Home ಇದೀಗ ಬಂದ ಸುದ್ದಿ ಬೆಂಗಳೂರು : ನೇಣು ಬಿಗಿದುಕೊಂಡು ಮಹಿಳಾ ಟೆಕ್ಕಿ ಆತಹತ್ಯೆ

ಬೆಂಗಳೂರು : ನೇಣು ಬಿಗಿದುಕೊಂಡು ಮಹಿಳಾ ಟೆಕ್ಕಿ ಆತಹತ್ಯೆ

0
ಬೆಂಗಳೂರು : ನೇಣು ಬಿಗಿದುಕೊಂಡು ಮಹಿಳಾ ಟೆಕ್ಕಿ ಆತಹತ್ಯೆ

ಬೆಂಗಳೂರು, ಜು.5- ಫ್ಯಾನಿಗೆ ನೇಣು ಬಿಗಿದುಕೊಂಡು ಮಹಿಳಾ ಟೆಕ್ಕಿ ಒಬ್ಬರು ಆತಹತ್ಯೆ ಮಾಡಿಕೊಂಡಿರುವ ಘಟನೆ ಗಂಗಮನಗುಡಿ ಪೊಲೀಸ್‌‍ ಠಾಣಾ ವ್ಯಾಪ್ತಿಯ ಅಬ್ಬಿಗೆರೆ ಲಕ್ಷ್ಮಯ್ಯ ಲೇಔಟ್‌ನಲ್ಲಿ ನಡೆದಿದೆ.ಪೂಜಾ (26) ಆತಹತ್ಯೆ ಮಾಡಿಕೊಂಡ ಟೆಕ್ಕಿ.

ಕಳೆದ ಒಂದು ವರ್ಷದ ಹಿಂದೆ ಸುನೀಲ್‌ ಎಂಬಾತನನ್ನು ವಿವಾಹ ವಾಗಿದ್ದು, ಇಬ್ಬರು ಕೂಡ ನಗರದ ಖಾಸಗಿ ಕಂಪೆನಿಯೊಂದರಲ್ಲಿ ಸಾಫ್ಟ್ ವೇರ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು.ಪೂಜಾ ಕಳೆದ ರಾತ್ರಿ ಮನೆಯಲ್ಲಿ ಯಾರು ಇಲ್ಲದಿದ್ದಾಗ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾರೆ.

ಆತಹತ್ಯೆಗೆ ನಿಖರ ಕಾರಣ ಏನು ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ಆದರೆ ಮೃತ ಪೂಜಾಳ ತಾಯಿ ವರದಕ್ಷಿಣೆ ಕಿರುಕುಳದಿಂದ ಮನನೊಂದು ನನ್ನ ಮಗಳು ಆತಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿ ಠಾಣೆಗೆ ದೂರು ನೀಡಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಗಂಗಮನ ಗುಡಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.