ಬಿಜೆಪಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಅಸಮರ್ಥತೆ ಕಾರಣ : ಓವೈಸಿ

ಕಚ್,ನ.26- ನಮ್ಮ ಪಕ್ಷ ಬಿಜೆಪಿ ಬಿ ಟೀಮ್ ಅಲ್ಲ. ಗುಜರಾತ್‍ನಲ್ಲಿ ಕೇಸರಿ ಪಕ್ಷ ನಿರಂತರವಾಗಿ ಆರಿಸಿ ಬರುತ್ತಿರಲು ನಮ್ಮ ಪಕ್ಷದ ಮತ ಕತ್ತರಿಸುವಿಕೆಯೆ ಕಾರಣ ಎಂಬ ಕಾಂಗ್ರೆಸ್ ಪಕ್ಷದ ಆರೋಪದಲ್ಲಿ ಯಾವುದೆ ಹುರುಳಿಲ್ಲ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಪಕ್ಷದಿಂದ ಕಾಂಗ್ರೆಸ್ ಸಾಂಪ್ರಾದಾಯಿಕ ಮತಗಳು ವಿಭಜನೆಯಾಗುತ್ತಿದೆ ಎಂಬ ಕಾಂಗ್ರೆಸ್ ಪಕ್ಷದ ಆರೋಪದಲ್ಲಿ ಹಾಸ್ಯಸ್ಪದವಾಗಿದೆ ಎಂದು ಅವರು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆಡಳಿತಾರೂಢ ಭಾರತೀಯ ಜನತಾ ಪಕ್ಷ ತನ್ನ […]

ಆಸ್ಟ್ರೇಲಿಯಾದಲ್ಲಿ ಮಹಿಳೆ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಭಾರತಿಯನ ಬಂಧನ

ನವದೆಹಲಿ,ನ.26- ಕಳೆದ 2018ರಲ್ಲಿ ನಾಯಿ ಬೊಗಳಿದ ವಿಚಾರಕ್ಕೆ ಆಸ್ಟ್ರೇಲಿಯಾದಲ್ಲಿ ಮಹಿಳೆಯೊಬ್ಬರನ್ನು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೊಳಗಾಗಿರುವ ವ್ಯಕ್ತಿಯನ್ನು ರಾಜ್ವಿಂದರ್ ಸಿಂಗ್(38) ಎಂದು ಗುರುತಿಸಲಾಗಿದೆ. 2018 ರಲ್ಲಿ ಕ್ವೀನ್ಸ್‍ಲ್ಯಾಂಡ್‍ನ ರಾಜ್ವಿಂದರ್‍ಸಿಂಗ್ ನಾಯಿ ಬೊಗಳಿದ ವಿಚಾರದಲ್ಲಿ 24 ವರ್ಷದ ತೋಯಾ ಕಾರ್ಡಿಂಗ್ಲೆ ಎಂಬ ಮಹಿಳಯನ್ನು ಹತ್ಯೆ ಮಾಡಿ ಅಲ್ಲಿಂದ ಭಾರತಕ್ಕೆ ವಾಪಸ್ಸಾಗಿ ತಲೆಮರೆಸಿಕೊಂಡಿದ್ದ.ಆರೋಪಿ ಬಂಧನಕ್ಕೆ ಆಸ್ಟ್ರೇಲಿಯಾ ಪೊಲೀಸರು ಒಂದು ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಬಹುಮಾನ ಘೋಷಿಸಿದ್ದರು. ರಾಜವಿಂದರ್ ಸಿಂಗ್ ತನ್ನ ಪತ್ನಿಯೊಂದಿಗೆ ಜಗಳವಾಡಿದ ನಂತರ […]

ಮುಂಬೈ ದಾಳಿ ನಡೆದು ಇಂದಿಗೆ 14 ವರ್ಷ

ಮುಂಬೈ,ನ.26- ಮುಂಬೈ ಭಯೋತ್ಪಾದಕ ದಾಳಿ ನಡೆದು ಇಂದಿಗೆ 14 ವರ್ಷಗಳಾಗಿದ್ದು, ಇಡೀ ದೇಶವೇ ಬೆಚ್ಚಿ ಬಿದ್ದಂತಹ ಘಟನೆಯ ಆ ಕಹಿ ನೆನಪು ಮರುಕಳಿಸಿದೆ. 2008ರ ನವೆಂಬರ್ 26ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದಿಂದ 10 ಮಂದಿ ಭಯೋತ್ಪಾದಕರು ಮುಂಬೈಗೆ ಆಗಮಿಸಿದ್ದರು. ಶಸ್ತ್ರಸಜ್ಜಿತರಾಗಿ ಬಂದಿದ್ದ ಉಗ್ರರು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್, ಓಬೆರಾಯ್ ಟ್ರೈಡೆಂಟ್ , ತಾಜ್‍ಮಹಲ್ ಪ್ಯಾಲೇಸ್ ಮತ್ತು ಟವರ್, ಲಿಯೋಪೋರ್ಡ್ ಕೆಫೆ, ಕಾಮಾಸ್ಪತ್ರೆ, ನಾರಿಮನ್ ಹೌಸ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ಘಟನೆಯಲ್ಲಿ 26 ಮಂದಿ […]

ಜೈಲಲ್ಲಿ AAP ಸಚಿವನ ದರ್ಬಾರ್ ಕುರಿತ ಮತ್ತೊಂದು ವಿಡಿಯೋ ರಿಲೀಸ್

ನವದೆಹಲಿ,ನ.26-ದೆಹಲಿಯ ಅಮ್ ಆದ್ಮಿ ಸರ್ಕಾರದ ಸಚಿವ ಸತ್ಯೇಂದ್ರ ಜೈನ್ ಜೈಲಿನಲ್ಲಿರುವ ನಡೆಸುತ್ತಿರುವ ಕಾರುಬಾರಿನ ಬಗ್ಗೆ ಬಿಜೆಪಿ ಶನಿವಾರ ಮತ್ತೊಂದು ವಿಡಿಯೋವನ್ನು ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಸತ್ಯೇಂದ್ರ ಜೈನ್ ಜೊತೆ ತಿಹಾರ್ ಜೈಲಿನ ಅಧೀಕ್ಷಕರು ಬಂದು ಮಾತನಾಡುತ್ತಿರುವುದು ಹಾಗೂ ಇತರರ ಜೊತೆ ಜೈನ್ ಮಿನಿ ಸಭೆಯನ್ನು ನಡೆಸಿರುವುದು ಸ್ಪಷ್ಟವಾಗಿದೆ. ಸಿಸಿಟಿವಿಯ ದೃಶ್ಯಾವಳಿಗಳು ಸೆಪ್ಟೆಂಬರ್ ತಿಂಗಳಿನ ಕಾಲಮಾನಕ್ಕೆ ಸೇರಿವೆ ಎಂದು ಹೇಳಲಾಗಿದೆ. ಜೈಲಿನಲ್ಲಿ ಸತ್ಯೇಂದ್ರ ಜೈನ್ ಅವರಿಗೆ ಐಷಾರಾಮಿ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಈ ಕಾರಣಕ್ಕಾಗಿ ಜೈಲಿನ ಅೀಧಿಕ್ಷಕ ಅಜಿತ್‍ಕುಮಾರ್ […]

ಮಹಾರಾಷ್ಟ್ರದ 42 ಗ್ರಾಮಗಳನ್ನು ಕರ್ನಾಟಕಕ್ಕೆ ಸೇರ್ಪಡೆ ಮಾಡಲು ನಿರ್ಣಯ

ಬೆಂಗಳೂರು,ನ.26- ಎಂಟು ದಿನದೊಳಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡದಿದ್ದರೆ ನಾವು ಕರ್ನಾಟಕಕ್ಕೆ ಸೇರ್ಪಡೆಯಾಗುತ್ತೇವೆ ಎಂದು ನೀರಾವರಿ ಹೋರಾಟ ಸಮಿತಿ ತೆಗೆದುಕೊಂಡಿರುವ ಕ್ರಮ ಮಹಾರಾಷ್ಟ್ರಕ್ಕೆ ತಿರುಗುಬಾಣವಾಗಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲ್ಲೂಕಿನ ಉಮದಿ ಗ್ರಾಮದಲ್ಲಿ ನೀರಾವರಿ ಹೋರಾಟ ಸಮಿತಿಯು ಶುಕ್ರವಾರ ತಡರಾತ್ರಿ ಸಭೆ ನಡೆಸಿದೆ. 8 ದಿನದೊಳಗೆ ಶಾಶ್ವತ ಕುಡಿಯುವ ನೀರು ಸೇರಿದಂತೆ ಬೇಡಿಕೆಯನ್ನು ಈಡೇರಿಸದಿದ್ದರೆ ಇಲ್ಲಿನ 42 ಗ್ರಾಮಗಳನ್ನು ಕರ್ನಾಟಕಕ್ಕೆ ಸೇರ್ಪಡೆ ಮಾಡುವ ನಿರ್ಣಯವನ್ನು ಸಹ ತೆಗೆದುಕೊಳ್ಳಲಾಗಿದೆ. ಜತ್, ಅಕಲಕೋಟೆ, ಕೊಲ್ಲಾಪುರ ಸೇರಿದಂತೆ ಸಾಂಗ್ಲಿ […]

ಛತ್ತಿಸ್‍ಗಡದಲ್ಲಿ ಮೂವರು ನಕ್ಸಲರ ಹತ್ಯೆ

ಬಿಜಾಪುರ್, ನ.26- ಛತ್ತೀಸ್‍ಗಡ ರಾಜ್ಯ ಬಿಜಾಪುರ ಜಿಲ್ಲೆಯ ಮಿರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಶೇಷ ತನಿಖಾ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ನಕ್ಸಲರು ಹತ್ಯೆಯಾಗಿದ್ದಾರೆ. ನಕ್ಸಲ್ ಬಾತ ಈ ಭಾಗದಲ್ಲಿ ಸಿಆರ್‍ಪಿಎಫ್, ಡಿಆರ್‍ಐ ಮತ್ತು ಎಸ್‍ಟಿಎಫ್ ಪಡೆಗಳು ಜಂಟಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದವು. ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುವ ವೇಳೆ ನಕ್ಸಲರು ಎದುರಾಗಿದ್ದು ಗುಂಡಿನ ಕಾಳಗದಲ್ಲಿ ಮೂವರು ಹತ್ಯೆಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಎಸ್.ಪಿ.ಆಂಜನೇಯ ವರ್ಸೆನಿ ತಿಳಿಸಿದ್ದಾರೆ. ಶೋಧ ಕಾರ್ಯಾಚರಣೆಯಲ್ಲಿ ಶಸ್ತ್ರಾಸ್ತ್ರಗಳನ್ನು ವಶ ಪಡಿಸಿಕೊಳ್ಳಲಾಗಿದೆ. […]

ಇತಿಹಾಸ ಮರು ರಚನೆಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ : ಅಮಿತ್ ಶಾ

ಬೆಂಗಳೂರು, ನ.25- ಇತಿಹಾಸ ಮರು ರಚನೆಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸವಾಲೆಸೆದಿದ್ದಾರೆ. ಈವರೆಗಿನ ತಿರುಚಲಾಗಿರುವ ಇತಿಹಾಸವನ್ನು ಮರು ರಚನೆ ಮಾಡುವ ಅಗತ್ಯವಿದೆ. ಅದಕ್ಕಾಗಿ ತಾಯಿನಾಡಿಗಾಗಿ ಹೋರಾಟ ಮಾಡಿದ 30 ಶ್ರೇಷ್ಠ ರಾಜರ ಮತ್ತು 300 ಧೀರೋತ್ತ ಯೋಧರ ಇತಿಹಾಸವನ್ನು ಹೊಸದಾಗಿ ಬರೆಯಬೇಕಿದೆ. ವೀರ್ ಲಚಿತ್ ಬರ್ಪುಖನ್ ಅವರು ಹೋರಾಟ ಮಾಡದೇ ಇದ್ದರೆ ಈಶಾನ್ಯ ಭಾಗ ಭಾರತದಲ್ಲಿ ಉಳಿಯುತ್ತಿರಲಿಲ್ಲ ಎಂದು ಪೌರಾಣಿಕ್ ಅಹೊಂ ಜನರಲ್ ಅವರ ಜನ್ಮ ವರ್ಷಾಚರಣೆಯ ವೇಳೆ […]

ಏಕನಾಥ್ ಶಿಂಧೆಗೆ ಕರ್ನಾಟಕ ಸಿಎಂ ವಿರುದ್ಧ ಮಾತನಾಡುವ ಧೈರ್ಯವಿಲ್ಲ: ಠಾಕ್ರೆ

ಮುಂಬೈ, ನ.25- ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆಗೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಮಾತನಾಡಲು ಧೈರ್ಯವಿಲ್ಲ ಎಂದು ಉದ್ದವ್ ಬಾಳಸಾಹೇಬ್ ಠಾಕ್ರೆ ಬಣದ ಶಿವಸೇನೆ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಲೇವಡಿ ಮಾಡಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಗಡಿ ಭಾಗದ ಗ್ರಾಮಗಳು ತಮಗೆ ಸೇರಬೇಕು ಎಂದು ಹೇಳಿಕೆ ನೀಡಿದ್ದಾರೆ.ಈ ಹೇಳಿಕೆ ಕುರಿತಂತೆ ಮಹಾರಾಷ್ಟ್ರದಲ್ಲಿ ರಾಜಕೀಯ ಕೆಸರೆರಚಾಟ ತೀವ್ರವಾಗಿದೆ. ಕರ್ನಾಟಕದ ಬಸ್‍ಗಳಿಗೆ ಕಲ್ಲು ತೂರಿ ಮರಾಠಿಗರ ಪುಂಡಾಟ ಉದ್ದವ್ ಠಾಕ್ರೆ ಅವರು ಪ್ರತಿಕ್ರಿಯೆ ನೀಡಿ, ಮಹಾರಾಷ್ಟ್ರ […]

ಕೇಜ್ರಿವಾಲ್ ಹತ್ಯೆಗೆ ಸಂಚು ಆರೋಪ, ತನಿಖೆಗೆ ಬಿಜೆಪಿ ಆಗ್ರಹ

ನವದೆಹಲಿ,ನ.25- ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಹತ್ಯೆಗೆ ಸಂಚು ನಡೆದಿದೆ ಎಂಬ ಆರೋಪ ಕುರಿತು ತನಿಖೆ ನಡೆಯಬೇಕಿದೆ ಎಂದು ಬಿಜೆಪಿ ಆಗ್ರಹಿಸಿದೆ. ಈ ಬಗ್ಗೆ ಬಿಜೆಪಿಯ ಸಂಸದ ಮನೋಜ್ ತಿವಾರಿ ತಿರುಗೇಟು ನೀಡಿದ್ದು, ಮುಖ್ಯಮಂತ್ರಿಯವರ ಭದ್ರತೆ ಕುರಿತಂತೆ ತಾವು ಆತಂಕಕ್ಕೆ ಒಳಗಾಗಿರುವುದಾಗಿ ವ್ಯಂಗ್ಯವಾಡಿದ್ದಾರೆ. ಇತ್ತೀಚಿನ ಭ್ರಷ್ಟಾಚಾರ ಪ್ರಕರಣಗಳು ಮತ್ತು ಪಾಲಿಕೆ ಚುನಾವಣೆ ಟಿಕೆಟ್ ಮಾರಾಟದಿಂದ ಆಮ್‍ಆದ್ಮಿ ಪಕ್ಷದ ಕಾರ್ಯಕರ್ತರು ಸಿಟ್ಟಾಗಿದ್ದಾರೆ. ಕೆಲವು ಹತ್ಯಾಚಾರ ಪ್ರಕರಣ, ಜೈಲಿನಲ್ಲಿ ಮಸಾಜ್ ಪ್ರಕರಣ ಸೇರಿದಂತೆ ಹಲವು ಸಮಸ್ಯೆಗಳನ್ನು ಪತ್ತೆಹಚ್ಚುತ್ತಿದೆ. ಕಾರ್ಯಕರ್ತರೇ ಪಕ್ಷದ […]

ಕರ್ನಾಟಕದ ಬಸ್‍ಗಳಿಗೆ ಕಲ್ಲು ತೂರಿ ಮರಾಠಿಗರ ಪುಂಡಾಟ

ಬೆಂಗಳೂರು,ನ.25- ಸದಾ ಗಡಿ ವಿವಾದವನ್ನೇ ಮುಂದಿಟ್ಟುಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಮಹಾರಾಷ್ಟ್ರ ಮತ್ತೆ ಪುಂಡಾಟಿಕೆ ಮೆರೆದಿದೆ. ಕರ್ನಾಟಕಕ್ಕೆ ಸೇರಿದ ಸಾರಿಗೆ ಸಂಸ್ಥೆಗಳ ಬಸ್‍ಗಳಮೇಲೆ ಕಲ್ಲು ಎಸೆದಿರುವ ಪುಂಡರು, ಜೈ ಮಹಾರಾಷ್ಟ್ರ, ಕರ್ನಾಟಕದ ಖಾನಾಪುರ, ಬೀದರ್ ಮತ್ತು ಬೆಳಗಾವಿ ನಮ್ಮ ರಾಜ್ಯಕ್ಕೆ ಸೇರಬೇಕೆಂದು ಪುಂಡಾಟಿಕೆ ಮಾಡಿದ್ದಾರೆ. ಪುಣೆ ಜಿಲ್ಲೆಯ ದೌಂಡ್‍ನಲ್ಲಿ ನಿಪಾಣಿ ಔರಂಗಾಬಾದ್ ಬಸ್ ಮೇಲೆ ಜೈ ಮಹಾರಾಷ್ಟ್ರ ಮತ್ತು ಜಾಹಿರ್ ನಿಶೇಧ್ (ಖಂಡನೆ) ಎಂಬ ಪದಗಳನ್ನು ಕಿತ್ತಳೆ ಮತ್ತು ಕಪ್ಪು ಬಣ್ಣದಲ್ಲಿ ಬರೆದಿದ್ದಾರೆ. ಬಸ್ ಮೇಲೆ […]