Friday, November 22, 2024
Homeರಾಷ್ಟ್ರೀಯ | Nationalಹೋಟೆಲ್‌ ಉದ್ಯಮಿ ಜಯ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಛೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆ

ಹೋಟೆಲ್‌ ಉದ್ಯಮಿ ಜಯ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಛೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆ

ಮುಂಬೈ, ಮೇ 31-2001ರಲ್ಲಿ ಹೋಟೆಲ್‌ ಉದ್ಯಮಿ ಜಯ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ದರೋಡೆಕೋರ ಛೋಟಾ ರಾಜನ್‌ ಅಪರಾಧಿ ಎಂದು ಮುಂಬೈ ನ್ಯಾಯಾಲಯ ಗುರುವಾರ ತೀರ್ಪು ನೀಡಿದ್ದು, ಜೀವಾವಧಿ ಶಿಕ್ಷೆ ವಿಧಿಸಿದೆ.

ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆ ಅಡಿಯಲ್ಲಿ ಪ್ರಕರಣಗಳ ವಿಶೇಷ ನ್ಯಾಯಾಧೀಶ ಎ.ಎಂ.ಪಾಟೀಲ್‌ ಅವರು ರಾಜನ್‌ ದೋಷಿ ಎಂದು ತೀರ್ಪು ನೀಡಿದ್ದಾರೆ. ಭಾರತೀಯ ದಂಡ ಸಂಹಿತೆಯ ವಿವಿಧ ನಿಬಂಧನೆಗಳು ಮತ್ತು ಇತರ ಕಾನೂನುಗಳ ಅಡಿಯಲ್ಲಿ ಛೋಟಾ ರಾಜನ್‌ ಅಪರಾಧಿ ಎಂದು ನ್ಯಾಯಮೂರ್ತಿ ಘೋಷಿಸಿದ್ದಾರೆ.

ಹತ್ಯೆಗೊಳಗಾಗಿರುವ ಜಯ ಶೆಟ್ಟಿ ದಕ್ಷಿಣ ಮುಂಬೈನ ಗ್ರಾಂಟ್‌ ರೋಡ್‌ ಪ್ರದೇಶದ ಪ್ರಸಿದ್ಧ ಗೋಲ್ಡನ್‌ ಕ್ರೌನ್‌ ಹೋಟೆಲ್‌ ಮತ್ತು ಬಾರ್‌ನ ಮಾಲೀಕರಾಗಿದ್ದು, ಛೋಟಾ ರಾಜನ್‌ ಮತ್ತು ಹಿಂಬಾಲಕರನ್ನು ೌಲ್‌ ಮಾಡಿದ್ದರು. 2001ರ ಮೇ 4ರಂದು ರಾತ್ರಿ ಛೋಟಾ ರಾಜನ್‌ ಅವರ ಇಬ್ಬರು ಶೂಟರ್‌ಗಳು ಹೋಟೆಲ್‌ ಆವರಣಕ್ಕೆ ನುಗ್ಗಿ, ಜಯ ಶೆಟ್ಟಿಯನ್ನು ಕೊಲೆ ಮಾಡಿದ್ದರು.

ಭೂಗತ ಪಾತಕಿ ಛೋಟಾ ರಾಜನ್‌ ಸಹಚರರಿಂದ ಸುಲಿಗೆ ಬೆದರಿಕೆಗಳು ಮತ್ತು ಕರೆಗಳು ಬರುತ್ತಿವೆ ಎಂದು ಜಯ ಶೆಟ್ಟಿ ದೂರು ನೀಡಿದ್ದರು. ಅವರಿಗೆ ಪೊಲೀಸ್‌‍ ಭದ್ರತೆಯನ್ನು ಒದಗಿಸಲಾಗಿತ್ತು. ನಂತರ, ಅವರು ಪೊಲೀಸ್‌‍ ಭದ್ರತೆಯನ್ನು ಹಿಂತೆಗೆದುಕೊಳ್ಳುವಂತೆ ಕೇಳಿದರು. ಆದರೆ, ಭದ್ರತೆಯನ್ನು ಹಿಂತೆಗೆದುಕೊಂಡ ಕೇವಲ 2 ತಿಂಗಳ ನಂತರ ಅವರು ಕೊಲೆಗೀಡಾಗಿದ್ದರು.

2011ರ ಜೂನ್‌ 11ರಂದು ಪತ್ರಕರ್ತ ಜೆ. ಡೇ ಅವರನ್ನು ಹಗಲು ಹೊತ್ತಿನಲ್ಲಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರ ಮೇ ತಿಂಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ ನಂತರ ಮುಂಬೈನಲ್ಲಿ ಛೋಟಾ ರಾಜನ್‌ಗೆ ಇದು ಎರಡನೇ ಜೀವಾವಧಿ ಶಿಕ್ಷೆಯಾಗಿದೆ.

ಆರಂಭದಲ್ಲಿ ಬೆದರಿಕೆಯಿಂದಾಗಿ ಮಹಾರಾಷ್ಟ್ರ ಪೊಲೀಸರು ಹೋಟೆಲ್‌ ಮಾಲೀಕನಿಗೆ ಭದ್ರತೆ ಒದಗಿಸಿದ್ದರು. ಆದರೆ, ಕೊಲೆಯಾಗುವ ಎರಡು ತಿಂಗಳ ಮೊದಲು ಅವರ ಭದ್ರತೆಯನ್ನು ಹಿಂಪಡೆಯಲಾಗಿತ್ತು. 2015 ರ ಅಕ್ಟೋಬರ್‌ನಲ್ಲಿ ಇಂಡೋನೇಷ್ಯಾದಲ್ಲಿ ಬಂಧಿಸಿದ ನಂತರ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು. ಬಳಿಕ ಛೋಟಾ ರಾಜನ್‌ ಪ್ರಸ್ತುತ ದೆಹಲಿಯ ತಿಹಾರ್‌ ಜೈಲಿನಲ್ಲಿದ್ದಾರೆ.

ಇಬ್ಬರು ಶೂಟರ್‌ಗಳು ಜಯ ಶೆಟ್ಟಿಯನ್ನು ಗುಂಡಿಕ್ಕಿ ಕೊಂದಿದ್ದರು. ಹೋಟೆಲ್‌ನ ಮ್ಯಾನೇಜರ್‌ ಮತ್ತು ವೃತ್ತಿಪರ ಶೂಟರ್‌ಗಳನ್ನು ಬೆನ್ನಟ್ಟಿ ಅವರಲ್ಲಿ ಒಬ್ಬನನ್ನು ಹಿಡಿದಿದ್ದರು. 2018 ರಲ್ಲಿ, ವೋರಾ ಅವರನ್ನು ಈ ಪ್ರಕರಣದಲ್ಲಿ ಖುಲಾಸೆಗೊಳಿಸಲಾಯಿತು. ಆದರೆ ಛೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ.

ಮುಂಬೈನ ಭಯಾನಕ ಗ್ಯಾಂಗ್‌ ಸ್ಟಾರ್‌ಗಳಲ್ಲಿ ಒಬ್ಬರಾದ 64 ವರ್ಷದ ಛೋಟಾ ರಾಜನ್‌, 1989ರಲ್ಲಿ ದುಬೈಗೆ ಪರಾರಿಯಾಗಿದ್ದರು. ಸುಮಾರು 27 ವರ್ಷಗಳ ಕಾಲ ದೇಶ ಬಿಟ್ಟು ಪರಾರಿಯಾಗಿದ್ದ ಅವರನ್ನು ನವೆಂಬರ್‌ 2015ರಲ್ಲಿ ಇಂಡೋನೇಷ್ಯಾದಿಂದ ಭಾರತಕ್ಕೆ ಗಡಿಪಾರು ಮಾಡಲಾಯಿತು.

RELATED ARTICLES

Latest News