ಯುವಕರಿಗೆ ಕೋವಿಡ್ ಲಸಿಕೆ, ಮೋದಿ ಸಂತಸ

Social Share

ನವದೆಹಲಿ, ಜ.19- ದೇಶದ ಅರ್ಧಕ್ಕೂ ಅಕ 15-18ರ ವಯೋಮಾನದ ಯುವಜನತೆ ತಮ್ಮ ಪ್ರಥಮ ಡೋಸ್ ಲಸಿಕೆ ಪಡೆದಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಯುವ ಮತ್ತು ಯೌವನಭರಿತ ಭಾರತವು ಪಥದರ್ಶನ ಮಾಡುತ್ತಿದೆ ಎಂದು ಹೇಳಿದ್ದಾರೆ.  ಕೋವಿಡ್-19ರ ಸಂಬಂಧಿತ ಎಲ್ಲ ಶಿಷ್ಟಾಚಾರಗಳ ಪಾಲನೆ ಅತಿ ಮುಖ್ಯ ಎಂದು ಆವರು ತಿಳಿಸಿದ್ದಾರೆ.
ಕಿರಿಯರು ಮತ್ತು ಯುವಕರಿಂದ ತುಂಬಿರುವ ಭಾರತವು ಮಾರ್ಗ ತೋರಿಸುತ್ತಿದೆ. ಇದು ಪ್ರೋತ್ಸಾಹದಾಯಕ ಸುದ್ದಿಯಾಗಿದೆ. ನಾವು ಇದೇ ವೇಗವನ್ನು ಕಾಪಾಡಿಕೊಳ್ಳೋಣ. ನಾವು ಲಸಿಕೆ ಹಾಕಿಸುವುದು ಮತ್ತು ಎಲ್ಲ ಕೋವಿಡ್-19ರ ಸಂಬಂಧಿತ ಶಿಷ್ಟಾಚಾರಗಳನ್ನು ಪಾಲಿಸುವುದು ಪ್ರಮುಖ ವಿಚಾರವಾಗಿದೆ. ನಾವೆಲ್ಲರೂ ಒಟ್ಟಾಗಿ ಈ ಸಾಂಕ್ರಾಮಿಕದ ಪಿಡುಗಿನ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಮೋದಿ ಟ್ವಿಟ್ ಮಾಡಿದ್ದಾರೆ.
ಆರೋಗ್ಯ ಸಚಿವ ಮನ್‍ಸುಖ್ ಮಾಂಡವೀಯ ಅವರು ಇದು ಭಾರತದ ಕೋವಿಡ್ ವಿರುದ್ಧದ ಹೋರಾಟಕ್ಕೆ ಬೃಹತ್ ದಿನ. ಇಂದು 15 ರಿಂದ 18ರ ನಡುವಿನ ವಯೋಮಾನದ ಶೇ.50ಕ್ಕೂ ಅಧಿಕ ಯುವಕರು ಪ್ರಥಮ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಮಾಡಿದ್ದ ಟ್ವಿಟ್‍ಗೆ ಮೋದಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

Articles You Might Like

Share This Article