ಯುವ ಜನಾಂಗಕ್ಕೆ ಮಾರಕವಾಗಲು ಹೃದಯಘಾತ ಇಲ್ಲಿದೆ ಹಲವು ಕಾರಣ

ಬೆಂಗಳೂರು,ನ.12- ಈ ಹಿಂದೆ 60 ವರ್ಷ ದಾಟಿದವರನ್ನು ಮಾತ್ರ ಕಾಡುತ್ತಿದ್ದ ಹೃದಯಘಾತದಂತಹ ಪ್ರಕರಣಗಳು ಇತ್ತಿಚಿನ ದಿನಗಳಲ್ಲಿ ಯುವಕರನ್ನು ಕಾಡುತ್ತಿರುವುದಕ್ಕೆ ಹವಾಮಾನ ವೈಪರಿತ್ಯ, ಮಣ್ಣಿನ ವೈಫಲ್ಯ ಹಾಗೂ ವಾಯು ಮಾಲಿನ್ಯ ಕಾರಣ ಎಂಬುದು ಇದೀಗ ಬಹಿರಂಗಗೊಂಡಿದೆ. ಹದಿ ಹರಯದ ಯುವಕರು ಹೃದಯಘಾತಕ್ಕೆ ಒಳಗಾಗುತ್ತಿರುವುದಕ್ಕೆ ಮಾಲಿನ್ಯವೇ ಕಾರಣ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಖ್ಯಾತ ಹೃದಯ ತಜ್ಞ ಡಾ.ಸಿ.ಎನ್.ಮಂಜುನಾಥ್ ಖಚಿತಪಡಿಸಿದ್ದಾರೆ. ಕಳೆದ 5 ವರ್ಷದಲ್ಲಿ 7 ಸಾವಿರಕ್ಕೂ ಹೆಚ್ಚು ಯುವಕರು ಹೃದಯಘಾತಕ್ಕೆ ಒಳಗಾಗಿರುವ ಮಾಹಿತಿಯನ್ನಾಧರಿಸಿ ಜಯದೇವ ಆಸ್ಪತ್ರೆ […]

ಪ್ರತಿನಿದಿನ 5 ಎಲೆ ತುಳಸಿ ತಿನ್ನುವುದರಿಂದ ಏನಾಗುತ್ತೆ..?

ಪ್ರತಿಯೊಂದು ಪೂಜೆ ಪುನಸ್ಕಾರಗಳಲ್ಲಿ ಶುದ್ಧತೆಯ ಸಂಕೇತವಾಗಿ ತುಳಸಿಯನ್ನು ಹೆಚ್ಚಾಗಿಯೇ ಬಳಸುತ್ತಾರೆ. ತುಳಸಿ ಪ್ರಾರ್ಥಿಸುವುದರಿಂದ ಎಲ್ಲಾ ಕಾಯಿಲೆಗಳು ಹೇಳಹೆಸರಿಲ್ಲದಂತೆ ಮಾಯವಾಗಿ ನೆಮ್ಮದಿ ಸಿಗುತ್ತದೆ ಹಾಗೆಯೇ ಒಮ್ಮೆ ತುಳಸಿಯನ್ನು ನೀರಿನಿಂದ ತೋಯಿಸಿದರೆ ಯಮರಾಜನ ಭಯವು ಮರೆಯಾಗುತ್ತದೆ ಎಂದು ಸ್ಕಂದ ಪುರಾಣವು ಹೇಳುತ್ತದೆ. ತುಳಸಿ ಸಾಮಾನ್ಯ ಎಲ್ಲರ ಮನೆಯಲ್ಲೂ ಬೆಳೆಯುವ ದೈವಿಕ ಸಸ್ಯ. ತುಳಸಿ ಧಾರ್ಮಿಕವಾಗಿ ಮಾತ್ರ ಹೆಸರುಗಳಿಸಿಲ್ಲ, ಅದರಲ್ಲಿ ಹಲವು ಔಷಧೀಯ ಗುಣಗಳೂ ಇದೆ. ಆದರೆ ಈ ಅಂಶ ತುಳಸಿ ಬೆಳೆಸಿದ ಎಷ್ಟೋ ಜನರಿಗೂ ತಿಳಿದಿರುವುದಿಲ್ಲ. ಇದರ ಎಲೆಯ ಗಂಧವೇ […]

ಈ ಆಹಾರಗಳನ್ನು ಹೆಚ್ಚಾಗಿ ಸೇವಿಸಿದರೆ ಕಿಡ್ನಿ ಸ್ಟೋನ್ ಆಗೋದು ಗ್ಯಾರಂಟಿ..!

ಮನುಷ್ಯನ ಶರೀರದಲ್ಲಿ ಮೂತ್ರಪಿಂಡಗಳು ತುಂಬಾ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಇವು ರಕ್ತವನ್ನು ಹಾಳುವ ಮಾಡುವ ಕೆಟ್ಟ ಪದಾರ್ಥಗಳನ್ನು ಬೇರ್ಪಡಿಸಿ, ಮೂತ್ರದ ಮೂಲಕ ಹೊರ ಹಾಕಿ ಲವಣಗಳ ಸಮತೋಲನವನ್ನು ಕಾಪಾಡುತ್ತವೆ. ಯಾವಾಗ ಮೂತ್ರದಲ್ಲಿ ಅಧಿಕವಾಗಿರುವ ಲವಣಗಳು ಸ್ಫಟಿಕ ರೂಪದಲ್ಲಿ ಮಾರ್ಪಟ್ಟು ಘನ ವಸ್ತುವಾಗಿ ಪರಿವರ್ತನೆಯಾಗುತ್ತವೆಯೋ ಅದನ್ನು ಮೂತ್ರಕೋಶದ ಕಲ್ಲು ಅಥವಾ ಕಿಡ್ನಿ ಸ್ಟೋನ್ ಎಂದು ಕರೆಯಲಾಗುತ್ತದೆ. ಈ ಸಮಸ್ಯೆ ಇರುವವರು ಆಹಾರ ಕ್ರಮದಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಟೊಮ್ಯಾಟೊ, ಬದನೆಕಾಯಿ, ಸೀಬೆಹಣ್ಣು, ದಾಳಿಂಬೆ ಮುಂತಾದವುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಸಹ […]

ವರ್ಷಕ್ಕೆ ಒಮ್ಮೆಯಾದ್ರೂ ನೇರಳೆಹಣ್ಣು ತಿನ್ನಲೇಬೇಕು, ಕಾರಣವೇನು ಗೊತ್ತೇ..?

ಪ್ರಕೃತಿ ಸಹಜವಾಗಿ ಸಿಗುವಂತಹ ಹಲವಾರು ಹಣ್ಣುಹಂಪಲುಗಳಿಂದ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ನೋಡಲು ಕಪ್ಪಾಗಿದ್ದರೂ ರುಚಿಯಲ್ಲಿ ಮಾತ್ರ ನೇರಳೆ ಹಣ್ಣು ಇತರೇ ಹಣ್ಣುಗಳ ಜತೆ ಸ್ಪರ್ಧೆಗೆ ಇಳಿಯುತ್ತದೆ. ಅಷ್ಟೆ ಅಲ್ಲ, ಆರೋಗ್ಯವರ್ಧಕವಾಗಿಯೂ ಇದು ಖ್ಯಾತಿ. ಅಪಾರ ಪೌಷ್ಟಿಕಾಂಶಗಳನ್ನು ಹೊಂದಿರುವ ನೇರಳೆ ರೋಗ ನಿರೋಧಕವಾಗಿಯೂ ಬಳಕೆಯಾಗುತ್ತದೆ. ವೈಜ್ಞಾನಿಕ ಭಾಷೆಯಲ್ಲಿ ಸೈಜಿಗಂ ಕ್ಯುಮಿನ್‌ಎಂದು ಇದನ್ನು ಹೇಳಲಾಗುತ್ತದೆ. ಸಾಕಷ್ಟು ಪೋಷಕ ಸತ್ವಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ನೇರಳೆ ಹಣ್ಣಿಗೆ ಮಧುಮೇಹ ಚಿಕಿತ್ಸೆಯಲ್ಲಿ ಅತಿ ಮುಖ್ಯ ಸ್ಥಾನವಿದೆ. ಬೇರಿಂದ ಹಿಡಿದು ಎಲೆ, ಬೀಜ ಎಲ್ಲವೂ ಪೌಷ್ಟಿಕವಾದದ್ದು. […]

ಅಶೋಕ್ ಸೂಟ ಅವರಿಂದ ಹ್ಯಾಪಿಯೆಸ್ಟ್ ಹೆಲ್ತ್ ಆರಂಭ

ಬೆಂಗಳೂರು, 15 ಜುಲೈ 2022: ಖ್ಯಾತ ಉದ್ಯಮಿ ಮತ್ತು Happiest Minds ನ ಕಾರ್ಯಕಾರಿ ಅಧ್ಯಕ್ಷ ಅಶೋಕ್ ಸೂಟ ಅವರು ಇಂದು ತಮ್ಮ ಮತ್ತೊಂದು ಔದ್ಯಮಿಕ ಸಂಸ್ಥೆಯಾದ Happiest Health ಅನ್ನು ಘೋಷಣೆ ಮಾಡಿದ್ದಾರೆ. ಆರೋಗ್ಯ ಮತ್ತು ಕ್ಷೇಮಕ್ಕೆ ಸಂಬಂಧಿಸಿದಂತೆ ಆಳವಾದ, ವಿಶ್ವಾಸಾರ್ಹವಾದ ಮತ್ತು ನಂಬಲರ್ಹ ಜ್ಞಾನವನ್ನು ಒದಗಿಸುವ ಗುರಿಯನ್ನು ಹೊಂದಿರುವ ಜಾಗತಿಕ ಆರೋಗ್ಯ ಮತ್ತು ಕ್ಷೇಮ ಜ್ಞಾನದ ಒಂದು ಉದ್ಯಮವಾಗಿದೆ. ತನ್ನ ಅಧಿಕೃತ ವೆಬ್ ಸೈಟ್ Happiest Health ಅನ್ನು ಈಗಾಗಲೇ ಆರಂಭಿಸಿದೆ. ಆರೋಗ್ಯ ಮತ್ತು […]

ಎಣ್ಣೆ ಹೊಡೆಯೋ ಯುವಕರೇ, ತಪ್ಪದೆ ಈ ಸುದ್ದಿ ನೋಡಿ..!

ವಾಷಿಂಗ್ಟನ್, ಜು.15-ಅಮೆರಿಕದಲ್ಲಿ ಯುವಜನರು ಮದ್ಯ ಸೇವನೆ ಚಟದಿಂದ ಹಿರಿಯರಿಗಿಂತ ಹೆಚ್ಚಿನ ಆರೋಗ್ಯ ಅಪಾಯಗಳನ್ನು ಎದುರಿಸುತ್ತಿದ್ದಾರೆ ಎಂದು ಜಾಗತಿಕ ಅಧ್ಯಯನವೊಂದು ತಿಳಿಸಿದೆ. ಭೌಗೋಳಿಕ ಪ್ರದೇಶ, ವಯಸ್ಸು, ಲಿಂಗ ಮತ್ತು ವರ್ಷದಿಂದ ಮದ್ಯದ ಅಪಾಯವನ್ನು ವರದಿ ಮಾಡುವ ಲ್ಯಾನ್ಸೆಟ್ ಜರ್ನಲ್‍ನ ಮೊದಲ ಅಧ್ಯಯನ ಇದಾಗಿದೆ.ಆರೋಗ್ಯ ದೃಷ್ಠಯಿಂದ ಜಾಗತಿಕವಾಗಿ ಆಲ್ಕೋಹಾಲ್ ಸೇವನೆಯ ವಯಸ್ಸು ಮತ್ತು ಸ್ಥಳವನ್ನು ಆಧರಿಸಿರಬೇಕು ಎಂದು ಶಿಫಾರಸುಗಳಲ್ಲಿ ಸೂಚಿಸಲಾಗಿದೆ. ವಿಶೇಷವಾಗಿ 15-39 ವರ್ಷ ವಯಸ್ಸಿನ ಪುರುಷರಿಗೆ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಗುರಿಪಡಿಸಬೇಕಾಗಿದ್ದು ಇಲ್ಲದಿದ್ದರೆ ವಿಶ್ವಾದ್ಯಂತ ಹಾನಿಕಾರಕ ಆಲ್ಕೊಹಾಲ್ ಸೇವನೆಯ ಅಪಾಯವನ್ನು […]

ʼಒಸಡುʼ ನೋವಿಗೆ ಮನೆಯಲ್ಲೇ ಸರಳ ಪರಿಹಾರ

ಸಾಮಾನ್ಯವಾಗಿ ಹಲ್ಲು ನೋವನ್ನು ಎಲ್ಲರೂ ಅನುಭವಿಸಿರುತ್ತಾರೆ. ಹಲ್ಲು ನೋವು ಅಂದರೆ ಅದು ನರಕಯಾತನೆಯೇ ಸರಿ. ಹಲ್ಲು ನೋವಿಗೆ ಕಾರಣ ಒಂದೇ ಎರಡೇ.. ಕ್ಯಾಲ್ಸಿಯಂ ಕಡಿಮೆ ಆದ್ರೆ. ಅಥವಾ ಹಲ್ಲು ಸರಿಯಾಗಿ ಉಜ್ಜಿಲ್ಲ ಅಂದ್ರೆ ಹಲ್ಲು ನೋವು ಶುರುವಾಗುತ್ತೆ. ತಿಂದ ಆಹಾರ ಹಲ್ಲಿನ ಸಂಧಿಯೊಳಗೆ ಸಿಕ್ಕಿಕೊಂಡರೂ ಅದು ಹಲ್ಲು ನೋವಿಗೆ ಕಾರಣವಾಗುತ್ತೆ. ದೇಹಕ್ಕೆ ಸರಿಯಾಗಿ ಫ್ಲೋರೈಡ್ ಸಿಗದೇ ಇದ್ದರೆ ದೇಹದಲ್ಲಿ ನೀರಿನಾಂಶ ಕಡಿಮೆ ಆದರೂ ಹಲ್ಲು ನೋವಾಗುತ್ತದೆ. ಈ ಹಲ್ಲು ನೋವು ಬಂದಾಗ ವೈದ್ಯರ ಬಳಿ ಹೋಗೋ ಮುಂಚೆ […]

ನಾಲಿಗೆ ಕ್ಲೀನ್ ಮಾಡದ್ದಿದರೆ ಯಾವೆಲ್ಲ ಕಾಯಿಲೆ ಬರುತ್ತೆ ಗೊತ್ತೇ..?

ನಾವು ಆರೋಗ್ಯವಾಗಿರಲು ದೇಹದ ಎಲ್ಲಾ ಅಂಗಗಳು ಕ್ಲೀನ್ ಆಗಿರಬೇಕು. ಅದೇರೀತಿ ಬಾಯಿ, ಹಲ್ಲು, ನಾಲಿಗೆ ಕೂಡ  ಸ್ವಚ್ಚವಾಗಿರಬೇಕು.  ಬಾಯಿಯ ಆರೋಗ್ಯಕ್ಕೆ ಮಾತ್ರವಲ್ಲ, ಶರೀರದ ಆರೋಗ್ಯಕ್ಕೂ ನಾಲಿಗೆಯನ್ನು ಸ್ವಚ್ಛಗೊಳಿಸಿವುದು ಅತ್ಯವಶ್ಯಕ. ದಿನನಿತ್ಯ ಬೆಳಗ್ಗೆ ಹಲ್ಲುಜ್ಜುವ ಅಭ್ಯಾಸವಿದ್ದರೂ, ಕೆಲವರು ನಾಲಿಗೆ ಸ್ವಚ್ಛಗೊಳಿಸುವಿಕೆಯನ್ನು ಕಡೆಗಣಿಸುತ್ತಾರೆ. ಸಾಮಾನ್ಯವಾಗಿ ನಾಲಿಗೆಯನ್ನು ಕ್ಲೀನ್ ಮಾಡದಿದ್ದರೆ ತೆಳುವಾದ ಬಿಳಿ ಪದರವು ಮೂಡಿರುತ್ತದೆ. ಇಂತಹ ಪದರವೇ ಮುಂದೆ ಅಪಾಯಕಾರಿಯಾಗಲಿದೆ ಎಂದರೆ ನಂಬಲೇಬೇಕು. # ನಾಲಿಗೆಯನ್ನು ಕ್ಲೀನ್ ಮಾಡದೇ, ನಾವೆಷ್ಟು ಬಾರಿ ಹಲ್ಲುಜ್ಜಿದರೂ ಬಾಯಿಯ ದುರ್ಗಂಧ ಹಾಗೇ ಉಳಿದು ಬಿಡುತ್ತದೆ. […]