ಹುಟ್ಟುಹಬ್ಬದ ಕೇಕ್ ತಿಂದ 10 ವರ್ಷದ ಬಾಲಕಿ ಸಾವು

ನವದೆಹಲಿ, ಮಾ.31- ಪಂಜಾಬ್‍ನ ಪಟಿಯಾಲಾದಲ್ಲಿ ಹತ್ತು ವರ್ಷದ ಬಾಲಕಿಯೊಬ್ಬಳು ತನ್ನ ಹುಟ್ಟುಹಬ್ಬದ ಕೇಕ್ ತಿಂದ ನಂತರ ಶಂಕಿತ ಆಹಾರ ವಿಷದಿಂದಾಗಿ ಸಾವನ್ನಪ್ಪಿದ್ದಾಳೆ. ಕುಟುಂಬದವರ ಪ್ರಕಾರ ಮಾನ್ವಿ ಮತ್ತು ಆಕೆಯ ಸಹೋದರಿ ಹುಟ್ಟುಹಬ್ಬ ಆಚರಣೆಗಾಗಿ ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿ ತರಿಸಲಾಗಿದ್ದ ಕೇಕ್ ಅನ್ನು ತಿಂದಿದ್ದರು. ರಾತ್ರಿ ಅಸ್ವಸ್ಥರಾಗಿದ್ದರು. ವಾಂತಿಭೇದಿ ನಿಯಂತ್ರಣಕ್ಕೆ ಬಾರದೆ ನಿತ್ರಾಣರಾದ ಕಾರಣಕ್ಕೆ ಮುಂಜಾನೆ 3 ಗಂಟೆಗೆ ಅವರಿಬ್ಬರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾನ್ವಿ ತಾತ ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಮಾನ್ವಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಕಿರಿಯ … Continue reading ಹುಟ್ಟುಹಬ್ಬದ ಕೇಕ್ ತಿಂದ 10 ವರ್ಷದ ಬಾಲಕಿ ಸಾವು