Wednesday, April 17, 2024
Homeರಾಜ್ಯಆರ್‌ಟಿಪಿಎಸ್ 4 ಘಟಕಗಳು ಬಂದ್, ರಾಜ್ಯದಲ್ಲಿ ವಿದ್ಯುತ್ ಕೊರತೆ ಭೀತಿ

ಆರ್‌ಟಿಪಿಎಸ್ 4 ಘಟಕಗಳು ಬಂದ್, ರಾಜ್ಯದಲ್ಲಿ ವಿದ್ಯುತ್ ಕೊರತೆ ಭೀತಿ

ರಾಯಚೂರು, ಮಾ.31:ಇಲ್ಲಿನ ಶಕ್ತಿ ನಗರದಲ್ಲಿರುವ ಆರ್‍ಟಿಪಿಎಸ್ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ನಾಲ್ಕು ಘಟಕಗಳು ನಿಂತಿದ್ದು ವಿದ್ಯುತ್ ಉತ್ಪಾದನೆಯಲ್ಲಿ ವ್ಯತ್ಯಯವಾಗಿದೆ.ಇಲ್ಲಿರುವ 8 ಘಟಕದಲ್ಲಿ 4 ಕೈಕೊಟ್ಟಿದ್ದು ಈಗ ತುರ್ತಾಗಿ ಎರಡು ಘಟಕಗಳ ದುರಸ್ತಿ ಕಾರ್ಯ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಒಟ್ಟು 1720 ಮೆ.ವ್ಯಾ.ವಿದ್ಯುತ್ ಉತ್ಪಾದನಾ ಸಾಮಥ್ರ್ಯವಿರೊ ಈಗ ಪ್ರಸ್ತುತ 903 ಮೆ.ವ್ಯಾ.ವಿದ್ಯುತ್ ಮಾತ್ರ ಉತ್ಪಾದನೆ ಮಾಡಲಾಗಿದೆ.ರಾಜ್ಯಕ್ಕೆ ಸುಮಾರು 40% ವಿದ್ಯುತ್ ಪೂರೈಕೆ ಮಾಡುವ ಇಲ್ಲಿನ ಘಟಕಗಳು ಕಳೆದ ಎರಡು ದಿನಗಳಿಂದ ಬಾಯ್ಲರ್ ಟ್ಯೂಬ್ ಲೀಕೇಜ್ ಹಾಗೂ ಬಂಕ್ಲರ್ ಸಮಸ್ಯೆಯಿಂದ 1,2,3 ಮತ್ತು 6 ಸೇರಿ ಒಟ್ಟು ನಾಲ್ಕು ಘಟಕಗಳು ಬಂದ್ ಆಗಿವೆ.

ಸದ್ಯ ಸಿಬ್ಬಂದಿ 2 6ನೇ ಘಟಕಗಳ ದುರಸ್ತಿ ಕಾರ್ಯ ನಡೆಸುತ್ತಿದ್ದಾರೆ ಆದರೆ ಇದು ಯಾವಾಗ ದುರಸ್ತಿಯಾಗುತ್ತೆ ಎಂಬುದು ಹೇಳಲು ಸಾಧ್ಯವಿಲ್ಲ ಹೀಗಾಗಿ ರಾಜ್ಯದಲ್ಲಿ ಮುಂದಿನ ಕೆಲ ದಿನಗಳ ಕಾಲ ವಿದ್ಯುತ್ ಸಮಸ್ಯೆ ಎದುರಾಗುವ ಭೀತಿ ಇದೆ.

RELATED ARTICLES

Latest News