ಕಾಂಗ್ರೆಸ್ ಹಿರಿಯ ನಾಯಕರ ಸಾಧನೆಗಳ ಪರಿಚಯಿಸುವ ಛಾಯಾಚಿತ್ರ ಪ್ರದರ್ಶನ

Spread the love

ಬೆಂಗಳೂರು, ಡಿ.4- ಯುವ ಪೀಳಿಗೆಗೆ ಕಾಂಗ್ರೆಸ್‍ನ ಹಿರಿಯ ನಾಯಕರುಗಳ ಜೀವನ ಮತ್ತು ಸಾಧನೆಗಳ ಪರಿಚಯಿಸುವ ಛಾಯಾಚಿತ್ರ ಪ್ರದರ್ಶನವನ್ನು ಯುವ ಕಾಂಗ್ರೆಸ್ ಆಯೋಜಿಸಿದೆ. ಬೆಂಗಳೂರಿನಲ್ಲಿಂದು ರೇಸ್‍ಕೋರ್ಸ್ ರಸ್ತೆಯಲ್ಲಿ ರುವ ಕಾಂಗ್ರೆಸ್ ಭವನದಲ್ಲಿ ಇಂದಿರಾಗಾಂಧಿ ಜೀವನ ಚರಿತ್ರೆ ಆಧಾರಿತ ಛಾಯಾಚಿತ್ರ ಪ್ರದರ್ಶನವನ್ನು ಸಂಸದ ಡಿ.ಕೆ.ಸುರೇಶ್, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ವಿ.ಶ್ರೀನಿವಾಸ್ ಅವರು, ಸ್ವಾತಂತ್ರ್ಯ ಸಂದರ್ಭದಲ್ಲಿ ದೇಶದಲ್ಲಿ ಸೂಜಿ ಕೂಡ ಉತ್ಪಾದನೆ ಯಾಗುತ್ತಿರಲಿಲ್ಲ. ಏನು ಇಲ್ಲದ ಕಾಲದಲ್ಲಿ ದೇಶವನ್ನು ಕಟ್ಟಿ ಬೆಳೆಸಿದ ಕೀರ್ತಿ ಕಾಂಗ್ರೆಸಿಗರಿಗೆ ಸೇರಿದೆ. ಸ್ವತಂತ್ರ ಹೋರಾಟದಲ್ಲೂ ಕಾಂಗ್ರೆಸಿಗರ ಪಾತ್ರ ಮಹತ್ವದ್ದು.

ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್, ಮೌಲಾನಾ ಆಜಾದ್, ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರುಗಳ ಕೊಡುಗೆ ಮತ್ತು ಜೀವನ ಚರಿತ್ರ ಆಧಾರಿತ ಛಾಯಾಚಿತ್ರ ಪ್ರದರ್ಶನವನ್ನು ದೇಶದ 3300 ಸ್ಥಳಗಳಲ್ಲಿ ಆಯೋಜಿಸಲಾಗಿದೆ.

ಬೆಂಗಳೂರಿನಲ್ಲಿ ಏರ್ಪಡಿಸಿರುವ ಪ್ರದರ್ಶನಕ್ಕೆ 50,000 ಮಂದಿ ಭೇಟಿ ನೀಡುವ ನಿರೀಕ್ಷೆ ಇದೆ ಎಂದರು. ಸ್ವತಂತ್ರ ಹೋರಾಟಕ್ಕೆ ಯಾವುದೇ ಕೊಡುಗೆ ನೀಡದ ಬಿಜೆಪಿ ಮತ್ತು ಆರ್‍ಎಸ್‍ಎಸ್‍ಗರು ನಕಲಿ ದೇಶಭಕ್ತಿಯ ಪ್ರಮಾಣ ಪತ್ರ ನೀಡುತ್ತಿದ್ದಾರೆ. ಇದಕ್ಕೆ ಎದುರಾಗಿ ಕಾಂಗ್ರೆಸ್ ನಮ್ಮ ಇತಿಹಾಸವನ್ನು ಯುವ ಪೀಳಿಗೆಗೆ ಮನವರಿಕೆ ಮಾಡಿಕೊಡಲಿದೆ ಎಂದು ಹೇಳಿದರು.

Facebook Comments