Home ಅಂತಾರಾಷ್ಟ್ರೀಯ | International ಬ್ರೆಜಿಲ್‌ನಲ್ಲಿ ಭಾರಿ ಪ್ರವಾಹಕ್ಕೆ 75 ಮಂದಿ ಬಲಿ

ಬ್ರೆಜಿಲ್‌ನಲ್ಲಿ ಭಾರಿ ಪ್ರವಾಹಕ್ಕೆ 75 ಮಂದಿ ಬಲಿ

0
ಬ್ರೆಜಿಲ್‌ನಲ್ಲಿ ಭಾರಿ ಪ್ರವಾಹಕ್ಕೆ 75 ಮಂದಿ ಬಲಿ

ರಿಯೋ ಡಿ ಜನೈರೋ,ಮೇ 6- ಬ್ರೆಜಿಲ್‌ನ ದಕ್ಷಿಣದಲ್ಲಿರುವ ರಿಯೋ ಗ್ರಾಂಡೆ ಡೋ ಸುಲ್‌ ರಾಜ್ಯದಲ್ಲಿ ಉಂಟಾಗಿರುವ ಭಾರಿ ಪ್ರವಾಹದಿಂದಾಗಿ ಕಳೆದ ಏಳು ದಿನಗಳಲ್ಲಿ ಕನಿಷ್ಠ ಪಕ್ಷ 75 ಜನರು ಮೃತಪಟ್ಟಿದ್ದು ಇತರ 103 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿರುವುದಾಗಿ ಸ್ಥಳಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕನಿಷ್ಠ ಪಕ್ಷ 155 ಮಂದಿ ಗಾಯಗೊಂಡಿದ್ದಾರೆ. ಮಳೆಯಿಂದ ಉಂಟಾದ ಹಾನಿ 88,000 ಕ್ಕೂ ಅಧಿಕ ಮಂದಿ ಮನೆ ತೊರೆಯುವಂತೆ ಮಾಡಿದೆ. ಅಂದಾಜು 16,000 ಜನರು ಶಾಲೆಗಳು, ಜಿಮ್ನಾಷಿಯಂಗಳು ಮತ್ತು ಇತರ ತಾತ್ಕಾಲಿಕ ಸೂರುಗಳಡಿ ಆಶ್ರಯ ಪಡೆದಿದ್ದಾರೆ.

ಪ್ರವಾಹವು ರಾಜ್ಯವನ್ನು ಉಧ್ವಸ್ತಗೊಳಿಸಿದೆ. ಭೂ ಕುಸಿತಗಳು, ಕೊಚ್ಚಿ ಹೋದ ರಸ್ತೆಗಳು, ಕುಸಿದು ಬಿದ್ದ ಸೇತುವೆಗಳ ದೃಶ್ಯ ರಾಜ್ಯದೆಲ್ಲೆಡೆ ಗೋಚರಿಸುತ್ತಿದೆ. ವಿದ್ಯುಚ್ಛಕ್ತಿ ಮತ್ತು ಇತರ ಸಂಪರ್ಕಗಳು ಕಡಿತಗೊಂಡಿವೆ. 8 ಲಕ್ಷಕ್ಕೂ ಅಧಿಕ ಜನರಿಗೆ ನೀರಿನ ಪೂರೈಕೆ ಇಲ್ಲದೆ ತೀವ್ರ ತೊಂದರೆಯಾಗಿದೆ ಎಂದು ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ.