Friday, October 11, 2024
Homeರಾಷ್ಟ್ರೀಯ | Nationalರಾಜಸ್ಥಾನದಲ್ಲಿ ರೈಲು ನಿಲ್ದಾಣಗಳನ್ನು ಸ್ಫೋಟಿಸುವ ಬೆದರಿಕೆ

ರಾಜಸ್ಥಾನದಲ್ಲಿ ರೈಲು ನಿಲ್ದಾಣಗಳನ್ನು ಸ್ಫೋಟಿಸುವ ಬೆದರಿಕೆ

Bomb threat to railway stations, religious places in Rajasthan,

ಜೈಪುರ, ಅ.2 (ಪಿಟಿಐ) – ರಾಜಸ್ಥಾನದ ಹಲವಾರು ರೈಲು ನಿಲ್ದಾಣಗಳು ಮತ್ತು ಇತರ ಸ್ಥಳಗಳಲ್ಲಿ ಬಾಂಬ್‌ ಸ್ಫೋಟಿಸುವ ಬೆದರಿಕೆ ಕರೆಗಳು ಬಂದಿವೆ.ರೈಲು ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಬಾಂಬ್‌ ಸ್ಫೋಟಗಳ ಬೆದರಿಕೆ ಪತ್ರವು ಹನುಮಾನ್‌ಗಢ್‌ ರೈಲು ನಿಲ್ದಾಣಕ್ಕೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಂಗಾನಗರ, ಹನುಮಾನ್‌ಗಢ, ಜೋಧ್‌ಪುರ, ಬಿಕಾನೇರ್‌, ಕೋಟಾ, ಬುಂಡಿ, ಉದಯಪುರ, ಜೈಪುರದ ರೈಲ್ವೆ ನಿಲ್ದಾಣ ಮತ್ತಿತರ ಸ್ಥಳಗಳನ್ನು ಅಕ್ಟೋಬರ್‌ನಲ್ಲಿ ಬಾಂಬ್‌ ಸ್ಫೋಟಿಸಲಾಗುವುದು ಎಂದು ಜೈಷ್‌‍-ಎ-ಮೊಹಮದ್‌ ಹೆಸರಿನಲ್ಲಿ ಬೆದರಿಕೆ ಪತ್ರ ಬರೆಯಲಾಗಿದೆ.

ಜೈಶ್‌-ಎ-ಮೊಹಮದ್‌ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾಗಿದೆ. ಸರ್ಕಾರಿ ರೈಲ್ವೆ ಪೊಲೀಸ್‌‍ (ಜಿಆರ್‌ಪಿ), ಸ್ಥಳೀಯ ಪೊಲೀಸರು, ಬಿಎಸ್‌‍ಎಫ್‌ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಕುರಿತು ಜಿಆರ್‌ಪಿ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ರ ಕಳುಹಿಸಿದವರ ಪತ್ತೆಗಾಗಿ ತನಿಖೆ ನಡೆಸಲಾಗುತ್ತಿದೆ.

RELATED ARTICLES

Latest News