Friday, October 11, 2024
Homeಬೆಂಗಳೂರುಗರ್ಲ್ ಫ್ರೆಂಡ್ ಮನೆಯಲ್ಲೇ ನೇಣಿಗೆ ಶರಣಾದ ಯುವಕ

ಗರ್ಲ್ ಫ್ರೆಂಡ್ ಮನೆಯಲ್ಲೇ ನೇಣಿಗೆ ಶರಣಾದ ಯುವಕ

young man hanged himself at his girlfriend's house

ಬೆಂಗಳೂರು,ಅ.2- ಸ್ನೇಹಿತೆಯ ವರ್ತನೆಯಿಂದ ಮನನೊಂದು ಇವೆಂಟ್‌ ಮ್ಯಾನೇಜೆಂಟ್‌ ನಡೆಸುತ್ತಿದ್ದ ಯುವಕ ಆಕೆಯ ಮನೆಯಲ್ಲೇ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿರುವ ಘಟನೆ ಹುಳಿಮಾವು ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೋಣನಕುಂಟೆಯ ಪಿಳ್ಳಗಾನಹಳ್ಳಿಯ ನಿವಾಸಿ ಮದನ್‌ (24) ಆತಹತ್ಯೆಗೆ ಶರಣಾದ ಯುವಕ.

ಬನ್ನೇರುಘಟ್ಟ ರಸ್ತೆಯ ಸಿ.ಕೆ.ಪಾಳ್ಯದ ಮಂಡಿ ಲೇ ಔಟ್‌ನಲ್ಲಿ ಸಾಗರ ಮೂಲದ ಕಿರುತೆರೆ ಸಹನಟಿ ವೀಣಾ ಎಂಬುವರು ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದಾರೆ.ವೀಣಾಗೆ ಪುನೀತ್‌ ಹಾಗೂ ಮಾಧವ್‌ ಸ್ನೇಹಿತರು. ಮೊದಲು ಪುನೀತ್‌ ಜೊತೆ ವೀಣಾ ಆತೀಯರಾಗಿದ್ದರು. ನಂತರದ ದಿನಗಳಲ್ಲಿ ಪುನೀತ್‌ ಆಕೆಯಿಂದ ಅಂತರ ಕಾಯ್ದುಕೊಂಡು ದೂರವಾಗಿದ್ದಾನೆ.

ವೀಣಾ ಮನೆಗೆ ಮದನ್‌ ಆಗಾಗ್ಗೆ ಬಂದು ಹೋಗುತ್ತಿದ್ದ. ತದನಂತರದಲ್ಲಿ ಇವರಿಬ್ಬರ ಮಧ್ಯೆ ಸಲುಗೆ ಬೆಳೆದು ಲಿವಿಂಗ್‌ ಟುಗೆದರ್‌ನಲ್ಲಿದ್ದರು. ಈ ನಡುವೆ ಆಕೆ ಮದುವೆಯಾಗುವಂತೆ ಮದನ್‌ನನ್ನು ಒತ್ತಾಯಿಸುತ್ತಿದ್ದರಿಂದ ಇವರಿಬ್ಬರ ಮಧ್ಯೆ ಸಣ್ಣಪುಟ್ಟ ಗಲಾಟೆ ನಡೆಯುತ್ತಿತ್ತು.
ನಿನ್ನೆ ವೀಣಾ ಮನೆಗೆ ಮದನ್‌ ಬಂದಿದ್ದಾನೆ. ಆ ವೇಳೆ ಇವರಿಬ್ಬರ ಮಧ್ಯೆ ಯಾವುದೋ ವಿಚಾರಕ್ಕೆ ಮಾತಿನ ವಾಗ್ವಾದವಾಗಿದೆ. ನಂತರ ಇವರಿಬ್ಬರೂ ಸೇರಿ ರಾತ್ರಿ 7 ಬಾಟಲಿ ಬ್ರೀಜರ್‌ (ಪಾನೀಯ) ಸೇವಿಸಿದ್ದಾರೆ.

ವೀಣಾ ರೂಮಿಗೆ ಹೋದಾಗ ಮದನ್‌ ಬೇರೆ ರೂಮಿಗೆ ಹೋಗಿ ರಾತ್ರಿ 8.30ರ ಸುಮಾರಿನಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾನೆ. ಕೆಲ ಸಮಯದ ಬಳಿಕ ವೀಣಾ ಆ ರೂಮಿಗೆ ಹೋಗಿ ನೋಡಿದಾಗ ಮದನ್‌ ಕೊಠಡಿಯಲ್ಲಿ ಆತಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.

ತಕ್ಷಣ ವೀಣಾ ಮದನ್‌ ತಾಯಿಗೆ ವಿಷಯ ತಿಳಿಸಿದ್ದಾರೆ. ಮದನ್‌ ಕುಟುಂಬಸ್ಥರು ಈಕೆ ಮನೆ ಬಳಿ ಬಂದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ನಂತರ ವಾರಸುದಾರರಿಗೆ ಹಸ್ತಾಂತರಿಸಿ ದ್ದಾರೆ.

ಮದನ್‌ ತಾಯಿ ಹುಳಿಮಾವು ಠಾಣೆ ಪೊಲೀಸರಿಗೆ ದೂರು ನೀಡಿದ್ದು, ನನ್ನ ಮಗನ ಸಾವಿಗೆ ವೀಣಾ ಕಾರಣ. ನನ್ನ ಮಗನಿಗೆ ಇಷ್ಟವಿಲ್ಲದಿದ್ದರೂ ಮದುವೆ ಯಾಗುವಂತೆ ಒತ್ತಾಯಿಸುತ್ತಿದ್ದುದರಿಂದ ಮಗ ಆತಹತ್ಯೆ ಮಾಡಿಕೊಂಡಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾರೆ.ಹುಳಿಮಾವು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News