Home ಇದೀಗ ಬಂದ ಸುದ್ದಿ ಉತ್ತರ ಪ್ರದೇಶದಲ್ಲಿ ಮಳೆ ಆರ್ಭಟಕ್ಕೆ 14 ಜನ ಸಾವು

ಉತ್ತರ ಪ್ರದೇಶದಲ್ಲಿ ಮಳೆ ಆರ್ಭಟಕ್ಕೆ 14 ಜನ ಸಾವು

0
ಉತ್ತರ ಪ್ರದೇಶದಲ್ಲಿ ಮಳೆ ಆರ್ಭಟಕ್ಕೆ 14 ಜನ ಸಾವು

ಲಕ್ನೋ, ಜು.13-ಉತ್ತರ ಪ್ರದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ ಮಳೆ ಸಂಬಂಧಿತ ದುರಂತದಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ.ಸಿಡಿಲು ,ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆಗಳು ಮತ್ತು ಹಾವು ಕಡಿತದಿಂದ ಸಂಭವಿಸಿವೆ ಎಂದು ಅದು ಹೇಳಿದೆ.

ಶನಿವಾರ ರಾತ್ರಿ 8 ಗಂಟೆಯಿಂದ ಭಾನುವಾರ ರಾತ್ರಿ 8 ಗಂಟೆಯವರೆಗೆ ವರದಿ ಇದಾಗಿದ್ದು ಇಂದು ಮುಂಜಾನೆ ಇನ್ನು ಕಲವು ಸಾವುಗಳು ಸಂಭವಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಗೋರಖ್‌ಪುರದಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದರೆ, ಜೌನ್‌ಪುರ, ರಾಯ್‌ಬರೇಲಿ, ಚಂದೌಲಿ, ಕುಶಿನಗರ ಮತ್ತು ಕಾನ್ಪುರ್‌ ದೇಹತ್‌ನಲ್ಲಿ ಇದೇ ರೀತಿಯ ಘಟನೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ಚಿತ್ರಕೂಟದಲ್ಲಿ ಇಬ್ಬರು ಮತ್ತು ಬಂದಾದಲ್ಲಿ ಒಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಘಾಜಿಪುರದಲ್ಲಿ ಇಬ್ಬರು ಮತ್ತು ಚಂದೌಲಿ ಮತ್ತು ಪ್ರತಾಪ್‌ಗಢದಲ್ಲಿ ತಲಾ ಒಬ್ಬರು ಹಾವು ಕಡಿತದಿಂದ ಸಾವನ್ನಪ್ಪಿದ್ದಾರೆ.ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಅದು ಜಿಲಾಡಳಿತ ಹೇಳಿದೆ.