ಬೆಂಗಳೂರು : ಆಟೋಗೆ ಲಾರಿ ಡಿಕ್ಕಿ ಹೊಡೆದು ಯುವತಿ ಸಾವು

ಬೆಂಗಳೂರು, ಸೆ.28– ಮೆಜೆಸ್ಟಿಕ್‌ಗೆ ಆಟೋದಲ್ಲಿ ಯುವತಿ ಹೋಗುತ್ತಿದ್ದಾಗ ಲಾರಿಡಿಕ್ಕಿ ಹೊಡೆದ ಪರಿಣಾಮ ಆಕೆ ಮೃತಪಟ್ಟಿರುವ ಘಟನೆ ಕಬ್ಬನ್‌ಪಾರ್ಕ್‌ ಸಂಚಾರಿ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ. ಕೇರಳ ಮೂಲದ ಶಾಲಿನಿ (24) ಮೃತಪಟ್ಟ ಯುವತಿ. ಆಟೋಚಾಲಕ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಬೆನ್‌ಸನ್‌ಟೌನ್‌ನ ಚಿನ್ನಪ್ಪಗಾರ್ಡನ್‌ನಿಂದ ಶಾಲಿನಿ ಅವರು ಯಾತ್ರಿ ಆ್ಯಪ್‌ ಮೂಲಕ ಆಟೋ ಬುಕ್‌ ಮಾಡಿಕೊಂಡು ಮೆಜೆಸ್ಟಿಕ್‌ ಕಡೆಗೆ ಮುಂಜಾನೆ 4 ಗಂಟೆ ಸುಮಾರಿನಲ್ಲಿ ಹೋಗುತ್ತಿದ್ದರು. ಪೊಲೀಸ್‍ ತಿಮಯ್ಯ ಜಂಕ್ಷನ್‌ಬಳಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಸಿಗ್ನಲ್‌ ಜಂಪ್‌ಮಾಡಿಕೊಂಡು … Continue reading ಬೆಂಗಳೂರು : ಆಟೋಗೆ ಲಾರಿ ಡಿಕ್ಕಿ ಹೊಡೆದು ಯುವತಿ ಸಾವು