Friday, October 11, 2024
Homeಕ್ರೀಡಾ ಸುದ್ದಿ | Sportsಬಾರ್ಡರ್‌- ಗಾವಸ್ಕರ್‌ ಟೆಸ್ಟ್ ಸರಣಿಗೆ ಮೊಹಮದ್‌ ಶಮಿ ಡೌಟ್

ಬಾರ್ಡರ್‌- ಗಾವಸ್ಕರ್‌ ಟೆಸ್ಟ್ ಸರಣಿಗೆ ಮೊಹಮದ್‌ ಶಮಿ ಡೌಟ್

Mohammed Shami's participation in Border-Gavaskar Trophy under major threat due to knee injury

ನವದೆಹಲಿ, ಅ.2- ಭಾರತದ ನೆಲದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ ಟೂರ್ನಿಯ ನಂತರ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹಿರಿಯ ವೇಗಿ ಮೊಹಮದ್‌ ಶಮಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವುದು ಮತ್ತಷ್ಟು ವಿಳಂಬವಾಗಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಅನುಭವಿ ವೇಗಿ ಮೊಹಮದ್‌ ಶಮಿ ಅವರು ಪಾದದ ಗಾಯಕ್ಕೆ ತುತ್ತಾಗಿದ್ದು , ಬೆಂಗಳೂರಿನಲ್ಲಿರುವ ಎನ್‌ಸಿಎ ಅಕಾಡೆಮಿಯಲ್ಲಿ ಚೇತರಿಕೆ ಕಾಣುತ್ತಿದ್ದು, ನೆಟ್‌ ಅಭ್ಯಾಸದಲ್ಲೂ ತಮನ್ನು ತೊಡಗಿಸಿಕೊಂಡಿದ್ದರು. ಆಸ್ಟ್ರೇಲಿಯಾ ವಿರುದ್ಧ ನವೆಂಬರ್ 22 ರಿಂದ ಆಯೋಜನೆ ಗೊಂಡಿ ರುವ ಪ್ರತಿಷ್ಠಿತ ಬಾರ್ಡರ್‌- ಗಾವಸ್ಕರ್‌ ಟೆಸ್ಟ್‌ ಸರಣಿ ಮೂಲಕ ಕಮ್‌ಬ್ಯಾಕ್‌ ಮಾಡುತ್ತಾರೆ ಎಂದು ಅಂದಾಜಿಸ ಲಾಗಿತ್ತು. ಆದರೆ ಮತ್ತೆ ಅವರಿಗೆ ಗಾಯದ ಸಮಸ್ಯೆ ಕಾಣಿಸಿಕೊಂಡಿದೆ.

ವಿಶ್ವಕಪ್‌ ಹೀರೋ ಶಮಿ:
2023ರ ಏಕದಿನ ವಿಶ್ವಕಪ್‌ ಟೂರ್ನಿಯ ವೇಳೆಯೇ ಗಾಯದ ಸಮಸ್ಯೆಯಿಂದ ಆರಂಭಿಕ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದ ಮೊಹಮದ್‌ ಶಮಿ ಅವರು ಪಾದದ ನೋವಿಗೆ ಒಳಗಾಗಿದ್ದರೂ ಪೇನ್‌ಕಿಲ್ಲರ್‌ ಪಡೆದು ಟೂರ್ನಿಯಲ್ಲಿ ಉತ್ತಮ ಬೌಲಿಂಗ್‌ ಸಂಯೋಜಿಸಿ ರೋಹಿತ್‌ ಶರ್ಮಾ ಪಡೆಯನ್ನು ಫೈನಲ್‌ ಹಂತಕ್ಕೆ ತಲುಪಿಸಲು ಮಹತ್ತರ ಕಾಣಿಕೆ ನೀಡಿದ್ದರು.

6-8 ವಾರ ವಿಶ್ರಾಂತಿ:
ವಿಶ್ವಕಪ್‌ ಟೂರ್ನಿಯ ನಂತರ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿ ನಂತರ ಎನ್‌ಸಿಎ ಅಕಾಡೆಮಿಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ನೆಟ್‌್ಸನಲ್ಲಿ ಬೌಲಿಂಗ್‌ ಅಭ್ಯಾಸದಲ್ಲಿ ತೊಡಗಿಸಿ ಕೊಂಡು ರಣಜಿ ಟೂರ್ನಿಯಲ್ಲಿ ಆಡುವ ಹೆಬ್ಬಯಕೆ ಹೊಂದಿದ್ದರು. ಆದರೆ ಮತ್ತೆ ಪಾದದ ಗಾಯದ ಸಮಸ್ಯೆಗೆ ಒಳಗಾಗಿದ್ದು , 6 ರಿಂದ 8 ವಾರಗಳ ಕಾಲ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ.

` ಮೊಹಮದ್ ಶಮಿ ಅವರು ಚೇತರಿಕೆ ಹಾದಿಯಲ್ಲಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಲು ತಯಾರಿ ನಡೆಸಿದ್ದರು, ಆದರೆ ಅವರಿಗೆ ಮತ್ತೆ ಪಾದದ ನೋವು ಕಾಣಿಸಿಕೊಂಡಿದ್ದು ಅವರನ್ನು ಎನ್ಸಿಎ ಹಾಗೂ ಬಿಸಿಸಿಐ ವೈದ್ಯಕೀಯ ಸಿಬ್ಬಂದಿ ಗಳು ಪರಿಶೀಲಿಸುತ್ತಿದ್ದು,
ಅವರ ಗಾಯದ ಪರಿಣಾಮ ಆಧರಿಸಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳುತ್ತಾರೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

RELATED ARTICLES

Latest News