Home ಇದೀಗ ಬಂದ ಸುದ್ದಿ ಆಯತಪ್ಪಿ ಬೈಕ್ ನಿಂದ ಬಿದ್ದು ಹೆಡ್‌ಕಾನ್‌ಸ್ಟೇಬಲ್ ಸಾವು

ಆಯತಪ್ಪಿ ಬೈಕ್ ನಿಂದ ಬಿದ್ದು ಹೆಡ್‌ಕಾನ್‌ಸ್ಟೇಬಲ್ ಸಾವು

0
ಆಯತಪ್ಪಿ ಬೈಕ್ ನಿಂದ ಬಿದ್ದು ಹೆಡ್‌ಕಾನ್‌ಸ್ಟೇಬಲ್ ಸಾವು

ಹಾಸನ,ಮಾ.31-ಚಾಲನೆ ಮಾಡುತ್ತಿದ್ದ ಬೈಕ್‍ನಿಂದ ಆಯತಪ್ಪಿ ಬಿದ್ದು ಕರ್ತವ್ಯನಿರತ ಹೆಡ್‌ಕಾನ್‌ಸ್ಟೇಬಲ್ ಮೃತಪಟ್ಟ ಘಟನೆ ಅರಕಲಗೂಡು ತಾಲ್ಲೂಕಿನ ಜೋಡಿಗುಬ್ಬಿ ಕ್ರಾಸ್ ಬಳಿ ನಡೆದಿದೆ.

ಕೊಣನೂರು ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೆಂಕಟೇಶ್ (55) ಸಾವನ್ನಪ್ಪಿದ ಹೆಡ್‍ಕಾನ್ಸ್‍ಟೇಬಲ್.ವ್ಯಕ್ತಿಯೊಬ್ಬನಿಗೆ ನ್ಯಾಯಾಲಯದ ಸಮನ್ಸ್ ನೀಡಿ ಬೈಕ್‍ನಲ್ಲಿ ಪೊಲೀಸ್ ಠಾಣೆಗೆ ವಾಪಸ್ಸಾಗುತ್ತಿದ್ದ ಮುಖ್ಯಪೇದೆ ವೆಂಕಟೇಶ್ ಅವರು ಜೋಡಿಗುಬ್ಬಿ ಕ್ರಾಸ್‍ನಲ್ಲಿ ಹಂಪ್ಸ್ ಮೇಲೆ ವೇಗವಾಗಿ ಚಲಿಸಿದ್ದರಿಂದ ನಿಯಂತ್ರಣ ಕಳೆದುಕೊಂಡು ಆಯತಪ್ಪಿ ರಸ್ತೆಗೆ ಉರುಳಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು.

ನಂತರ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಅರಕಲಗೂಡು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.