Friday, October 11, 2024
Homeಬೆಂಗಳೂರುಮಾರಕಾಸ್ತ್ರಗಳನ್ನು ಹಿಡಿದು ಹೊಡೆದಾಡಿಕೊಂಡ ರೌಡಿಗಳಿಗೆ ಪೊಲೀಸರ ಹುಡುಕಾಟ

ಮಾರಕಾಸ್ತ್ರಗಳನ್ನು ಹಿಡಿದು ಹೊಡೆದಾಡಿಕೊಂಡ ರೌಡಿಗಳಿಗೆ ಪೊಲೀಸರ ಹುಡುಕಾಟ

Police search for the rowdies who fought with weapons

ಬೆಂಗಳೂರು,ಅ.2- ನಡುರಸ್ತೆಯಲ್ಲಿಯೇ ಮಾರಕಾಸ್ತ್ರಗಳನ್ನು ಹಿಡಿದು ಮಾರಾಮಾರಿ ನಡೆಸಿ ಪರಾರಿಯಾಗಿರುವ ರೌಡಿಗಳಿಗಾಗಿ ಹನುಮಂತನಗರ ಠಾಣೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಶ್ರೀನಗರದ ರಾಘವೇಂದ್ರ ಬ್ಲಾಕ್ನಲ್ಲಿ ಸೆ.22ರಂದು ರಾತ್ರಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಎರಡು ರೌಡಿಗಳ ಗುಂಪುಗಳ ನಡುವೆ ಗಲಾಟೆಯಾಗಿ, ಲಾಂಗ್, ಕ್ರಿಕೆಟ್ ಬ್ಯಾಟ್ಗಳನ್ನು ಝಳಪಿಸಿ ಹೊಡೆದಾಡಿಕೊಂಡಿದ್ದಾರೆ. ಈ ಘಟನೆಯನ್ನು ಸಾರ್ವಜನಿಕರೊಬ್ಬರು ವಿಡಿಯೋ ಮಾಡಿ ನಗರ ಪೊಲೀಸರಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದು, ಇದೀಗ ವೈರಲ್ಲಾಗಿದೆ.

ನಡುರಸ್ತೆಯಲ್ಲಿ ಈ ರೀತಿ ಹೊಡೆದಾಡಿಕೊಂಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹನುಮಂತನಗರ ಠಾಣೆ ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ರೌಡಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿ ಮನೆಗೆ ನುಗ್ಗಿ ರೌಡಿ ಸೇರಿದಂತೆ ಆತನ ಸ್ನೇಹಿತರ ಮೇಲೆ ಮಾರಕಾಸಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ಮೂವರು ರೌಡಿಗಳು ಸೇರಿ 6 ಮಂದಿಯನ್ನು ಪೊಲೀಸರು ಬಂಽಸಿದ್ದು, ಹನುಮಂತನಗರದಲ್ಲಿ ಮಾರಾಮಾರಿ ನಡೆಸಿ ತಲೆಮರೆಸಿಕೊಂಡಿರುವ ರೌಡಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

RELATED ARTICLES

Latest News