ಸುಲಿಗೆ : ಇಬ್ಬರು ರೌಡಿ ಸೇರಿ ಮೂವರ ಸೆರೆ

ಬೆಂಗಳೂರು, ಜ.16- ಹೆಲ್ಮೆಟ್ ಧರಿಸಿ ಬೈಕ್‍ನಲ್ಲಿ ಸುತ್ತಾಡುತ್ತಾ ಸರ ಅಪಹರಿಸುತ್ತಿದ್ದ ಇಬ್ಬರು ರೌಡಿಗಳು ಸೇರಿದಂತೆ ಮೂವರು ಆರೋಪಿಗಳನ್ನು ರಾಜಗೋಪಾಲ ನಗರ ಠಾಣೆ ಪೊಲೀಸರು ಬಂಧಿಸಿ 90 ಸಾವಿರ ಬೆಲೆಯ ಸರ ಮತ್ತು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ಪ್ರಾವಿಜನ್ ಸ್ಟೋರ್ ಅಂಗಡಿ ನಡೆಸುವ ಪಿರ್ಯಾದುದಾರರು ಡಿ. 14ರಂದು ಸಂಜೆ 5.45ರ ಸುಮಾರಿನಲ್ಲಿ ಮಗನನ್ನು ಕರೆದುಕೊಂಡು ಹೆಗ್ಗನಹಳ್ಳಿ ಕ್ರಾಸ್, ಸಂಜೀವಿನಿ ನಗರ, 8ನೇ ಕ್ರಾಸ್ ನಲ್ಲಿ ನಡೆದು ಕೊಂಡು ಮನೆಗೆ ಹೋಗುತ್ತಿದ್ದರು.ಆ ವೇಳೆ ಎದುರಿನಿಂದ ಬೈಕ್‍ನಲ್ಲಿ ಹೆಲ್ಮೆಟ್ […]

ಸರ್ಕಾರದ ಆಡಳಿತ ರೌಡಿಗಳ ಹಿಡಿತದಲ್ಲಿದೆ : ಪ್ರಿಯಾಂಕ್ ಖರ್ಗೆ

ಕಲಬುರಗಿ,ಜ.6- ರಾಜ್ಯದಲ್ಲಿ ಬಿಜೆಪಿ ಪಕ್ಷವಾಗಲಿ, ಮುಖ್ಯಮಂತ್ರಿಯವರಾಗಲಿ ಸರ್ಕಾರ ನಡೆಸುತ್ತಿಲ್ಲ. ಬದಲಾಗಿ ರೌಡಿಗಳು ಆಡಳಿತ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ದೇಶದಲ್ಲಷ್ಟೆ ಅಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕಕ್ಕೆ ಭ್ರಷ್ಟ ಸರ್ಕಾರ ಎಂಬ ಅಪಕೀರ್ತಿ ಬಂದಿದೆ. ಬಿಜೆಪಿ ಭಾರತೀಯ ಜನತಾ ಪಕ್ಷವಾಗಿ ಉಳಿದಿಲ್ಲ, ಬ್ರೋಕರ್ಸ್ ಜನತಾ ಪಕ್ಷವಾಗಿದೆ ಎಂದು ಕಿಡಿಕಾರಿದರು. ಪವಿತ್ರವಾದ ವಿಧಾನಸೌಧವನ್ನು ವ್ಯಾಪಾರ ಸೌಧ ಮಾಡಲಾಗಿದೆ. ಬಿಜೆಪಿಯವರ ಭ್ರಷ್ಟಚಾರದಿಂದ ವಿಧಾನಸೌಧ ತನ್ನ ಪಾವಿತ್ರ್ಯವನ್ನು ಕಳೆದುಕೊಂಡು, ದೊಡ್ಡ ಶಾಪಿಂಗ್ ಮಾಲ್ ಆಗಿದೆ. […]

ರೌಡಿಗಳಿಗೆ ಖಾಕಿ ಚಾಟಿ : ಗೂಂಡಾ ಕಾಯ್ದೆಯಡಿ 23 ಮಂದಿ ಬಂಧನ, 13 ಮಂದಿ ಗಡಿಪಾರು

ಬೆಂಗಳೂರು, ಜ.4- ನಗರದಲ್ಲಿ ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕಲಾಗಿದ್ದು, ಕಳೆದ 2022ನೇ ಸಾಲಿನಲ್ಲಿ 22 ಮಂದಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, 40 ರೌಡಿಗಳ ವಿರುದ್ಧ ಬಾಂಡ್‍ಗಳ ಮೊತ್ತಕ್ಕೆ ಮುಟ್ಟುಗೋಲು ಹಾಕಿಕೊಂಡಿದ್ದು, 13 ಮಂದಿಯನ್ನು ಗಡಿ ಪಾರು ಮಾಡಲಾಗಿದೆ. ಭದ್ರತಾ ಕಾಯ್ದೆಯಡಿ ಒಟ್ಟು 3100 ಮಂದಿ ವಿರುದ್ಧ ಕ್ರಮ ಜರುಗಿಸಲಾಗಿದ್ದು, ಷ ರತ್ತು ಉಲ್ಲಂಘನೆ ಮಾಡಿದ 34 ರೌಡಿಗಳನ್ನು ಕಾರಗೃಹಕ್ಕೆ […]

ಯಾವುದೇ ಕಾರಣಕ್ಕೂ ರೌಡಿಗಳನ್ನು ಬಿಜೆಪಿಗೆ ಸೇರಿಸಿಕೊಳ್ಳಲ್ಲ : ಬೊಮ್ಮಾಯಿ

ಬೆಂಗಳೂರು,ಡಿ.1- ಯಾವುದೇ ಕಾರಣಕ್ಕೂ ಅಪರಾಧ ಹಿನ್ನಲೆಯುಳ್ಳ ರೌಡಿಗಳನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವುದೇ ಇಲ್ಲ. ಈ ನಿಲುವಿನಲ್ಲಿ ಬದಲಾವಣೆ ಇಲ್ಲವೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುನರುಚ್ಚರಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೌಡಿಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕಾದ ಅಗತ್ಯ ನಮಗಿಲ್ಲ. ಅಂಥವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ರಾಜಕಾರಣ ಮಾಡಬೇಕಾದ ಅಗತ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಈಗಾಗಲೇ ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ನಳೀನ್‍ಕುಮಾರ್ ಕಟೀಲ್ ಅವರೇ ಸ್ಪಷ್ಟಪಡಿಸಿರುವುದರಿಂದ ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನಮಗೆ ಇಂತಹ […]

ಕಾಂಗ್ರೆಸ್ ರೌಡಿಗಳ ಪಕ್ಷ, ನಮ್ಮದು ಸುಸಂಸ್ಕೃತರ ಪಕ್ಷ : ಈಶ್ವರಪ್ಪ

ಶಿವಮೊಗ್ಗ,ನ.30- ಕಾಂಗ್ರೆಸ್ ರೌಡಿಗಳ ಪಕ್ಷ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿಗೆ ಹೋಗಿ ಬಂದವರು ಎಂದು ಕಾಂಗ್ರೆಸ್‍ಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ರೌಡಿಶೀಟರ್ ಸೈಲೆಂಟ್ ಸುನೀಲ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಲೇವಡಿ ಮಾಡಿದ್ದ ಕಾಂಗ್ರೆಸ್, ಬಿಜೆಪಿ ರೌಡಿಗಳ ಪಕ್ಷ ಎಂದು ಹರಿಹಾಯ್ದಿತ್ತು. ಇದಕ್ಕೆ ಟಾಂಗ್ ನೀಡಿರುವ ಈಶ್ವರಪ್ಪ, ನಮ್ಮದು ರೌಡಿಗಳ ಪಕ್ಷ ಅಲ್ಲ. ಸುಸಂಸ್ಕೃತರ ಪಕ್ಷ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ತಿಹಾರ್ ಜೈಲಿಗೆ ಹೋಗಿ ಬಂದವರು. ಕಾಂಗ್ರೆಸ್‍ನ ಯುವ ಮೋರ್ಚಾ ಅಧ್ಯಕ್ಷ ನಲಪಾಡ್ ಬಾರ್‍ನಲ್ಲಿ […]

ರೌಡಿಗಳಿಗೆ ಬಿಸಿ ಮುಟ್ಟಿಸಿದ ಸಿಸಿಬಿ ಪೊಲೀಸರು

ಬೆಂಗಳೂರು, ನ.23- ಬಿಬಿಎಂಪಿ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿದ್ದು, ಕೆಲವು ರೌಡಿಗಳು ರಾಜಕೀಯ ಪ್ರವೇಶಿಸಿ ಗಣ್ಯ ವ್ಯಕ್ತಿಗಳಾಗುವ ತಯಾರಿಯಲ್ಲಿರುವಾಗಲೆ ಸಿಸಿಬಿ ಪೊಲೀಸರು ಇಂದು ಬೆಳಗ್ಗೆ ದಿಢೀರ್ ದಾಳಿ ನಡೆಸಿ ಶಾಕ್ ನೀಡಿದ್ದಾರೆ. ಮುಂಜಾನೆ ಸಿಸಿಬಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ನಗರಾದ್ಯಂತ ರೌಡಿಗಳ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಕೆಲ ರೌಡಿಗಳು ನ್ಯಾಯಾಲಯದಿಂದ ವಾರೆಂಟ್ ಜಾರಿ ಆಗಿದ್ದರೂ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದರು. ಇನ್ನೂ ಹಲವರು ಕೆಲವು ಪ್ರಕರಣಗಳಲ್ಲಿ ಬೇಕಾಗಿದ್ದರು. ಈ ಹಿನ್ನೆಲೆಯಲ್ಲಿ ನಗರಾದ್ಯಂತ ಮುಂಜಾನೆಯಿಂದಲೇ ಕಾರ್ಯಾಚರಣೆಗಿಳಿದ ಸಿಸಿಬಿ ಪೊಲೀಸರು […]

ರೌಡಿಗಳಿಗೆ ಪಿಸ್ತೂಲ್ ಮಾರಾಟ, ಇಬ್ಬರ ಸೆರೆ

ಬೆಂಗಳೂರು,ನ.8- ಮುಂಬೈನಿಂದ ಪಿಸ್ತೂಲು ಖರೀದಿಸಿ ನಗರದಲ್ಲಿ ರೌಡಿಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ರೌಡಿ ಸೇರಿದಂತೆ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ ನಾಡ ಪಿಸ್ತೂಲು ಹಾಗೂ ನಾಲ್ಕು ಜೀವಂತ ಗುಂಡುಗಳನ್ನು ವಶಪಡಿಸಿ ಕೊಂಡಿದ್ದಾರೆ. ಹೆಣ್ಣೂರು ಪೊಲೀಸ್ ಠಾಣೆಯ ರೌಡಿ ಮಹಮ್ಮದ್ ಅರಾಫರ್ ಮತ್ತು ಮಹಮ್ಮದ್ ಸಾದತ್ ಮಾಝ್ ಬಂಧಿತ ಆರೋಪಿಗಳು. ರೌಡಿ ಮಹಮ್ಮದ್ ಅರಾಫತ್ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಯತ್ನ ಪ್ರಕರಣವಿದ್ದು, ನ್ಯಾಯಲಯದಲ್ಲಿ ವಿಚಾರಣೆ ಹಂತದಲ್ಲಿರುತ್ತದೆ. ಈತ ಮಹಮ್ಮದ್ ಸಾದತ್ ಮಾಝ್ ಜೊತೆ ನಾಡಪಿಸ್ತೂಲು […]