ಬೆಂಗಳೂರು,ಅ.14-ಅನಧಿಕೃತ ಜಾಹೀರಾತುಗಳಿಗೆ ಬ್ರೇಕ್ ಹಾಕಲು ನಗರದಲ್ಲಿ ಹೊಸ ನಿಯಮ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಸಿಲಿಕಾನ್ ಸಿಟಿಯಲ್ಲಿ ಬೇರು ಬಿಟ್ಟಿರುವ ಜಾಹೀರಾತು ಮಾಫಿಯಾಗೆ ಈಗಾಗಲೇ ಕಡಿವಾಣ ಹಾಕಲಾಗಿದ್ದು, ನಗರ ವ್ಯಾಪ್ತಿಗೆ ಸಂಬಂಧಿಸಿದಂತೆ ಜಾಹೀರಾತು ಕಾಯ್ದೆಗೆ ಕೆಲ ಮಾರ್ಪಾಡು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಬಿಬಿಎಂಪಿ ಜಾಹೀರಾತು ವಿಭಾಗದ ಉಪ ಆಯುಕ್ತ ಲೋಕನಾಥ್ ಮಾಹಿತಿ ನೀಡಿದ್ದಾರೆ.
ಈ ಹೊಸ ಜಾಹೀರಾತು ನೀತಿಯಿಂದ ಸರ್ಕಾರಕ್ಕೆ ಹೆಚ್ಚು ಆದಾಯ ಬರುವ ಸಾಧ್ಯತೆಗಳಿವೆ ಎಂದು ಅವರು ವಿವರಣೆ ನೀಡಿದ್ದಾರೆ. ನಗರದಲ್ಲಿ ಅಕ್ರಮ ಜಾಹೀರಾತುಗಳಿಗೆ ಕಡಿವಾಣ ಹಾಕಿದ್ದರೂ ಕೂಡ ಅನಧಿಕೃತ ಜಾಹೀರಾತುಗಳ ಹಾವಳಿ ಹೆಚ್ಚಗಿರುವುದನ್ನು ಮನಗಂಡು ಸರ್ಕಾರ ಇಂತಹ ತೀರ್ಮಾನ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಿಯಾಂಕಾ ವಾದ್ರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
ಸಾರ್ವಜನಿಕರಿಂದ ಹಾಗೂ ರಾಜಕೀಯ ಪಕ್ಷಗಳಿಂದ ಅನಧಿಕೃತ ಪ್ಲೆಕ್ಸ್, ಬ್ಯಾನರ್ ಗಳ ಪ್ರದರ್ಶನ ಹೆಚ್ಚಾಗಿದೆ. ಇದರಿಂದ ಸರ್ಕಾರದ ಖಜಾನೆಗೆ ಕೋಟ್ಯಾಂತರ ಹಣ ಲಾಸ್ ಆಗುತಿತ್ತು. ಈ ರೀತಿ ಅಳವಡಿಸುವ ಅನಧಿಕೃತ ಪ್ಲೆಕ್ಸ್ , ಬ್ಯಾನರ್ ಕಡಿವಾಣಕ್ಕೆ ರಾಜ್ಯ ಸರ್ಕಾರ ಹೊಸ ಪ್ಲಾನ್ ಕಂಡುಕೊಂಡು ನಗರಕ್ಕೆ ಸೀಮಿತವಾಗಿ ಹೊಸ ಜಾಹೀರಾತು ನಿಯಮ ಅಳವಡಿಸಿಕೊಂಡಿದೆ.
ಹಾಗಾದ್ರೆ, ಸಿಲಿಕಾನ್ ಸಿಟಿಗೆ ಸೀಮಿತವಾದ ಹೊಸ ಜಾಹೀರಾತು ನಿಯಮದಲ್ಲಿ ಎನ್ನಿದೆ ಅಂತ ನೋಡೋದಾದೆ ಇನ್ನು ಮುಂದೆ – ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಿ ಬೇಕದ್ರು ಪ್ಲೆಕ್ಸ್ ಬ್ಯಾನರ್ ಹಾಕಬಹುದು ಆದರೆ ಅದಕ್ಕೆ ಬಿಬಿಎಂಪಿ ಅನುಮತಿ ಕಡ್ಡಾಯವಾಗಿರಲಿದೆ. ಯಾರಾದ್ರೂ ಪ್ಲೆಕ್ಸ್, ಬ್ಯಾನರ್ ಹಾಕಬೇಕು ಅಂದ್ರೆ ಅವರಿಗೆ ಮೂರು ದಿನ ಅನುಮತಿ ನೀಡಲಾಗುವುದು ಒಂದು ಬ್ಯಾನರ್ ಅಥವಾ ಪ್ಲೆಕ್ಸ್‍ಗೆ ಇಂತ್ತಿಷ್ಟು ಹಣ ನಿಗದಿ ಮಾಡಲಾಗಿದೆ.
ಮೂರು ದಿನಕ್ಕೆ ನೀವು ಹಾಕೋ ಪ್ಲೆಕ್ಸ್ , ಬ್ಯಾನರ್ ಮೇಲೆ ಹಣ ನಿಗದಿ ಮಾಡಲಾಗುವುದು. ಹಣ ಪಾವತಿ ಮಾಡಿದ್ರೆ ಮೂರು ದಿನ ಬ್ಯಾನರ್ ಹಾಕಲು ಅನುಮತಿ ನೀಡಲಾಗುವುದು. ಮೂರು ದಿನ ನಂತರ ಬಿಬಿಎಂಪಿ ಸಿಬ್ಬಂದಿಗಳೆ ನೀವು ಅಳವಡಿಸುವ ಬ್ಯಾನರ್ ತೆರವು ಮಾಡ್ತಾರೆ, ಹೀಗೆ ಅನಧಿಕೃತ ಪ್ಲೆಕ್ಸ್ , ಬ್ಯಾನರ್ ಕಡಿವಾಣಕ್ಕೆ ರಾಜ್ಯ ಸರ್ಕಾರ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ.