Monday, October 7, 2024
Homeರಾಷ್ಟ್ರೀಯ | Nationalಶಾರ್ಟ್​ಸರ್ಕ್ಯೂಟ್​ನಿಂದ ಮನೆಗೆ ಬೆಂಕಿ ಬಿದ್ದು ಉಸಿರುಗಟ್ಟಿ ಕುಟುಂಬದ 4 ಮಂದಿ ಸಾವು

ಶಾರ್ಟ್​ಸರ್ಕ್ಯೂಟ್​ನಿಂದ ಮನೆಗೆ ಬೆಂಕಿ ಬಿದ್ದು ಉಸಿರುಗಟ್ಟಿ ಕುಟುಂಬದ 4 ಮಂದಿ ಸಾವು

ದ್ವಾರಕಾ, ಮಾ.31 (ಪಿಟಿಐ) – ಗುಜರಾತ್‍ನ ದೇವಭೂಮಿ ದ್ವಾರಕಾ ನಗರದಲ್ಲಿ ಇಂದು ಬೆಳಿಗ್ಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ತೀವರ ಹೊಗೆಯಿಂದ ಶಿಶು ಸೇರಿದಂತೆ ಕುಟುಂಬದ ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ದ್ವಾರಕಾ ನಗರದ ಆದಿತ್ಯ ರಸ್ತೆಯಲ್ಲಿರುವ ಮನೆಯಲ್ಲಿ ಬೆಳಗಿನ ಜಾವ 3.30ರ ಸುಮಾರಿಗೆ ಕುಟುಂಬ ಸದಸ್ಯರು ಮಲಗಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸ್ ಇನ್ಸ್‍ಪೆಕ್ಟರ್ ಪಟೇಲ್ ತಿಳಿಸಿದ್ದಾರೆ.

ಮೃತರನ್ನು ಪವನ್ ಉಪಾಧ್ಯಾಯ (39), ಅವರ ಪತ್ನಿ ತಿಥಿ (29), ಮಗಳು ಧ್ಯಾನ ಮತ್ತು ತಾಯಿ ಭವಾನಿಬೆನ್ (69) ಎಂದು ಗುರುತಿಸಲಾಗಿದೆ ಎರಡಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಹೊಗೆ ಆವರಿಸಿದೆ.ನಂತರ ಮನೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ ಇದರಿಂದಾಗಿ ಕುಟುಂಬ ಸದಸ್ಯರು ನಂತರ ಹೊರಗೆ ಬರಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮನೆ ಪ್ರವೀಶಿಸಿದ್ದಾಗ ದಂಪತಿಗಳು, ಅವರ 8 ತಿಂಗಳ ಮಗಳು ಮತ್ತು ಮನೆಯ ಮೊದಲ ಮಹಡಿಯಲ್ಲಿ ಹಿರಿಯ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡುಹಿಡಿದರು.ಕೂಡಲೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನೆಯ ನೆಲ ಅಂತಸ್ತಿನ ಕೊಠಡಿಯಲ್ಲಿ ಮಲಗಿದ್ದ ವ್ಯಕ್ತಿಯ ಅಜ್ಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅವರು ಹೇಳಿದರು.ಅಕ ಬಿಸಿಯಾದ ನಂತರ ಏರ್ ಕಂಡಿಷನರ್‍ನಲ್ಲಿ ಸ್ಪೋಟಗೊಂಡ ಕಾರಣ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕಿಸಲಾಗಿದೆ ವಿವಿಜ್ಞಾನ ತಜ್ಞರು ಬೆಂಕಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ತೊಡಗಿದ್ದಾರೆ ಎಂದು ಅವರು ಹೇಳಿದರು.

RELATED ARTICLES

Latest News