ಐಎಎಸ್ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ

0
9743

ಜೈಪುರ,ಅ.28- ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಮೇಲೆ ಹಿರಿಯ ಐಎಎಸ್ ಅಧಿಕಾರಿಯೊಬ್ಬರ ಮನೆ ಮೇಲೆ ರಾಜಸ್ಥಾನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಹಕಾರಿ ಇಲಾಖೆಯಲ್ಲಿ ರಿಜಿಸ್ಟ್ರಾರ್ ಆಗಿ ನಿಯೋಜನೆಗೊಂಡಿರುವ ಐಎಎಸ್ ಅಧಿಕಾರಿ ಮೇಘರಾಜ್ ಸಿಂಗ್ ರತ್ನು ಅವರ ನಿವಾಸದಲ್ಲಿ ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶೋಧ ನಡೆಸಿದೆ ಎಂದು ವರದಿಯಾಗಿದೆ.

ಜೈಪುರ, ಅಜ್ಮೀರ್, ಶ್ರೀಗಂಗಾನಗರ, ಜೈಸಲ್ಮೇರ್ ಮತ್ತು ಸಿಕರ್‍ನ ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದೆ. ರತ್ನು ಅವರ ಕಚೇರಿಯಲ್ಲೂ ಶೋಧ ನಡೆಸಲಾಗಿದೆ ಎಂದು ಎಸಿಬಿಯ ಹೆಚ್ಚುವರಿ ಮಹಾನಿರ್ದೇಶಕ ಹೇಮಂತ್ ಪ್ರಿಯದರ್ಶಿ ತಿಳಿಸಿದ್ದಾರೆ.

ಮಂಗಳೂರು ಪೊಲೀಸ್ ಕಮಿಷನರ್ ಹೆಸರಿನಲ್ಲಿ ವಂಚನೆ

ರತ್ನು ಮತ್ತು ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿರುವ ಜಮೀನು, ಫ್ಲ್ಯಾಟ್‍ಗಳು, ಲೀಸ್ ಸೇರಿದಂತೆ ಆಸ್ತಿಗಳು, 6 ಲಕ್ಷ ನಗದು ಮತ್ತು ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ಬ್ಯಾಂಕ್ ಖಾತೆ ವಿವರಗಳು ಮತ್ತು ದಾಖಲೆಗಳು ಶೋಧದ ವೇಳೆ ಪತ್ತೆಯಾಗಿವೆ ಎಂದು ಅವರು ಹೇಳಿದರು.

ರತ್ನು ತನ್ನ ಮಗಳ ವಿದ್ಯಾಭ್ಯಾಸಕ್ಕೆ 60 ಲಕ್ಷ ಮತ್ತು ಆಕೆಯ ಮದುವೆಗೆ 1.5 ಕೋಟಿ ಖರ್ಚು ಮಾಡಿರುವ ಬಗ್ಗೆ ಎಸಿಬಿಗೆ ಮಾಹಿತಿ ಸಿಕ್ಕಿದೆ ಎಂದು ಪ್ರಿಯದರ್ಶಿ ಹೇಳಿದ್ದಾರೆ. ವಸೂಲಿಯಾದ ಆಸ್ತಿಗಳ ಒಟ್ಟು ಮೌಲ್ಯ ಅಂತಿಮ ಮೌಲ್ಯಮಾಪನದ ನಂತರ ತಿಳಿಯಲಿದೆ ಎಂದರು.