ನವದೆಹಲಿ,ನ.30- ಭಾರತೀಯ ಸೇನಾ ಯೋಧರು ಅಮೆರಿಕಾ ಯೋಧರೊಂದಿಗೆ ಸಿನಿಮಾ ಹೀರೋಗಳಂತೆ ಪೈಟ್ ಮಾಡುವ ದೃಶ್ಯಗಳು ವೈರಲ್ ಆಗಿದೆ.
ಶಸ್ತ್ರಾಸ್ತ್ರಗಳನ್ನು ಬಳಸದೆ ಅಮೆರಿಕಾ ಯೋಧರೊಂದಿಗೆ ತಮ್ಮ ಕೈ ಚಳಕ ಮಾತ್ರದಿಂದಲೇ ಭಾರತೀಯ ಯೋಧರು ಫೈಟ್ ಮಾಡುತ್ತಿರುವ ದೃಶ್ಯಗಳಿಗೆ ಭಾರತೀಯರು ಫುಲ್ ಫಿದಾ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ದೃಶ್ಯಗಳನ್ನು ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿ ಲೈಕ್ ಮಾಡಿದ್ದಾರೆ.
It is mesmerising to watch #Assam Regiment soldiers doing hand to hand combat. As an American soldier tells me, “I don’t want to get into this combat with these men”. #YudhAbhyas#IndianArmy#TheSaviours pic.twitter.com/2ibR42C3zz
— The Saviours (@TheSaviours3) November 30, 2022
ಉತ್ತರಾಖಂಡದ ಔಲಿಯಲ್ಲಿ ಅಮೆರಿಕಾ-ಭಾರತ ಯೋಧರ ನಡುವಿನ 18ನೇ ವರ್ಷದ ವಾರ್ಷಿಕ ತರಬೇತಿ ಸಂದರ್ಭದಲ್ಲಿ ಉಭಯ ದೇಶಗಳ ಸೈನಿಕರು ಮಾಡಿರುವ ಫೈಟ್ ಇದೀಗ ಬಾರಿ ಸದ್ದು ಮಾಡುತ್ತಿದೆ.
ಬಸ್ – ಟ್ರಕ್ ನಡುವೆ ಭೀಕರ ಅಪಘಾತ: ಆರು ಮಂದಿ ಸಾವು
ಸೈನಿಕರು ಪರಸ್ಪರ ಫೈಟ್ ಮಾಡಿರುವ ವೀಡಿಯೋ ವೈರಲ್ ಆಗಿರುವುದರ ಜೊತೆಗೆ ಶತ್ರು ರಾಷ್ಟ್ರಗಳು ರವಾನಿಸುವ ಡ್ರೋನ್‍ಗಳನ್ನು ಬೇಟೆಯಾಡುವ ಚಾಣಕ್ಷತೆ ಪಡೆದುಕೊಳ್ಳಲು ಸೇನಾ ಸೈನಿಕರು ಗಾಳಿಪಟದೊಂದಿಗೆ ಅಭ್ಯಾಸ ಮಾಡುವುದನ್ನು ಕಾಣಬಹುದಾಗಿದೆ.
YudhAbhyas, #IndianArmy, #IndiaUS, #joint, #military, #exercise, #Uttarakhand,