ಮೋಸ್ಟ್ ವಾಂಟೆಡ್ ಭಯೋತ್ಪಾದಕ ಜಾಕೀರ್ ಮುಸಾ ಖತಂ, ಕಾಶ್ಮೀರದಲ್ಲಿ ಹೈಅಲರ್ಟ್

Spread the love

ಶ್ರೀನಗರ, ಮೇ 24- ಹಲವು ವಿಧ್ವಂಸಕ ಕೃತ್ಯಗಳಿಗೆ ಕಾರಣನಾಗಿದ್ದ ಕುಪ್ರಸಿದ್ಧ ಮತ್ತು ಮೋಸ್ಟ್ ವಾಂಟೆಡ್ ಭಯೋತ್ಪಾದಕ ಜಾಕೀರ್ ಮುಸಾ ಕಾಶ್ಮೀರ ಕಣಿವೆಯಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಹತನಾಗಿದ್ದಾನೆ. ಈ ಕಾರ್ಯಾಚರಣೆಯೊಂದಿಗೆ ಮುಂದೆ ನಡೆಯಲಿದ್ದ ಭಾರೀ ಕೃತ್ಯ ತಪ್ಪಿದಂತಾಗಿದ್ದು, ಮೃತನ ಬಳಿ ಇದ್ದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕುಖ್ಯಾತ ಅಲ್ ಖೈದಾ ಭಯೋತ್ಪಾದನೆ ಸಂಘಟನೆ ಜತೆ ಸೇರಿರುವ ನಿಷೇದಿತ ಅನ್ಸರ್ ಘಾಝ್‍ವತ್-ಉಲ್-ಹಿಂದ್ ಬಣದ ಮುಖ್ಯಸ್ಥನಾಗಿದ್ದ ಮುಸಾ, ದಕ್ಷಿಣ ಕಾಶ್ಮೀರದ ತ್ರಾಲ್‍ನಲ್ಲಿ ನಿನ್ನೆ ರಾತ್ರಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಹತನಾಗಿದ್ದಾರೆ ಎಂದು ಸೇನಾಧಿಕಾರಿಗಳು ಇಂದು ದೃಢಪಡಿಸಿದ್ಧಾರೆ.

ಪುಲ್ಮಾಮಾ ಜಿಲ್ಲೆಯ ತ್ರಾಲ್‍ನ ದಾದ್‍ಸಾರಾ ಪ್ರದೇಶದಲ್ಲಿ ನಿನ್ನೆ ರಾತ್ರಿ ನಡೆದ ಎನ್‍ಕೌಂಟರ್‍ನಲ್ಲಿ ಉಗ್ರಗಾಮಿಯೊಬ್ಬ ಹತನಾದ. ಮೃತನನ್ನು ಪರಿಶೀಲಿಸಲಾಗಿ ಆತ ಜಾಕೀರ್ ಮುಸಾ ಎಂಬುದು ದೃಢಪಟ್ಟಿದೆ ಎಂದು ರಕ್ಷಣಾ ಇಲಾಖೆ ವಕ್ತಾರ ರಾಜೇಶ್ ಕಾಲಿಯಾ ಹೇಳಿದ್ದಾರೆ.

ಹತ ಉಗ್ರಗಾಮಿ ನಾಯಕನ ಬಳಿ ಇದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ತೋಟಾಗಳು ಮತ್ತು ಸ್ಪೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತ್ರಾಲ್‍ನ ದಾದ್‍ಸಾರಾ ಪ್ರದೇಶದಲ್ಲಿ ಉಗ್ರರು ಅತಿಟ್ಟುಕೊಂಡಿದ್ದು, ಧ್ವಂಸಕ ಕೃತ್ಯಕ್ಕೆ ಸಂಚು ನಡೆಸುತ್ತಿದೆ ಎಂಬ ಖಚಿತ ಮಾತಿ ಆಧರಿಸಿ ಯೋಧರು ನಿನ್ನೆ ಸಂಜೆುಂದಲೇ ಆ ಪ್ರದೇಶವನ್ನು ಸುತ್ತುವರೆದು ಶರಣಾಗುವಂತೆ ಉಗ್ರಗಾುಗಳಿಗೆ ಸೂಚಿಸಿದ್ದರು. ಆದರೆ ಉಗ್ರರು ಶರಣಾಗುವ ಬದಲು ಲಾಂಚರ್‍ನಿಂದ ಯೋಧರತ್ತ ಗ್ರೆನೇಡ್‍ಗಳನ್ನು ಎಸೆಯಲು ಆರಂಭಿಸಿ ಕತ್ತಲಲ್ಲಿ ಪರಾರಿಯಾಗಲು ಯತ್ನಿಸಿದರು.

ಭಯೋತ್ಪಾದಕರು ತಪ್ಪಿಸಿಕೊಳ್ಳುವುದನ್ನು ತಡೆಯಲು ಹೆಚ್ಚುವರಿ ಭದ್ರತಾ ಪಡೆಗಳನ್ನು ಸ್ಥಳಕ್ಕೆ ಕರೆಸಲಾಯಿತು. ನಂತರ ನಡೆದ ಗುಂಡಿನ ಕಾಳಗದಲ್ಲಿ ಮುಸಾ ಹತನಾದ. ಪರಾರಿಯಾಗಿರುವ ಇತರ ಉಗ್ರರಿಗಾಗಿ ಆ ಪ್ರದೇಶದಲ್ಲಿ ತೀವ್ರ ಶೋಧ ಮುಂದುವರಿದಿದೆ.

ಸೇನಾ ಕಾರ್ಯಾಚರಣೆಗೆ ಅಡ್ಡಿ:
ಇದೇ ಸಂದರ್ಭದಲ್ಲಿ ಗುರುವಾರ ರಾತ್ರಿ ಶೋಪಿಯಾನ್, ಪುಲ್ವಾಮಾ, ಅವಂತಿಪೊರ ಮತ್ತು ಶ್ರೀನಗರದಲ್ಲಿ ಪ್ರತ್ಯೇಕತಾವಾದಿಗಳು ಮತ್ತು ಉಗ್ರರ ಪರ ನಿಲುವು ಹೊಂದಿರುವ ಮಂದಿ ಹಠಾತ್ ಪ್ರತಿಭಟನೆಗಳನ್ನು ನಡೆಸಿ ಮುಸಾ ಪರ ಘೋಷಣೆಗಳು ಮತ್ತು ಸೇನೆ ವಿರುದ್ಧ ಧಿಕ್ಕಾರಗಳನ್ನು ಕೂಗಿದರು.

ಉದ್ರಿಕ್ತ ಗುಂಪನ್ನು ಪ್ರತಿರೋಧಿಸಲು ಕಣಿವೆ ರಾಜ್ಯದ ಕೆಲವೆಡೆ ಕಫ್ರ್ಯೂ ಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ಧಾರೆ. ಪುಲ್ಮಾಮಾ, ಶ್ರೀನಗರ, ಅನಂತನಾಗ್ ಮತ್ತು ಬದ್ಗಂ ಜಿಲ್ಲೆಗಳಲ್ಲಿ ಇಂದು ಕೂಡ ನಿರ್ಬಂಧ ವಿಧಿಸಲಾಗಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮೊಬೈಲ್ ಇಂಟರ್‍ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

Facebook Comments