Home ಅಂತಾರಾಷ್ಟ್ರೀಯ | International ಅಮೆರಿಕದಲ್ಲಿ ಬಂಧೂಕುಧಾರಿಯಿಂದ ಮನಬಂದಂತೆ ಫೈರಿಂಗ್, ಮೂವರ ಸಾವು

ಅಮೆರಿಕದಲ್ಲಿ ಬಂಧೂಕುಧಾರಿಯಿಂದ ಮನಬಂದಂತೆ ಫೈರಿಂಗ್, ಮೂವರ ಸಾವು

0
ಅಮೆರಿಕದಲ್ಲಿ ಬಂಧೂಕುಧಾರಿಯಿಂದ ಮನಬಂದಂತೆ ಫೈರಿಂಗ್, ಮೂವರ ಸಾವು

ವಾಷಿಂಗ್ಟನ್‌,ಜೂ.22– ಅಮೆರಿಕದಲ್ಲಿ ದಿನಸಿ ಅಂಗಡಿಯ ಮುಂದೆ ವ್ಯಕ್ತಿಯೊಬ್ಬ ಮನಬಂದಂತೆ ಗುಂಡು ಹಾರಿಸಿದ ಘಟನೆಯಲ್ಲಿ ಮೂವರು ಮೃತಪಟ್ಟು ಇತರ ಹತ್ತು ಮಂದಿ ಗಾಯಗೊಂಡಿದ್ದಾರೆ.

ಲಿಟಲ್‌ ರಾಕ್‌ ಎಂಬ ಪ್ರದೇಶದ ಫೋರ್ಟೈಸ್‌‍ನಲ್ಲಿರುವ ವ್ಯಾಡ್‌ ಬುಚರ್‌ ದಿನಸಿ ಅಂಗಡಿಯಲ್ಲಿ ದುಷ್ಕರ್ಮಿಯೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.ಗುಂಡಿನ ಸದ್ದು ಕೇಳಿ ಸ್ಥಳಕ್ಕೆ ಆಗಮಿಸಿದ ಪೊಲೀಸರ ಜೊತೆಯೂ ಗುಂಡಿನ ಚಕಮಕಿ ನಡೆದಿದು ಅದರಲ್ಲಿ ದಾಳಿ ನಡೆಸಿದ ಆರೋಪಿ ಹಾಗೂ ಪೋಲಿಸ್ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

ಶಂಕಿತ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸದ್ದಾರೆ. ಆತನನ್ನು ನ್ಯೂ ಎಡಿನ್‌ ಬರ್ಗ್‌ ನಿವಾಸಿ 44 ವರ್ಷದ ಟ್ರಾವಿಸ್‌‍ ಯುಗೇನ್‌ ಪೊಸೆ ಎಂದು ಗುರುತಿಸಸಲಾಗಿದೆ.

ಬಂಧಿತನ ವಿರುದ್ಧ ಈ ಹಿಂದೆ ಯಾವ ಪ್ರಕರಣಗಳಿವೆ, ಈತ ಯಾವುದಾದರು ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದಾನೆಯೇ ಎಂಬೆಲ್ಲ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಫಿ ಮತ್ತು ಗಾಯಗೊಂಡ ಪೊಲೀಸ್ ಅಧಿಕಾರಿ ಪ್ರಾಣಾಪಾಯದಿಂದ ಪಾರಾಗಿದ್ದು ಚಿಕಿತ್ಸೆ ಮುಂದುವರಿಸಲಾಗುತ್ತಿದೆ.