Friday, October 11, 2024
Homeಬೆಂಗಳೂರುಬೆಂಗಳೂರಿನ ಪ್ರತಿಷ್ಠಿತ ತಾಜ್‌ವೆಸ್ಟಂಡ್‌ ಹೋಟೆಲ್‌ಗೆ ಬಾಂಬ್‌ ಬೆದರಿಕೆ

ಬೆಂಗಳೂರಿನ ಪ್ರತಿಷ್ಠಿತ ತಾಜ್‌ವೆಸ್ಟಂಡ್‌ ಹೋಟೆಲ್‌ಗೆ ಬಾಂಬ್‌ ಬೆದರಿಕೆ

Bomb threat to Bengaluru's Taj West End luxury hotel a hoax: Police

ಬೆಂಗಳೂರು, ಸೆ. 28– ನಗರದ ಪ್ರತಿಷ್ಠಿತ ಹೋಟೆಲ್‌ವೊಂದಕ್ಕೆ ಬಾಂಬ್‌ ಬೆದರಿಕೆ ಇ-ಮೇಲ್‌ ಸಂದೇಶ ಬಂದಿದ್ದು ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಹೈಗ್ರೌಂಡ್ಸ್ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿರುವ ತಾಜ್‌ವೆಸ್ಟಂಡ್‌ ಹೋಟೆಲ್‌ಗೆ ಇಂದು ಬೆಳಗ್ಗೆ ಇ-ಮೇಲ್‌ವೊಂದು ಬಂದಿದ್ದು, ಅದರಲ್ಲಿ ಹೋಟೆಲ್‌ಗೆ ಬಾಂಬ್‌ ಇಡಲಾಗಿದೆ ಅದು ಕೆಲವೇ ನಿಮಿಷಗಳಲ್ಲಿ ಸ್ಪೋಟಗೊಳ್ಳಲಿದೆ ಎಂಬ ಬೆದರಿಕೆ ಹಾಕಲಾಗಿತ್ತು.

ಈ ಸಂದೇಶವನ್ನು ಗಮನಿಸಿದ ಹೋಟೆಲ್‌ ಸಿಬ್ಬಂದಿ ಸಂಬಂಧಿಸಿದವರಿಗೆ ತಿಳಿಸಿದ್ದು, ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಪೊಲೀಸರು, ಬಾಂಬ್‌ ನಿಷ್ಕ್ರಿಯದಳ, ಬಾಂಬ್‌ಪತ್ತೆದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಹೋಟೆಲ್‌ ಸೇರಿದಂತೆ ಸುತ್ತಮುತ್ತ ಆವರಣ ಪರಿಶೀಲಿಸಿದಾಗ ಯಾವುದೇ ಬಾಂಬ್‌ ಪತ್ತೆಯಾಗಿಲ್ಲ. ಇದು ಹುಸಿ ಸಂದೇಶ ಎಂಬುದು ಗೊತ್ತಾಗಿ ಹೋಟೆಲ್‌ನವರು ನಿಟ್ಟುಸಿರು ಬಿಟ್ಟಿದ್ದಾರೆ.

ಇತ್ತೀಚೆಗೆ ಖಾಸಗಿ ಶಾಲೆಗಳು, ವಿಮಾನ ನಿಲ್ದಾಣಕ್ಕೆ ಬಾಂಬ್‌ ಬೆದರಿಕೆ ಇ-ಮೇಲ್‌ ಸಂದೇಶ ಬಂದಿದ್ದ ಬೆನ್ನಲ್ಲೇ ಇದೀಗ ಪ್ರತಿಷ್ಠಿತ ಹೋಟೆಲ್‌ಗೆ ಬಾಂಬ್‌ ಸಂದೇಶ ಬಂದಿರುವುದು ಆತಂಕಕ್ಕೀಡುಮಾಡಿದೆ.

RELATED ARTICLES

Latest News