Friday, October 11, 2024
Homeಬೆಂಗಳೂರುಬೆಂಗಳೂರು : ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆಟೋ ಚಾಲಕ

ಬೆಂಗಳೂರು : ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆಟೋ ಚಾಲಕ

Auto driver abuses young woman

ಬೆಂಗಳೂರು,ಅ.2-ಹೆಚ್ಚಿನ ಬಾಡಿಗೆ ಕೊಡುವುದಿಲ್ಲ ಎಂದು ಯುವತಿ ಹೇಳಿದ್ದಕ್ಕೆ ಆಟೋ ಚಾಲಕನೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ನಗರದಲ್ಲಿ ನಡೆದಿದೆ. ಮಹಿಳಾ ಪ್ರಯಾಣಿಕರೊಬ್ಬರು ಆಟೋ ಹತ್ತುವಾಗಲೇ ಚಾಲಕ ಹೆಚ್ಚಿನ ಹಣ ಕೇಳಿದ್ದಾನೆ.

ಆಕೆ 150 ರೂ. ಕೊಡುವುದಾಗಿ ಹೇಳಿದಾಗ ಕೋಪಗೊಂಡ ಚಾಲಕ ಆಕೆ ಮೇಲೆ ರೇಗಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಸಿಲ್ಕ್ ಬೋರ್ಡ್‌ ಇಲ್ಲೇ ಇದ್ಯಾ ಎಂದು ಛೇಡಿಸಿದ್ದಾನೆ. ಆಟೋ ಚಾಲಕನ ವರ್ತನೆಯನ್ನು ಯುವತಿ ವಿಡಿಯೋ ಮಾಡಿಕೊಂಡು ನಗರ ಪೊಲೀಸರಿಗೆ ಎಕ್ಸ್ ಖಾತೆಯಲ್ಲಿ ಟ್ಯಾಗ್‌ ಮಾಡಿ ಪೋಸ್ಟ್‌ ಮಾಡಿದ್ದಾರೆ.

ನಗರ ಪೊಲೀಸರು ಯುವತಿ ಹಾಕಿರುವ ಪೋಸ್ಟ್‌ ಗಮನಿಸಿ ಘಟನೆ ನಡೆದ ಸ್ಥಳದ ಬಗ್ಗೆ ನಿಖರ ಮಾಹಿತಿ ನೀಡುವಂತೆ ಕೇಳಿದ್ದಾರೆ. ಸೆ.2ರಂದು ಮಾಗಡಿ ರಸ್ತೆ ಪೋಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಆಟೋ ಬುಕಿಂಗ್‌ ಕ್ಯಾನ್ಸಲ್‌ ಮಾಡಿದ್ದಕ್ಕೆ ಆಟೋ ಚಾಲಕ ಯುವತಿಗೆ ನಿಂದಿಸಿದ ಘಟನೆ ಮಾಸುವ ಮುನ್ನವೇ ಇದೀಗ ಅದೇ ರೀತಿಯ ಮತ್ತೊಂದು ಘಟನೆ ನಗರದಲ್ಲಿ ನಡೆದಿದೆ.

ನಗರದಲ್ಲಿ ಆಗಿಂದಾಗ್ಗೆ ಆಟೋ ಚಾಲಕರು ಈ ರೀತಿ ವರ್ತಿಸಿದರೆ ಮಹಿಳಾ ಪ್ರಯಾಣಿಕರು ಆಟೋಗಳಲ್ಲಿ ಪ್ರಯಾಣಿಸಲು ಹಿಂದೇಟು ಹಾಕುವುದರಲ್ಲಿ ಸಂಶಯವಿಲ್ಲ.

RELATED ARTICLES

Latest News