ಎಣ್ಣೆ ಹೊಡೆಯೋ ಯುವಕರೇ, ತಪ್ಪದೆ ಈ ಸುದ್ದಿ ನೋಡಿ..!

Social Share

ವಾಷಿಂಗ್ಟನ್, ಜು.15-ಅಮೆರಿಕದಲ್ಲಿ ಯುವಜನರು ಮದ್ಯ ಸೇವನೆ ಚಟದಿಂದ ಹಿರಿಯರಿಗಿಂತ ಹೆಚ್ಚಿನ ಆರೋಗ್ಯ ಅಪಾಯಗಳನ್ನು ಎದುರಿಸುತ್ತಿದ್ದಾರೆ ಎಂದು ಜಾಗತಿಕ ಅಧ್ಯಯನವೊಂದು ತಿಳಿಸಿದೆ.

ಭೌಗೋಳಿಕ ಪ್ರದೇಶ, ವಯಸ್ಸು, ಲಿಂಗ ಮತ್ತು ವರ್ಷದಿಂದ ಮದ್ಯದ ಅಪಾಯವನ್ನು ವರದಿ ಮಾಡುವ ಲ್ಯಾನ್ಸೆಟ್ ಜರ್ನಲ್‍ನ ಮೊದಲ ಅಧ್ಯಯನ ಇದಾಗಿದೆ.ಆರೋಗ್ಯ ದೃಷ್ಠಯಿಂದ ಜಾಗತಿಕವಾಗಿ ಆಲ್ಕೋಹಾಲ್ ಸೇವನೆಯ ವಯಸ್ಸು ಮತ್ತು ಸ್ಥಳವನ್ನು ಆಧರಿಸಿರಬೇಕು ಎಂದು ಶಿಫಾರಸುಗಳಲ್ಲಿ ಸೂಚಿಸಲಾಗಿದೆ.

ವಿಶೇಷವಾಗಿ 15-39 ವರ್ಷ ವಯಸ್ಸಿನ ಪುರುಷರಿಗೆ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಗುರಿಪಡಿಸಬೇಕಾಗಿದ್ದು ಇಲ್ಲದಿದ್ದರೆ ವಿಶ್ವಾದ್ಯಂತ ಹಾನಿಕಾರಕ ಆಲ್ಕೊಹಾಲ್ ಸೇವನೆಯ ಅಪಾಯವನ್ನು ಎದುರಿಸಬೇಕಾಗುತ್ತದೆ ಎಮದು ಪ್ರಕಟವಾದ ವರದಿಯಲ್ಲಿ ಎಚ್ಚರಿಸಲಾಗಿದೆ.

ಸುಮಾರು 40 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರು ಆರೋಗ್ಯ ಪರಿಸ್ಥಿತಿಗಳ ಆಧಾರವಿಲ್ಲದೆ ಸಣ್ಣ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವನೆ ಕೆಲವು ಪ್ರಯೋಜನಗಳನ್ನು ನೋಡಬಹುದು ಎಂದು ಅಧ್ಯಯನವು ಸೂಚಿಸುತ್ತದೆ –
ದಿನಕ್ಕೆ ಒಂದು ಮತ್ತು ಎರಡು ಭಾರಿ ಕಡಿಮೆ ಮದ್ಯಪಾನೀಯ ಹೃದಯರಕ್ತನಾಳದ ಕಾಯಿಲೆ, ಪಾಶ್ರ್ವವಾಯು ಮತ್ತು ಮಧುಮೇಹದಲ್ಲಿ ಕಡಿಮೆ ಅಪಾಯವಿರುತ್ತದೆ ಎಂದು ಹೇಳಿದೆ.

ಪ್ರಸ್ತುತ 204 ದೇಶಗಳಲ್ಲಿ ಆಲ್ಕೋಹಾಲ್ ಬಳಕೆಯ ಅಂದಾಜುಗಳನ್ನು ಬಳಸಿಕೊಂಡು, 2020ರಲ್ಲಿ 1.34 ಶತಕೋಟಿ ಜನರು ಅಪಾಯ ಅತಿ ಹೆಚ್ಚು ,ಕಳಪೆ ಪಾನೀಯದಿಂದ ಸೇವಿಸಿ ಆರೋಗ್ಯ ಕಡೆಸಿಕೊಂಡಿದ್ದಾರೆ ಎಂದು ಸಂಶೋಧಕರು ಲೆಕ್ಕ ಹಾಕಿದ್ದಾರೆ.

ಪ್ರತಿ ಪ್ರದೇಶದಲ್ಲಿ, ಅಸುರಕ್ಷಿತ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವಿಸುವ ಜನಸಂಖ್ಯೆಯ ದೊಡ್ಡ ಭಾಗವು 15-39 ವರ್ಷ ವಯಸ್ಸಿನ ಪುರುಷರಿದ್ದಾರೆ ಈ ವಯಸ್ಸಿನವರಿಗೆ, ಮದ್ಯಪಾನವು ಯಾವುದೇ ಆರೋಗ್ಯ ಪ್ರಯೋಜನಗಳನ್ನು ನೀಡುವುದಿಲ್ಲ ಬದಲಾಗಿ ಅನೇಕ ಆರೋಗ್ಯ ಅಪಾಯಗಳನ್ನು ಎದುರಿಸಬೇಕಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಮೋಟಾರು ವಾಹನ ಅಪಘಾತಗಳು, ಆತ್ಮಹತ್ಯೆಗಳು ಮತ್ತು ಕೊಲೆಗಳಲ್ಲಿ ಸುಮಾರು ಶೇ.60ರಷ್ಟು ಈ ವಯಸ್ಸಿನ ಜನರು ಆಲ್ಕೋಹಾಲ ಸೇವಿಸಿದವರಾಗಿದ್ದಾರೆ. ಯುವಕರು ಕುಡಿಯಬಾರದು, ಆದರೆ ವಯಸ್ಸಾದವರು ಸಣ್ಣ ಪ್ರಮಾಣದಲ್ಲಿ ಕುಡಿಯುವುದರಿಂದ ಪ್ರಯೋಜನ ಪಡೆಯಬಹುದು ಎಂದು ಅಧ್ಯಯನದ ಹಿರಿಯ ಲೇಖಕಿ ವಾಷಿಂಗ್ಟನ್ ವಿಶ್ವವಿದ್ಯಾಲಯದ ಆರೋಗ್ಯ ಮೆಟ್ರಿಕ್ಸï ಮತ್ತು ಮೌಲ್ಯಮಾಪನ ಸಂಸ್ಥೆಯ ಪ್ರೊಫೆಸರ್‍ಎಮ್ಯಾನುಯೆಲಾ ಗಕಿಡೌ ಹೇಳಿದ್ದಾರೆ.

ಯುವ ವಯಸ್ಕರು ಮದ್ಯಪಾನದಿಂದ ದೂರವಿರುತ್ತಾರೆ ಎಂದು ಯೋಚಿಸುವುದು ವಾಸ್ತವಿಕವಲ್ಲದಿದ್ದರೂ, ಇತ್ತೀಚಿನ ಪುರಾವೆಗಳು ಆತಂಕ ಮೂಡಿಸುತ್ತದೆ ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

ಹೃದಯರಕ್ತನಾಳದ ಕಾಯಿಲೆಗಳು ಮತ್ತು ಕ್ಯಾನ್ಸರ್ ಸೇರಿದಂತೆ 22 ಆರೋಗ್ಯ ವ್ಯತ್ಯಯ ಆಲ್ಕೊಹಾಲ್ ಸೇವನೆಯ ಅಪಾಯವಿದೆ. ಯಾವುದೇ ಆಲ್ಕೋಹಾಲ್ ಸೇವಿಸದ ವ್ಯಕ್ತಿಗೆ ಹೋಲಿಸಿ ಅವರ ಆರೋಗ್ಯ ಅಪಾಯವನ್ನು ಆಂದಾಜಿಸಲಾಗಿದೆ. ಅಂತೆಯೇ ಒಬ್ಬ ವ್ಯಕ್ತಿಯು ಎಷ್ಟು ಆಲ್ಕೋಹಾಲ್ ಕುಡಿಯಬಹುದು ಎಂದು ಅಧ್ಯಯನವು ಅಂದಾಜು ಮಾಡಿದೆ. ತುರ್ತಾಗಿ 15-39 ವರ್ಷ ವಯಸ್ಸಿನ ಜನರಿಗೆ ಆಲ್ಕೋಹಾಲ್‍ನಿಂದ ಆರೋಗ್ಯದ ನಷ್ಟದ ಅಪಾಯ ತಿಳಿಸಿ ಜಾಗೃತಿ ಮೂಡಿಸಬೇಕಾಗಿದೆ ಎಂದು ತಿಳಿಸಿದೆ.

Articles You Might Like

Share This Article