ಬೆಂಗಳೂರು : ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆಟೋ ಚಾಲಕ

ಬೆಂಗಳೂರು,ಅ.2-ಹೆಚ್ಚಿನ ಬಾಡಿಗೆ ಕೊಡುವುದಿಲ್ಲ ಎಂದು ಯುವತಿ ಹೇಳಿದ್ದಕ್ಕೆ ಆಟೋ ಚಾಲಕನೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ನಗರದಲ್ಲಿ ನಡೆದಿದೆ. ಮಹಿಳಾ ಪ್ರಯಾಣಿಕರೊಬ್ಬರು ಆಟೋ ಹತ್ತುವಾಗಲೇ ಚಾಲಕ ಹೆಚ್ಚಿನ ಹಣ ಕೇಳಿದ್ದಾನೆ. ಆಕೆ 150 ರೂ. ಕೊಡುವುದಾಗಿ ಹೇಳಿದಾಗ ಕೋಪಗೊಂಡ ಚಾಲಕ ಆಕೆ ಮೇಲೆ ರೇಗಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಸಿಲ್ಕ್ ಬೋರ್ಡ್‌ ಇಲ್ಲೇ ಇದ್ಯಾ ಎಂದು ಛೇಡಿಸಿದ್ದಾನೆ. ಆಟೋ ಚಾಲಕನ ವರ್ತನೆಯನ್ನು ಯುವತಿ ವಿಡಿಯೋ ಮಾಡಿಕೊಂಡು ನಗರ ಪೊಲೀಸರಿಗೆ ಎಕ್ಸ್ ಖಾತೆಯಲ್ಲಿ ಟ್ಯಾಗ್‌ ಮಾಡಿ ಪೋಸ್ಟ್‌ ಮಾಡಿದ್ದಾರೆ. … Continue reading ಬೆಂಗಳೂರು : ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆಟೋ ಚಾಲಕ