Friday, October 11, 2024
Homeಬೆಂಗಳೂರುಬೆಂಗಳೂರು : ಆಟೋಗೆ ಲಾರಿ ಡಿಕ್ಕಿ ಹೊಡೆದು ಯುವತಿ ಸಾವು

ಬೆಂಗಳೂರು : ಆಟೋಗೆ ಲಾರಿ ಡಿಕ್ಕಿ ಹೊಡೆದು ಯುವತಿ ಸಾವು

A young woman died after a lorry collided with an auto

ಬೆಂಗಳೂರು, ಸೆ.28– ಮೆಜೆಸ್ಟಿಕ್‌ಗೆ ಆಟೋದಲ್ಲಿ ಯುವತಿ ಹೋಗುತ್ತಿದ್ದಾಗ ಲಾರಿಡಿಕ್ಕಿ ಹೊಡೆದ ಪರಿಣಾಮ ಆಕೆ ಮೃತಪಟ್ಟಿರುವ ಘಟನೆ ಕಬ್ಬನ್‌ಪಾರ್ಕ್‌ ಸಂಚಾರಿ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ.

ಕೇರಳ ಮೂಲದ ಶಾಲಿನಿ (24) ಮೃತಪಟ್ಟ ಯುವತಿ. ಆಟೋಚಾಲಕ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಬೆನ್‌ಸನ್‌ಟೌನ್‌ನ ಚಿನ್ನಪ್ಪಗಾರ್ಡನ್‌ನಿಂದ ಶಾಲಿನಿ ಅವರು ಯಾತ್ರಿ ಆ್ಯಪ್‌ ಮೂಲಕ ಆಟೋ ಬುಕ್‌ ಮಾಡಿಕೊಂಡು ಮೆಜೆಸ್ಟಿಕ್‌ ಕಡೆಗೆ ಮುಂಜಾನೆ 4 ಗಂಟೆ ಸುಮಾರಿನಲ್ಲಿ ಹೋಗುತ್ತಿದ್ದರು.

ಪೊಲೀಸ್‍ ತಿಮಯ್ಯ ಜಂಕ್ಷನ್‌ಬಳಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಸಿಗ್ನಲ್‌ ಜಂಪ್‌ಮಾಡಿಕೊಂಡು ಬಂದ ಲೋಡ್‌ಲಾರಿ ಇವರು ಪ್ರಯಾಣಿಸುತ್ತಿದ್ದ ಆಟೋಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಯುವತಿ ಗಂಭೀರಗಾಯಗೊಂಡರು.ತಕ್ಷಣ ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಆಟೋ ಚಾಲಕ ಇಮ್ರಾನ್‌ ಪವಾಡ ರೀತಿಯಲ್ಲಿ ಬದುಕುಳಿದಿದ್ದಾರೆ.

ಅಪಘಾತ ಸಂಭವಿಸುತ್ತಿದ್ದಂತೆ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.ಸುದ್ದಿ ತಿಳಿದು ಕಬ್ಬನ್‌ಪಾರ್ಕ್‌ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಯುವತಿಯ ಮೃತದೇಹವನ್ನು ಬೋರಿಂಗ್‌ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಲಾರಿ ಚಾಲಕನ ಪತ್ತೆಗೆ ಬಲೆಬೀಸಿದ್ದಾರೆ.

RELATED ARTICLES

Latest News