೂ ಅನಿಲ್ ಮನೆಗೆ ಬಾರದಿದ್ದಾಗ ಮನೆಯವರು ಹುಡುಕಿಕೊಂಡು ಜಮೀನಿನ ಬಳಿಗೆ ಬಂದಿದ್ದಾರೆ. ಬಾವಿ ಬಳಿ ಚಪ್ಪಲಿಗಳು ಇರುವುದನ್ನು ಗಮನಿಸಿದ ಸಹೋದರ ಅನುಮಾನಗೊಂಡು ಬಾವಿಗಿಳಿದು ನೋಡಲು ಮುಂದಾಗಿದ್ದು ಬಾವಿಯೊಳಗೆ ಗಾಳಿ ಇಲ್ಲದಿದ್ದರಿಂದ ಮೆಲೆ ಬಂದಿದ್ದಾರೆ.
ಕೂಡಲೆ ಅಗ್ನಿಶಾಮಕದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿದರು. ಆದರೆ ಕಿರಿದಾದ ಬಾವಿಯಲ್ಲಿ ಬೆಳಕು ಹಾಗೂ ಗಾಳಿಯ ಕೊರತೆಯಿಂದ ಕಾರ್ಯಚರಣೆಗೆ ತೊಂದರೆಯಾಯಿತು. ನಂತರ ಸ್ಕ್ಯಾನರ್ ಬಳಸಿ ಬಾವಿಯನ್ನು ಪರಿಶೀಲಿಸಿದಾಗ ನಿತ್ರಾಣಗೊಂಡು ಅನಿಲ್ ಕುಳಿತಿರುವುದು ಕಂಡು ಬಂತು ಯುವಕನನ್ನು ಮೆಲೆತ್ತಲು ಸಿಬ್ಬಂದಿಗಳು ನಿರಂತರ ಕಾರ್ಯವರಣೆ ನಡೆಸಿ ತಡ ರಾತ್ರಿ ಮೆಲೆತ್ತಲಾಯಿತಾದರೂ ಅಷ್ಟರಲ್ಲಿ ವಿಷಗಾಳಿ ಸೇವಿಸಿ ಅನಿಲ್ ಸಾವನ್ನಪ್ಪಿದ್ದಾನೆ.
ಈಡಿ ಗ್ರಾಮವೇ ಜಮೀನಿನ ಬಳಿ ಜಮಾಯಿಸಿದ್ದು ಸುರಕ್ಷಿತವಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶಿಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈ ಗೊಂಡಿದ್ದಾರೆ .
