Thursday, May 2, 2024
Homeಇದೀಗ ಬಂದ ಸುದ್ದಿಯುವಕನ ಅಪಹರಿಸಿ ಸುಲಿಗೆ ಮಾಡಿ ಕೊಲೆಗೆ ಯತ್ನಿಸಿದ್ದ ರೌಡಿಗಳ ಸೆರೆ

ಯುವಕನ ಅಪಹರಿಸಿ ಸುಲಿಗೆ ಮಾಡಿ ಕೊಲೆಗೆ ಯತ್ನಿಸಿದ್ದ ರೌಡಿಗಳ ಸೆರೆ

ಬೆಂಗಳೂರು, ಮಾ.3- ಹಣಕ್ಕಾಗಿ ಯುವಕನನ್ನು ಕಾರಿನಲ್ಲಿ ಅಪಹರಿಸಿ ಸುಲಿಗೆ ಮಾಡಿ ನಂತರ ಕೊಲೆಗೆ ಯತ್ನಿಸಿದ್ದ ಕುಖ್ಯಾತ ರೌಡಿ ಸೇರಿದಂತೆ ನಾಲ್ವರು ರೌಡಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊಸಕೆರೆಹಳ್ಳಿ ಕೇಕ್ ಆಫ್ ದಿ ಡೇ ಅಂಗಡಿಯ ಹತ್ತಿರದಿಂದ ಓರ್ವ ಯುವಕನನ್ನು ಹಣಕ್ಕಾಗಿ ಕಾರಿನಲ್ಲಿ ರೌಡಿಗಳು ಅಪಹರಣ ಮಾಡಿ, ನಂತರ ಆತನ ಮೊಬೈಲ್ ಮತ್ತು ನಗದು ಹಣವನ್ನು ಸುಲಿಗೆ ಮಾಡಿದ್ದರು.ತದನಂತರ ಅಪಹರಣಗೊಂಡ ಯುವಕನ ಸ್ನೇಹಿತನಿಗೆ ಮೊಬೈಲ್ ಕರೆ ಮಾಡಿ 3 ಲಕ್ಷ ಹಣಕ್ಕೆ ಬೇಡಿಕೆಯನ್ನು ಇಟ್ಟಿದ್ದರು. ಈ ಬಗ್ಗೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಪಹರಣಕಾರರನ್ನು ಪತ್ತೆ ಹಚ್ಚಲು ಸಿಸಿಬಿ ಪೊಲೀಸರು ಒಂದು ತಂಡವನ್ನು ರಚಿಸಿದ್ದರು. ಈ ತಂಡವು ವಿವಿಧ ಆಯಾಮಗಳಲ್ಲಿ ಕಾರ್ಯಾಚರಣೆ ಕೈಗೊಂಡು ಅಪಹರಣಗೊಂಡಿದ್ದ ವ್ಯಕ್ತಿಯನ್ನು ರಕ್ಷಿಸಿ ನಾಲ್ವರು ರೌಡಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಪಹರಣ ಮಾಡಿದ ನಾಲ್ವರ ಪೈಕಿ ಒಬ್ಬ ಚನ್ನಮ್ಮನಕೆರೆ ಅಚ್ಚುಕಟ್ಟು, ಚಾಮರಾಜಪೇಟೆ ಮತ್ತು ಸುಬ್ರಮಣ್ಯಪುರ ಪೊಲೀಸ್ ಠಾಣೆಗಳಲ್ಲಿ ರೌಡಿ ಹಾಳೆಯನ್ನು ಹೊಂದಿರುತ್ತಾನೆ.

ಈತನ ಇತರೆ ಮೂವರು ಸಹಚರರು ಸಹ ವಿವಿಧ ಪೊಲೀಸ್ ಠಾಣೆಗಳಲ್ಲಿ ರೌಡಿ ಹಾಳೆಯನ್ನು ಹೊಂದಿರುತ್ತಾರೆ.
ವಶಕ್ಕೆ ಪಡೆದ ನಾಲ್ವರು ರೌಡಿಗಳನ್ನು ಸುದೀರ್ಘವಾಗಿ ವಿಚಾರಣೆ ಮಾಡಿದಾಗ, 3 ಲಕ್ಷ ಹಣವನ್ನು ಪಡೆದ ನಂತರ ಅಪಹರಣಕ್ಕೊಳಗಾದ ಯುವಕನನ್ನು ಕೊಲೆ ಮಾಡಿ, ಸಾಕ್ಷಿ ನಾಶ ಪಡಿಸುವ ಉದ್ದೇಶವನ್ನು ಹೊಂದಿದ್ದರ ಬಗ್ಗೆ ತಿಳಿದು ಬಂದಿರುತ್ತದೆ. ಈ ಕಾರ್ಯಾಚರಣೆಯನ್ನು ಸಿ.ಸಿ.ಬಿಯ ಸಂಘಟಿತ ಅಪರಾಧ ದಳ (ಪಶ್ಚಿಮ)ದ ಅಧಿಕಾರಿ ಮತ್ತು ಸಿಬ್ಬಂದಿಗಳು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ನೈಜೀರಿಯಾ ಪ್ರಜೆಗಳ ಸೆರೆ : 67ಲಕ್ಷ ರೂ.ಮೌಲ್ಯದ ಡ್ರಗ್ಸ್ ಜಪ್ತಿ

ಬೆಂಗಳೂರು, ಮಾ.1- ನೈಜೀರಿಯಾ ದೇಶದ ಇಬ್ಬರು ಪ್ರಜೆಗಳನ್ನು ಯಲಹಂಕ ಉಪ ನಗರ ಠಾಣೆ ಪೊಲೀಸರು ಬಂಧಿಸಿ 67.50 ಲಕ್ಷ ಮೌಲ್ಯದ ನಿಷೇಧಿತ ಮಾದಕ ವಸ್ತು ಕೊಕೈನ್ ಮತ್ತು ಎಂಡಿಎಂಎ ಕ್ರಿಸ್ಟೀಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಸಿಬ್ಬಂದಿಯವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡು ವೀರಸಾಗರ ಗ್ರಾಮ, ಜಾರಕ್‍ಬಂಡೆ ಕಾವಲು ಮುಖ್ಯ ರಸ್ತೆಯಲ್ಲಿ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ನಿಷೇಧಿತ ಮಾದಕ ವಸ್ತುಗಳಾದ ಕೊಕೇನ್ ಮತ್ತು ಎಂಡಿಎಂಎ ಕ್ರಿಸ್ಟೇಲ್‍ಗಳನ್ನು ಸಾರ್ವಜನಿಕರಿಗೆ ಮತ್ತು ವಿಧ್ಯಾರ್ಥಿಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ 1 ಕೆ.ಜಿ 25 ಗ್ರಾಂ ತೂಕದ ಕೊಕೇನ್ ಹಾಗೂ 50 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟೇಲ್‍ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಒಟ್ಟು ಮೌಲ್ಯ 67.50 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಯಲಹಂಕ ಉಪವಿಭಾಗ ಠಾಣೆ ಇನ್ಸ್‍ಪೆಕ್ಟರ್ ಸುಧಾಕರ್ ರೆಡ್ಡಿ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ಕೈಗೊಂಡಿದ್ದರು.

RELATED ARTICLES

Latest News