ಯುವಜನರಿಗೆ ಆಕಾಶವೇ ಮಿತಿ : ಅವನಿ ಚತುರ್ವೇದಿ

ನವದೆಹಲಿ,ಫೆ.5- ಯುವ ಜನರಿಗೆ ಆಕಾಶವೇ ಮಿತಿ ಹೀಗಾಗಿ ನಾನು ನನ್ನ ವೃತ್ತಿಯಲ್ಲಿ ಮುಂದುವರೆಯಲು ಇಚ್ಚಿಸಿದ್ದೇನೆ ಎಂದು ಭಾರತೀಯ ವಾಯುಪಡೆಯ ವೈಮಾನಿಕ ಯುದ್ಧ ವಿಮಾನದ ಪ್ರಪ್ರಥಮ ಮಹಿಳಾ ಫೈಟರ್ ಪೈಲಟ್ ಅವನಿ ಚತುರ್ವೇದಿ ಅಭಿಪ್ರಾಯಪಟ್ಟಿದ್ದಾರೆ. ಭಾರತದ ಮೊದಲ ಮಹಿಳಾ ಫೈಟರ್ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಅವನಿ ಅವರು ಯುದ್ದ ವಿಮಾನಗಳನ್ನು ಹಾರಿಸುವುದೇ ರೋಮಾಂಚನಕಾರಿ ನಮ್ಮ ಆಸೆ ಈಡೇರಿಸಿಕೊಳ್ಳು ಆಕಾಶವೇ ಮಿತಿ ಎಂದು ಹೇಳಿದ್ದಾರೆ. ಚತುರ್ವೇದಿ ಅವರು ಸು-30ಎಂಕೈ ಯುದ್ಧ ವಿಮಾನದ ಪೈಲಟ್ಆಗಿ ಜನವರಿ 12 ರಿಂದ 26 […]

9.4 ಲಕ್ಷ ಮೌಲ್ಯದ ನಾಣ್ಯಗಳು ವಶ

ಮುಂಬೈ,ಫೆ.5- ದೆಹಲಿ ಮತ್ತು ಮುಂಬೈ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಮಲಾಡ್ ನಿವಾಸಿಯೊಬ್ಬರ ಒಡೆತನದ ಕಾರಿನಲ್ಲಿ 9.4 ಲಕ್ಷ ಮೌಲ್ಯದ ನಾಣ್ಯಗಳನ್ನು ವಶಪಡಿಸಿಕೊಂಡು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಲಕ್ಷಾಂತರ ಮೌಲ್ಯದ ನಾಣ್ಯಗಳನ್ನು ಹೊಂದಿದ್ದ ಆರೋಪಿಯನ್ನು ಜಿಗ್ನೇಶ್ ಗಾಲಾ ಎಂದು ಗುರುತಿಸಲಾಗಿದೆ.ಗಾಲಾನಿಂದ ವಶಪಡಿಸಿಕೊಳ್ಳಲಾಗಿರುವ ನಾಣ್ಯಗಳು ಅಸಲಿಯೋ ನಕಲಿಯೋ ಎಂದು ಟಂಕಸಾಲೆಯಿಂದ ಪರಿಶೀಲನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಕಲಿ ನೋಟು ಪ್ರಕರಣದ ತನಿಖೆ ನಡೆಸುತ್ತಿದ್ದ ದೆಹಲಿ ವಿಶೇಷ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದರೂ ಆ ಸಂದರ್ಭದಲ್ಲಿ ಮಲಾಡ್ […]

ನಾಳೆ ತ್ರಿಪುರದಲ್ಲಿ ಅಮಿತ್ ಶಾ ಚುನಾವಣಾ ರ‍್ಯಾಲಿ

ಅಗರ್ತಲ, ಫೆ.5 – ತ್ರಿಪುರದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಫೆ.6 ರಂದು ನಡೆಯಲಿರುವ ಎರಡು ರ‍್ಯಾಲಿಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿಯಾಗಲಿದ್ದಾರೆ. ಭಾನುವಾರ ರಾತ್ರಿ 11:30 ರ ವೇಳೆಗೆ ಎಮ್‍ಬಿಬಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅಮಿತ್ ಶಾ ಸೋಮವಾರ ಖೋವಾಯಿ ಜಿಲ್ಲೆ ಮತ್ತು ದಕ್ಷಿಣ ತ್ರಿಪುರ ಜಿಲ್ಲೆಯ ಸಂತಿರ್‍ಬಜಾರ್‍ನಡೆಯಲಿರುವ ಪ್ರತ್ಯೇಕ ಚುನಾವಣಾ ರ್ಯಾಲಿಗಳಲ್ಲಿ ಕಾರ್ಯಕರ್ತರನ್ನು ಉದ್ಧೇಶಿಸಿ ಮಾತನಾಡಲಿದ್ದಾರೆ. ಇದರೊಂದಿಗೆ ಅಗರ್ತಲದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಮಾಘ ಹುಣ್ಣಿಮೆಯಂದು ಗಂಗಾ ಸ್ನಾನ ಮಾಡಿ ಪುನಿತರಾದ […]

ಮೊದಲು ಧೋನಿಗಾಗಿ ನಂತರ ದೇಶಕ್ಕಾಗಿ ಕ್ರಿಕೆಟ್ ಆಡಿದ್ದೇನೆ : ರೈನಾ

ನವದೆಹಲಿ,ಫೆ.5- ನಾನು ಮೊದಲ ಧೋನಿಗಾಗಿ ನಂತರ ದೇಶಕ್ಕಾಗಿ ಪಂದ್ಯ ಆಡಿದ್ದೇನೆ ನನ್ನ ಮತ್ತು ಅವರ ನಡುವಿನ ಸ್ನೇಹ ಅಷ್ಟೊಂದು ಮಧುರವಾಗಿತ್ತು ಎಂದು ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಬಣ್ಣಿಸಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ಕ್ರಿಕೆಟ್ ಆಡಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ನನ್ನ ಮೇಲೆ ಧೋನಿಗೆ ಅಪಾರ ನಂಬಿಕೆಯಿತ್ತು. ಹೀಗಾಗಿ ನಾವು ಹಲವಾರು ಪಂದ್ಯಗಳನ್ನು ಜಯಿಸಲು ಸಾಧ್ಯವಾಯಿತು ಎಂದು ರೈನಾ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ರಾಂಚಿಯಿಂದ ಬಂದಿದ್ದ ಧೋನಿ ಮತ್ತು ಗಾಜಿಯಾಬಾದ್‍ನಿಂದ ಬಂದಿದ್ದ […]

ಹೈದರಾಬಾದ್‌‌ನಲ್ಲಿ ಮೂವರು ಉಗ್ರರನ್ನು ಬಂಧಿಸಿದ ಎನ್‍ಐಎ

ಹೈದರಾಬಾದ್,ಫೆ.5- ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಹೈದರಾಬಾದ್ ನಗರದಲ್ಲಿ ಮೂವರು ಉಗ್ರರನ್ನು ಬಂಧಿಸಿ ಅವರಿಂದ ಹ್ಯಾಂಡ್ ಗ್ರೆನೇಡ್ ವಶಪಡಿಸಿಕೊಂಡಿದೆ. ಉಗ್ರರು ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸಿದ ಬಗ್ಗೆ ಮಾಹಿತಿ ಕಲೆಹಾಕಿ ಕಾರ್ಯಾಚರಣೆ ನಡೆಸಿದ ಎನ್‍ಐಎ ಅಬ್ದುಲ್ ಜಾಹೀದ್ ಸೇರಿದಂತೆ ಮೂವರು ಉಗ್ರರರನ್ನು ಬಂಧಿಸಲಾಗಿದೆ. ಕಳೆದ 2005 ರಲ್ಲಿ ಆತ್ಮಹತ್ಯಾ ಬಾಂಬ್ ಸ್ಪೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಜಾಹೆದ್‍ನನ್ನು ಈ ಹಿಂದೆ ಬಂಧಿಸಲಾಗಿತ್ತು ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 2017 ರಲ್ಲಿ ಬಿಡುಗಡೆ ಮಾಡಲಾಗಿತ್ತು ಎನ್ನಲಾಗಿದೆ. ಪತ್ನಿ ಮೇಲೆ ಹಲ್ಲೆ […]

ಮಾಘ ಹುಣ್ಣಿಮೆಯಂದು ಗಂಗಾ ಸ್ನಾನ ಮಾಡಿ ಪುನಿತರಾದ ಭಕ್ತ ಸಾಗರ

ವಾರಾಣಾಸಿ,ಫೆ.5- ಮಾಘ ಹುಣ್ಣಿಮೆಯ ಅಂಗವಾಗಿ ಇಂದು ಲಕ್ಷಾಂತರ ಮಂದಿ ಗಂಗಾ ನದಿಯಲ್ಲಿ ಮಿಂದು ಪವಿತ್ರ ಸ್ನಾನ ಮಾಡಿ ಪುನಿತರಾದರು. ದೇಶದ ನಾನಾ ಮೂಲೆಗಳ ಲಕ್ಷಾಂತರ ಭಕ್ತರು, ಸಾಧು,ಸಂತರುಗಳು ಉತ್ತರ ಪ್ರದೇಶದ ವಾರಾಣಾಸಿಯ ಪ್ರಯಾಗ ಘಾಟ್‍ಗೆ ಆಗಮಿಸಿ ಪವಿತ್ರ ಗಂಗೆಯಲ್ಲಿ ಮಿಂದು ತಮ್ಮ ಪಾಪ ಕರ್ಮಗಳನ್ನು ಕಳೆದುಕೊಂಡರು. ಮಾಘ ಹುಣ್ಣಿಮೆಯ ಸಂದರ್ಭದಲ್ಲಿ ಪವಿತ್ರ ಗಂಗಾ ಸ್ನಾನ ಮಾಡಲು ಆಗಮಿಸಿರುವ ಪ್ರವಾಸಿಗರಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯ ಯೋಗಿನಾಥ್ ಅವರು ಟ್ವಿಟರ್‍ನಲ್ಲಿ ಶುಭ ಕೋರಿದ್ದಾರೆ. ಪವಿತ್ರ ಗಂಗಾಸ್ನಾನ ಮಾಡಿ ವಿಷ್ಣುವಿಗೆ ಪ್ರಾರ್ಥನೆ […]

ಪಂಜಾಬಿನಲ್ಲಿ ಸದ್ದು ಮಾಡುತ್ತಿರುವ ಕನ್ನಡಿಗ

ಚಂಡೀಗಢ,ಫೆ.5- ದೂರದ ಪಂಜಾಬಿನಲ್ಲಿ ಕನ್ನಡಿಗರೊಬ್ಬರು ಸದ್ದು ಮಾಡುತ್ತಿದ್ದಾರೆ. ಕರ್ನಾಟಕದ ಬಿಜಾಪುರ ಜಿಲ್ಲೆಯ ಪಂಡಿತ್ ರಾವ್ ಧರೆನ್ನವರ್ ಎಂಬ ಪ್ರಾಧ್ಯಾಪಕರು ಪಂಜಾಬ್‍ನಲ್ಲಿ ಪಂಜಾಬಿ ಭಾಷೆ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಹಾಕುವಂತೆ ವ್ಯಾಪಾರಸ್ಥರಿಗೆ ತಾಕೀತು ಮಾಡುತ್ತಿದ್ದಾರೆ. 2003ರಲ್ಲಿ ಪ್ರಾಧ್ಯಾಪಕ ಹುದ್ದೆ ಅಲಂಕರಿಸಲು ಚಂಡೀಗಢಕ್ಕೆ ಬಂದು ನೆಲೆಸಿರುವ ಅವರು ಅಲ್ಲಿನ ಸೆಕ್ಟರ್ 46ರ ಸ್ನಾತಕೋತ್ತರ ಸರ್ಕಾರಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಪಂಜಾಬಿ ಭಾಷೆಯ ಉಳಿವಿಗಾಗಿ ಹೋರಾಟ ನಡೆಸುವ ಮೂಲಕ ಮನೆ ಮಾತಾಗಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕಳೆದ […]

ಅಮೇರಿಕಾದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಭಾರತ ಭೇಟಿ

ಅಹಮದಾಬಾದ್,ಫೆ 5- ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು ಎರಡು ದಿನಗಳ ಭಾರತ ಪ್ರವಾಸಕ್ಕಾಗಿ ಇಂದು ಗುಜರಾತ್‍ಗೆ ಬಂದಿಳಿದ್ದಿದ್ದಾರೆ. ಸಾಮಾಜಿಕ ಕಾರ್ಯಕರ್ತೆ ಮತ್ತು ಗಾಂಧಿವಾದಿ ದಿ.ಇಲಾ ಭಟ್ ಸ್ಥಾಪಿತ ಸ್ವಯಂ-ಸಬಲೀಕರಣ ಮಹಿಳಾ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಕಳೆದ ವರ್ಷ ನವೆಂಬರ್‍ನಲ್ಲಿ 89 ನೇ ವಯಸ್ಸಿನಲ್ಲಿ ನಿಧನರಾದ ಭಟ್ ಅವರಿಗೆ ಕ್ಲಿಂಟನ್ ಶ್ರದ್ಧಾಂಜಲಿ ಸಲ್ಲಿಸಲು ಹಿಲರಿ ಕ್ಲಿಂಟನ್ ಅವರು ಅಹಮದಾಬಾದ್‍ನಲ್ಲಿರುವ ಅದರ ಕಚೇರಿಯಲ್ಲಿ ಸೇವಾ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ. ಹಿಲರಿ ಕ್ಲಿಂಟನ್ ಅವರು ಸೇವಾ ಸದಸ್ಯರಿಗೆ […]

ಪತ್ನಿ ಮೇಲೆ ಹಲ್ಲೆ ಮಾಡಿದ ಕ್ರಿಕೆಟರ್ ವಿನೋದ್ ಕಾಂಬ್ಳಿ

ಮುಂಬೈ,ಫೆ.5- ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಬಾಲ್ಯ ಸ್ನೇಹಿತ ವಿನೋದ್ ಕಾಂಬ್ಳಿ ಅವರು ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಕುಡಿದ ಮತ್ತಿನಲ್ಲಿ ಅವರು ಪತ್ನಿ ಆಂಡ್ರಿಯಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕುರಿತಂತೆ ಆಂಡ್ರಿಯಾ ಪೊಲೀಸರಿಗೆ ದೂರು ನೀಡಿದ್ದು, ಕಾಂಬ್ಳಿ ವಿರುದ್ಧ ಬಾಂದ್ರಾ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಕುಡಿದ ಮತ್ತಿನಲ್ಲಿ ಕಾಂಬ್ಳಿ ನನ್ನ ಮೇಲೆ ಅಡುಗೆ ಪ್ಯಾನ್ ಎಸೆದರು ಅದರಿಂದ ನನ್ನ ತಲೆಗೆ ತೀವ್ರ ಪೆಟ್ಟಾಗಿದೆ […]

ಮನೆಗೆ ಬೆಂಕಿ, ಬಾಲಕಿ ಸಜೀವ ದಹನ

ಕೌಶಾಂಬಿ (ಯುಪಿ), ಫೆ.5-ದುಷ್ಕರ್ಮಿಗಳು ಮನೆಯ ಬೆಂಕಿ ಹಚ್ಚಿದ್ದರಿಂದ ಮೂರು ವರ್ಷದ ಬಾಲಕಿಯೊಬ್ಬಳು ಸಜೀವ ದಹನವಾಗಿರುವ ಘಟನೆ ಇಂದು ಬೆಳಿಗ್ಗೆ ಕೌಶಾಂಬಿ ಬಳಿಯ ಬಹದ್ದೂರ್‍ಪುರ ಗ್ರಾಮದಲ್ಲಿ ನಡೆದಿದೆ. ಬಹದ್ದೂರ್‍ಪುರ ಗ್ರಾಮದ ರಾಂಬಾಬು ಎಂಬುವರ ಮೂರು ವರ್ಷದ ಮಗಳು ನಂದಿನಿ ಹುಲ್ಲಿನ ಛಾವಣಿಯ ಕೆಳಗೆ ಮಲಗಿದ್ದಳು ಈ ವೇಳೆ ಯಾರೋ ಛಾವಣಿಗೆ ಬೆಂಕಿ ಹಚ್ಚಿದ್ದಾರೆ. ಹುಲ್ಲಿನ ಮನೆಯಾಗಿದ್ದರಿಂದ ಬೆಂಕಿ ಜ್ವಾಲೆ ಬೇಗನೆ ವ್ಯಾಪಿಸಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಮರ್ ಬಹದ್ದೂರ್ ಸಿಂಗ್ ತಿಳಿಸಿದ್ದಾರೆ. ನೆರೆಹೊರೆಯವರು ಬೆಂಕಿ ನಂದಿಸಲು […]