Friday, October 11, 2024
Homeಬೆಂಗಳೂರುಮಹಿಳೆ ಎದುರು ಪ್ಯಾಂಟ್ ಜಿಪ್ ತೆಗೆದು ಅಸಭ್ಯವಾಗಿ ವರ್ತಿಸಿದ ಆಟೋ ಚಾಲಕ ಅರೆಸ್ಟ್

ಮಹಿಳೆ ಎದುರು ಪ್ಯಾಂಟ್ ಜಿಪ್ ತೆಗೆದು ಅಸಭ್ಯವಾಗಿ ವರ್ತಿಸಿದ ಆಟೋ ಚಾಲಕ ಅರೆಸ್ಟ್

An auto driver who unzipped his pants and behaved rudely in front of a woman was arrested

ಬೆಂಗಳೂರು,ಅ.2– ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಬ್ಯೂಟಿಷಿಯನ್‌ ಎದುರು ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದ ಆಟೋ ಚಾಲಕನನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಲ್ಲೇಶ್ವರದ ವಿನೋಬಾನಗರ ನಿವಾಸಿ ಅಶೋಕ್‌ಕುಮಾರ್‌(36) ಬಂಧಿತ ಆಟೋ ಚಾಲಕ. ಸೆ.18ರಂದು ಮಧ್ಯಾಹ್ನ ಬ್ಯೂಟಿಷಿಯನ್ ನಡೆದುಕೊಂಡು ಮನೆಗೆ ಊಟಕ್ಕೆ ಹೋಗುತ್ತಿದ್ದಾಗ ರಾಜಾಜಿನಗರ 6ನೇ ಬ್ಲಾಕ್ 72ನೇ ಕ್ರಾಸ್ನ ಮಾರ್ಗಮಧ್ಯೆ ಆಟೋ ಚಾಲಕ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿ ಪ್ಯಾಂಟ್ ಜಿಪ್ ತೆಗೆದು ಅಸಭ್ಯವಾಗಿ ವರ್ತಿಸಿದ್ದಾನೆ.

ತಕ್ಷಣ ಬ್ಯೂಟಿಷಿಯನ್‌ ಸಹಾಯಕ್ಕಾಗಿ ಕೂಗಿಕೊಳ್ಳುತ್ತಿದ್ದಂತೆ ಆಟೋ ಚಾಲನೆ ಮಾಡಿಕೊಂಡು ಪರಾರಿಯಾಗಿದ್ದನು. ಈ ಬಗ್ಗೆ ಮಾಗಡಿರಸ್ತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶೋಧ ನಡೆಸಿ ಇದೀಗ ಆಟೋ ಚಾಲಕನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News