Sunday, April 14, 2024
Homeರಾಷ್ಟ್ರೀಯಪತ್ನಿ ಆತ್ಮಹತ್ಯೆ ಸುದ್ದಿಕೇಳಿ ಹೃದಯಾಘಾತದಿಂದ ಪ್ರಾಣಬಿಟ್ಟ ಪತಿ

ಪತ್ನಿ ಆತ್ಮಹತ್ಯೆ ಸುದ್ದಿಕೇಳಿ ಹೃದಯಾಘಾತದಿಂದ ಪ್ರಾಣಬಿಟ್ಟ ಪತಿ

ಮೈಸೂರು,ಮಾ31-ಸಾವಿಗೆ ಶರಣಾದ ಪತ್ನಿಯ ಸಾವಿನ ಸುದ್ದಿ ತಿಳಿದು ಪತಿ ಶಾಕ್‍ಗೆ ಒಳಗಾಗಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀರಾಂಪುರದಲ್ಲಿ ನಡೆದಿದೆ.ವಿಜಯಲಕ್ಷ್ಮಿ(52) ಸಾವಿಗೆ ಶರಣಾದ ಪತ್ನಿಯಾಗಿದ್ದು ಪತಿ ಮಂಜುನಾಥ್(58) ಹೃದಯ ಘಾತದಿಂದ ಸಾವನ್ನಪ್ಪಿದ್ದಾರೆ.

ಕಳೆದ ಹಲವು ದಿನಗಳಿಂದ ವಿಜಯಲಕ್ಷ್ಮಿ ಅನಾರೋಗ್ಯದಿಂದ ಬಳಲುತ್ತಿದ್ದರು.ಚಿಕಿತ್ಸೆಯಿಂದ ಗುಣಮುಖರಾಗದ ಹಿನ್ನಲೆ ನಿನ್ನೆ ರಾತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಪತ್ನಿಯ ಅಗಲಿಕೆ ಸುದ್ದಿ ಅರಿತ ಪತಿ ಮಂಜುನಾಥ್ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಕೂಡಲೇ ಮಂಜುನಾಥ್ ರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಸಾವಿನಲ್ಲೂ ಪತ್ನಿಯ ಜೊತೆ ಪತಿ ಒಂದಾಗಿದ್ದಾರೆ.

ಅಶೋಕಾಪುರಂ ನಲ್ಲಿರುವ ರೈಲ್ವೆ ವರ್ಕ್ ಷಾಪ್ ನಲ್ಲಿ ಮಂಜುನಾಥ್ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ.ದಂಪತಿಗೆ ಇಬ್ಬರು ಮಕ್ಕಳಿದ್ದ ಮಗ ಅಮೆರಿಕದಲ್ಲಿ ನೆಲೆಸಿದ್ದಾರೆ. ಮಗಳು ಮೈಸೂರಿನಲ್ಲಿ ವಿಧ್ಯಾಭ್ಯಾಸ ಮುಂದೆವರೆಸಿದ್ದಾರೆ.ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News