Oscars 2025 : ‘ಅನುಜಾ’ ಕೈತಪ್ಪಿದ ಆಸ್ಕರ್

Oscars 2025:‘Anuja’ loses Best Live Action Short to ‘I'm Not a Robot’

0
1578
Anuja

ನವದೆಹಲಿ, ಮಾ.3: ಈ ಬಾರಿಯ ಆಸ್ಕರ್ ಪ್ರಶಸ್ತಿ(Oscars 2025)ಗೆ ಅತ್ಯುತ್ತಮ ಲೈವ್ ಆಕ್ಷನ್ ಕಿರು ವಿಭಾಗದಲ್ಲಿ ಸ್ಪರ್ಧಿಸಿದ್ದ ನವದೆಹಲಿ ಮೂಲದ ಕಿರುಚಿತ್ರ ಅನುಜಾ (Anuja) ಡಚ್ ಭಾಷೆಯ ಐ ಆಮ್ ನಾಟ್ ಎ ರೋಬೋಟ್ ಚಿತ್ರದ ಎದಿರು ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ.

ಈ ಬಾರಿ ಅನುಜಾ ಚಿತ್ರಕ್ಕೆ ಆಸ್ಕರ್ ಲಭಿಸಬಹುದು ಎಂಬ ನಿರೀಕ್ಷೆ ಹುಸಿಯಾಗುವುದರೊಂದಿಗೆ ಐ ಆಮ್ ನಾಟ್ ಎ ರೋಬೋಟ್ ಎಂಬುದು ವಿಕ್ಟೋರಿಯಾ ವಾರ್ಮೆಡ್ರಮ್ ಬರೆದು ನಿರ್ದೇಶಿಸಿದ ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.

ಆನ್‌ಲೈನ್ ಕ್ಯಾಪ್ಟಾ ಪರೀಕ್ಷೆಯಲ್ಲಿ ವಿಫಲವಾದ ನಂತರ, ಮ್ಯಾಕ್ಸ್ ತಾನು ನಿಜವಾಗಿಯೂ ರೋಬೋಟ್ ಆಗಿರಬಹುದು ಎಂದು ನಂಬಿದಾಗ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಾನೆ ಎಂದು ಅದರ ಸಾರಾಂಶದಲ್ಲಿ ತಿಳಿಸಲಾಗಿದೆ.

ಆಡಮ್ ಜೆ ಗ್ರೇಮ್ಸ್ ಮತ್ತು ಸುಚಿತ್ರಾ ಮಥಾಯ್ ನಿರ್ದೇಶಿಸಿದ ಅನುಜಾ ಚಿತ್ರವು ಒಂಬತ್ತು ವರ್ಷದ ಪ್ರತಿಭಾನ್ವಿತ ಅನುಜಾಳನ್ನು ಅನುಸರಿಸುತ್ತದೆ, ಅವಳು ತನ್ನ ಸಹೋದರಿಯೊಂದಿಗೆ ಶಿಕ್ಷಣ ಮತ್ತು ಕಾರ್ಖಾನೆ ಕೆಲಸದ ನಡುವೆ ಆಯ್ಕೆ ಮಾಡಬೇಕು – ಈ ನಿರ್ಧಾರವು ಅವರಿಬ್ಬರ ಭವಿಷ್ಯವನ್ನು ರೂಪಿಸುತ್ತದೆ. ಇದರಲ್ಲಿ ಸಜ್ಜಾ ಪಠಾಣ್ ಮತ್ತು ಅನನ್ಯಾ ಶಾನಭಾಗ್ ನಟಿಸಿದ್ದಾರೆ.

ಪ್ರಸ್ತುತ ನೆಟ್‌ಪ್ಲಿಕ್ಸ್‌ನಲ್ಲಿ ಸ್ಟೀಮಿಂಗ್ ಆಗುತ್ತಿರುವ ಅನುಜಾ ಚಿತ್ರದಲ್ಲಿ ಎರಡು ಬಾರಿ ಆಸ್ಕರ್ ವಿಜೇತ ನಿರ್ಮಾಪಕ ಗುನೀತ್ ಮೊಂಗಾ ಮತ್ತು ನಟಿ ಪ್ರಿಯಾಂಕಾ ಚೋಪ್ರಾ ಜೊನಾಸ್ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಮತ್ತು ಹಾಲಿವುಡ್ ಸ್ಟಾರ್ ಬರಹಗಾರ ಮಿಂಡಿ ಕಾಲಿಂಗ್ ನಿರ್ಮಾಪಕರಾಗಿದ್ದಾರೆ. ಇದನ್ನು ಸಲಾಮ್ ಬಾಲಕ್ ಟ್ರಸ್ಟ್ (ಎಸ್ಟಿಟಿ) ಸಹಯೋಗದೊಂದಿಗೆ ನಿರ್ಮಿಸಲಾಗಿದೆ.