ಹೊಸ ವರ್ಷಾಚರಣೆಗೆ ಕಟ್ಟೆಚ್ಚರ: 10,000 ಪೊಲೀಸರ ಕಣ್ಗಾವಲು

ಬೆಂಗಳೂರು, ಡಿ.29- ನಗರದಲ್ಲಿ ಹೊಸ ವರ್ಷಾಚರಣೆಯ ಬಂದೋಬಸ್ತ್‍ಗಾಗಿ ಅಧಿಕಾರಿಗಳೂ ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಇಂದಿಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ವರ್ಷ ಸಂಭ್ರಮದ ಸಂದರ್ಭದಲ್ಲಿ ಮಹಿಳೆ ಮತ್ತು ಮಕ್ಕಳ ಸುರಕ್ಷತೆಯನ್ನು ಆದ್ಯತೆಯನ್ನಾಗಿ ಪರಿಗಣಿಸಿ ನಗರದಾದ್ಯಂತ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದರು. ಇಬ್ಬರು ಹೆಚ್ಚುವರಿ ಪೊಲೀಸರು, ಇಬ್ಬರು ಜಂಟಿ ಪೊಲೀಸ್ ಆಯುಕ್ತರು, 15 ಮಂದಿ ಡಿಸಿಪಿಗಳು, 45 […]

ಪೂರ್ವ ವಿಭಾಗ ಪೊಲೀಸರ ಕಾರ್ಯಾಚರಣೆ, 17 ಮಂದಿ ಬಂಧನ ; 50 ಲಕ್ಷ ಮೌಲ್ಯದ 78 ದ್ವಿಚಕ್ರ ವಾಹನ ವಶ

ಬೆಂಗಳೂರು, ಜು.30- ಪೂರ್ವ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ 17 ಮಂದಿ ಆರೋಪಿಗಳನ್ನು ಬಂಧಿಸಿ ಸುಮಾರು 50 ಲಕ್ಷ ಮೌಲ್ಯದ 78 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಪೂರ್ವ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಈ ಪ್ರಕರಣಗಳನ್ನು ಪತ್ತೆ ಹಚ್ಚಲು ಮತ್ತು ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ವಹಿಸುವ ಬಗ್ಗೆ ಸೂಚನೆಗಳನ್ನು ನೀಡಲಾಗಿತ್ತು. ಅದರಂತೆ ಅಧಿಕಾರಿ ಮತ್ತು ಸಿಬ್ಬಂದಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ […]

ಪಾರ್ಕ್ ಬಳಿ ಗಾಂಜಾ ಮಾರುತ್ತಿದ್ದ ಇಬ್ಬರು ಅರೆಸ್ಟ್

ಬೆಂಗಳೂರು, ಜು.9- ಪಾರ್ಕ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸದಾಶಿವ ನಗರ ಠಾಣೆ ಪೊಲೀಸರು ಬಂಧಿಸಿ 2 ಕೆಜಿ, 180 ಗ್ರಾಂ ತೂಕದ ಗಾಂಜಾ ಹಾಗೂ 800 ನಗದು, ಮೊಬೈಲ್ ಫೋನ್‍ನ್ನು ವಶಪಡಿಸಿಕೊಂಡಿದ್ದಾರೆ. ಒಡಿಸ್ಸಾ ರಾಜ್ಯದ ಮಹಾ ಪಾತ್ರ ಮತ್ತು ಛತ್ತೀಸ್‍ಗಡ ರಾಜ್ಯದ ರೋಲಾಕ್ ಸಿಂಗ್ ಬಂತ ಆರೋಪಿಗಳು. ಇವರುಗಳಿಂದ ತೂಕದ ಯಂತ್ರ, 50 ಗ್ರಾಂ ತೂಕವಿರುವ ಗಾಂಜಾ ಪಟ್ಟಣಗಳು, ಕೆಂಪು ಬಣ್ಣದ ಬ್ಯಾಗ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಕೊಳ್ಳಲಾಗಿದೆ. ಆರೋಪಿಗಳು ಅಚ್ಚಯ್ಯಶೆಟ್ಟಿ ಲೇಔಟ್‍ನ ಬಳಿಯ […]