Friday, May 3, 2024
Homeರಾಷ್ಟ್ರೀಯಹುಟ್ಟುಹಬ್ಬದ ಕೇಕ್ ತಿಂದ 10 ವರ್ಷದ ಬಾಲಕಿ ಸಾವು

ಹುಟ್ಟುಹಬ್ಬದ ಕೇಕ್ ತಿಂದ 10 ವರ್ಷದ ಬಾಲಕಿ ಸಾವು

ನವದೆಹಲಿ, ಮಾ.31- ಪಂಜಾಬ್‍ನ ಪಟಿಯಾಲಾದಲ್ಲಿ ಹತ್ತು ವರ್ಷದ ಬಾಲಕಿಯೊಬ್ಬಳು ತನ್ನ ಹುಟ್ಟುಹಬ್ಬದ ಕೇಕ್ ತಿಂದ ನಂತರ ಶಂಕಿತ ಆಹಾರ ವಿಷದಿಂದಾಗಿ ಸಾವನ್ನಪ್ಪಿದ್ದಾಳೆ.

ಕುಟುಂಬದವರ ಪ್ರಕಾರ ಮಾನ್ವಿ ಮತ್ತು ಆಕೆಯ ಸಹೋದರಿ ಹುಟ್ಟುಹಬ್ಬ ಆಚರಣೆಗಾಗಿ ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿ ತರಿಸಲಾಗಿದ್ದ ಕೇಕ್ ಅನ್ನು ತಿಂದಿದ್ದರು. ರಾತ್ರಿ ಅಸ್ವಸ್ಥರಾಗಿದ್ದರು. ವಾಂತಿಭೇದಿ ನಿಯಂತ್ರಣಕ್ಕೆ ಬಾರದೆ ನಿತ್ರಾಣರಾದ ಕಾರಣಕ್ಕೆ ಮುಂಜಾನೆ 3 ಗಂಟೆಗೆ ಅವರಿಬ್ಬರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾನ್ವಿ ತಾತ ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಮಾನ್ವಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಕಿರಿಯ ಸಹೋದರಿ ತಕ್ಷಣ ವಾಂತಿ ಮಾಡಿಕೊಂಡಿದ್ದರಿಂದ ಬಹುಶಃ ಬದುಕುಳಿದಿರಬಹುದು ಎಂದು ಆಕೆಯ ಮನೆಯವರು ಹೇಳಿದ್ದಾರೆ. ಮಾನ್ವಿ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ.

ಕೇಕ್ ತಯಾರಿಸಿದವರ ವಿರುದ್ಧ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಹುಟ್ಟುಹಬ್ಬದ ಆಚರಣೆಯ ವಿಡಿಯೋದಲ್ಲಿ ಹುಡುಗಿಗೆ ಆಕೆಯ ಕುಟುಂಬ ಸದಸ್ಯರು ಕೇಕ್ ತಿನ್ನಿಸುತ್ತಿರುವುದನ್ನು ತೋರಿಸಲಾಗಿದೆ. ಕೇಕ್ ಮೂಲದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News