ವಲಸೆ ಕಾರ್ಮಿಕರಲ್ಲಿ ಭಯ ಹುಟ್ಟಿಸಿದ್ದ ಯುಟ್ಯೂಬರ್ ಶರಣಾಗತಿ

Social Share

ಪಾಟ್ನಾ,ಮಾ.18- ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಲಾಗುತ್ತಿದೆ ಎಂದು ಬಿಂಬಿಸುವ ಸುಳ್ಳು ಮಾಹಿತಿಯನ್ನು ನಕಲಿ ವಿಡಿಯೋಗಳ ಮೂಲಕ ಹರಡಿ ಭಯದ ವಾತಾವರಣ ಸೃಷ್ಟಿಸಿದ್ದ ಯು ಟ್ಯೂಬರ್ ಇಂದು ಬೆಳಗ್ಗೆ ಬಿಹಾರದ ಪೊಲೀಸರ ಮುಂದೆ ಶರಣಾಗಿದ್ದಾನೆ.

ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ದಕ್ಷಿಣ ರಾಜ್ಯಗಳನ್ನು ಬಿಟ್ಟು ತೊಲಗುವಂತೆ ಆಕ್ರೋಶ ವ್ಯಕ್ತ ಪಡಿಸಲಾಗುತ್ತಿದೆ ಎಂದು ವಿಡಿಯೋ ಮೂಲಕ ಸುಳ್ಳು ಸುದ್ದಿ ಬೀತ್ತರಿಸಿದ ಪ್ರಕರಣಕ್ಕೆ ಸಂಬಂಸಿದಂತೆ ಮಾರ್ಚ್ 6ರಂದು ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಬಂಸಲು ಬಿಹಾರದ ಪೊಲೀಸರು ಆರ್ಥಿಕ ಘಟಕದ ಅಧಿಕಾರಿಗಳನ್ನು ಒಳಗೊಂಡ ಆರು ತಂಡಗಳನ್ನು ರಚಿಸಿದ್ದರು.

ಕೋಲ್ಡ್ ಸ್ಟೋರೇಜ್ ಕುಸಿದು 14 ಮಂದಿ ಸಾವಿನ ಪ್ರಕರಣ, ಇಬ್ಬರು ಮಾಲೀಕರ ಬಂಧನ

ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಮಾಡುವ ಜೊತೆಗೆ ಆರೋಪಿಗಳಿಗೆ ಸಂಬಂಧಿಸಿದಂತೆ ಆಸ್ತಿಗಳನ್ನು ಜಪ್ತಿ ಮಾಡಲು ಪೊಲೀಸರು ಮುಂದಾಗಿದ್ದರು. ಇದರಿಂದ ಆತಂಕಗೊಂಡ ಆರೋಪಿ ಮನೀಶ್ ಕಶ್ಯಪ್ ಶನಿವಾರ ಪಶ್ಚಿಮ ಚಂಪಾರಣ್ ಜಿಲ್ಲೆಯ ಜಗದೀಶ್‍ಪುರ ಪೊಲೀಸ್ ಠಾಣೆಯಲ್ಲಿ ಕಾನೂನು ಜಾರಿಗಾರರ ಮುಂದೆ ಶರಣಾಗಿದ್ದಾರೆ. ಈವರೆಗೂ ಕಶ್ಯಪ್‍ಗೆ ಸಂಬಂಧಿಸಿದ ನಾಲ್ಕು ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ.

ಪೊಲೀಸರ ಆರು ತಂಡಗಳು ಪಾಟ್ನಾ ಮತ್ತು ಚಂಪಾರಣ್ ಪೊಲೀಸರೊಂದಿಗೆ ನಿನ್ನೆಯಿಂ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ ಶೋಸಿದ್ದರು. ಮೊದಲ ಎಫ್‍ಐಆರ್‍ನ ತನಿಖೆಗೆ ಸಂಬಂಧಿಸಿದಂತೆ ಈಗಾಗಲೇ ಜಮುವಿನಲ್ಲಿ ಅಮನ್ ಕುಮಾರ್ ಅವರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಅಮನ್ ಕುಮಾರ್, ಮನೀಶ್ ಕಶ್ಯಪ್ ಪ್ರಮುಖ ಆರೋಪಿಗಳಾಗಿದ್ದರು. ಉಳಿದಂತೆ ರಾಕೇಶ್ ತಿವಾರಿ, ಯುವರಾಜ್ ಸಿಂಗ್ ರಜಪೂತ್ ಅವರ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಆರೋಪಿಗಳು ತಮ್ಮ ಯು ಟ್ಯೂಬ್‍ನಲ್ಲಿ 30ಕ್ಕೂ ಹೆಚ್ಚು ನಕಲಿ ವಿಡಿಯೋಗಳನ್ನು ಪೋಸ್ಟ್ ಮಾಡಿ ಭೀತಿ ಹರಡುವ ಯತ್ನ ನಡೆಸಿದ್ದರು. ತಮಿಳುನಾಡಿನಲ್ಲೂ ಪೆಪೋಲೀಸರು ಆರೋಪಿಗಳ ವಿರುದ್ಧ 13 ಪ್ರಕರಣಗಳನ್ನು ದಾಖಲಿಸಿದ್ದರು.

ಹೌರಾ-ನವದೆಹಲಿ ಎಕ್ಸ್ ಪ್ರೆಸ್ ರೈಲು ಹರಿದು ಮೂವರ ದೇಹ ಛಿದ್ರ

ಬಿಹಾರ ಮತ್ತು ತಮಿಳುನಾಡು ಪೋಲೀಸರು ಸಮನ್ವಯತೆ ಸಾಧಿಸಲು ಪರಸ್ಪರ ತಂಡಗಳು ರವಾನೆಯಾಗಿದ್ದವು.

YouTuber, Manish Kashyap, surrenders, Bihar, police,

Articles You Might Like

Share This Article