ಯಾವುದೇ ಕಾರಣಕ್ಕೂ 3ನೇ ಮಹಾಯುದ್ಧ ನಡೆಯಲ್ಲ: ಝೆಲೆನ್​ಕ್ಸಿ

Social Share

ಲಾಸ್‍ಏಂಜಲಿಸ್,ಜ.11- ಯಾವುದೇ ಕಾರಣಕ್ಕೂ ಮೂರನೇ ವಿಶ್ವ ಯುದ್ಧ ನಡೆಯುವುದಿಲ್ಲ ಎಂದು ಉಕ್ರೇನ್ ಆಧ್ಯಕ್ಷ ವ್ಲಾದಿಮಿರ್ ಝೆಲೆನ್ಕ್ಸಿ ಭವಿಷ್ಯ ನುಡಿದಿದ್ದಾರೆ. ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೊದಲ ವಿಶ್ವ ಯುದ್ಧದಲ್ಲಿ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಅದೇ ರೀತಿ ಎರಡನೆ ಮಹಾ ಯುದ್ಧದಲ್ಲೂ ಸಾಕಷ್ಟು ಸಾವು-ನೋವು ಸಂಭವಿಸಿದೆ ಹೀಗಾಗಿ ಯಾವುದೇ ಕಾರಣಕ್ಕೂ ಮೂರನೇ ಮಹಾ ಯುದ್ಧ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ವಿಶ್ವದ ಬಲಿಷ್ಠ ರಾಷ್ಟ್ರಗಳ ಸಹಾಯದಿಂದ ರಷ್ಯಾ ನಮ್ಮ ದೇಶದ ಮೇಲೆ ನಡೆಸುತ್ತಿರುವ ದಾಳಿಯನ್ನು ಶೀಘ್ರವೇ ನಿಲ್ಲಿಸಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಪೌರ ಕಾರ್ಮಿಕರ ಕೈಗೆ ಬಂತು ಹೈಟೆಕ್ ಕಸ ಗುಡಿಸುವ ಯಂತ್ರಗಳು

1943ರ ಎರಡನೆ ಮಹಾಯುದ್ಧದ ಸಂದರ್ಭದಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಆರಂಭವಾಯಿತು. ಈಗ 2023 ಈಗಲೂ ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ನಡೆಯುತ್ತಿದೆ. ಈ ಯುದ್ಧದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಈಗಾಗಲೆ ಎಲ್ಲರಿಗೂ ತಿಳಿದಿರುವ ವಿಚಾರ ಎಂದರು.

ಇದೇ ಸಂದರ್ಭದಲ್ಲಿ ಅವರು, ಉಕ್ರೇನ್‍ನ ಸ್ವಾತಂತ್ರ್ಯವನ್ನು ಬೆಂಬಲಿಸಿದವರಿಗೆ ಧನ್ಯವಾದ ಅರ್ಪಿಸಿದರು, ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಬದುಕುವ ಹಕ್ಕಿಗಾಗಿ, ಪ್ರೀತಿಸುವ ಹಕ್ಕಿಗಾಗಿ ನಮ್ಮ ಸಾಮಾನ್ಯ ಹೋರಾಟ ಮುಂದುವರೆಯುತ್ತದೆ ಎಂದು ಅವರು ಘೋಷಿಸಿದರು.

Zelensky, Golden Globes, third World War,

Articles You Might Like

Share This Article