Home ಇದೀಗ ಬಂದ ಸುದ್ದಿ ಸದ್ಯಕ್ಕೆ ಓಪನ್‌ ಆಗಲ್ವಂತೆ ಮಂತ್ರಿ ಮಾಲ್‌

ಸದ್ಯಕ್ಕೆ ಓಪನ್‌ ಆಗಲ್ವಂತೆ ಮಂತ್ರಿ ಮಾಲ್‌

0
ಸದ್ಯಕ್ಕೆ ಓಪನ್‌ ಆಗಲ್ವಂತೆ ಮಂತ್ರಿ ಮಾಲ್‌

ಬೆಂಗಳೂರು,ಮೇ.16- ಬಿಬಿಎಂಪಿ ಬೀಗ ಜಡಿದಿರುವ ಮಂತ್ರಿ ಮಾಲ್‌ ಸದ್ಯಕ್ಕಂತೂ ಓಪನ್‌ ಆಗುವ ಲಕ್ಷಣಗಳು ಕಂಡುಬರುತ್ತಿಲ್ಲ. 36 ಕೋಟಿ ರೂ. ತೆರಿಗೆ ಪಾವತಿಸಲು ವಿಫಲವಾಗಿರುವ ಮಂತ್ರಿ ಮಾಲ್‌ಗೆ ಕೆಲ ದಿನಗಳ ಹಿಂದೆ ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿದಿದ್ದರು.

ಬಿಬಿಎಂಪಿಯ ಈ ನಿರ್ಧಾರದ ವಿರುದ್ಧ ಮಂತ್ರಿ ಮಾಲ್‌ನವರು ಕೋರ್ಟ್‌ ಮೆಟ್ಟಿಲೇರಿದ್ದರು. ವಾದ ವಿವಾದ ಆಲಿಸಿದ ನ್ಯಾಯಾಲಯ ಬಾಕಿ ಇರುವ ತೆರಿಗೆಯಲ್ಲಿ ಅರ್ಧ ತೆರಿಗೆ ಪಾವತಿಸುವಂತೆ ಮಾಲ್‌ನವರಿಗೆ ಸೂಚಿಸಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಸಂಪೂರ್ಣ ತೆರಿಗೆಯನ್ನು ಎರಡು ಕಂತುಗಳಲ್ಲಿ ಪಾವತಿಸುವಂತೆ ಕೋರ್ಟ್‌ ಸೂಚಿಸಿದೆ 10 ದಿನಗಳ ಒಳಗೆ ಶೇ.50 ರಷ್ಟು ತೆರಿಗೆ ಪಾವತಿಸಬೇಕು ಹಾಗೂ ಉಳಿದ ಹಣವನ್ನು ಜುಲೈ ಅಂತ್ಯದೊಳಗೆ ಪಾವತಿಸುವಂತೆ ಆದೇಶ ನೀಡಿದೆ.

ಮೊದಲ ಕಂತಿನ ತೆರಿಗೆ ಪಾವತಿಸಿದ ನಂತರವೇ ಮಾಲ್‌ ತೆರೆಯಲು ಅನುಮತಿ ನೀಡುವಂತೆ ನ್ಯಾಯಾಲಯ ಸೂಚಿಸಿರುವ ಹಿನ್ನೆಲೆಯಲ್ಲಿ ಸದ್ಯಕ್ಕಂತೂ ಮಾಲ್‌ ತೆರೆಯುವ ಲಕ್ಷಣಗಳು ಕಂಡು ಬರುತ್ತಿಲ್ಲ.

ಈಗಾಗಲೇ ಆರ್ಥಿಕ ಸಂಕಷ್ಟದಿಂದ ತತ್ತರಿಸಿಹೋಗಿರುವ ಮಂತ್ರಿ ಮಾಲ್‌ ಆಡಳಿತ ಮಂಡಳಿಯವರು 10 ದಿನಗಳ ಒಳಗೆ 18 ಕೋಟಿ ರೂ.ಗಳನ್ನು ಪಾವತಿಸಬೇಕಿದೆ. ಉಳಿದ 18 ಕೋಟಿಗೆ ಇನ್ನು ಒಂದು ತಿಂಗಳ ಕಾಲವಕಾಶ ಸಿಗುತ್ತದೆ.

18 ಕೋಟಿ ತೆರಿಗೆ ಕಟ್ಟಲು ಸಾಧ್ಯವಿದ್ದಿದ್ದರೆ ಅವರು ಯಾವಾಗಲೋ ತೆರಿಗೆ ಪಾವತಿಸುತ್ತಿದ್ದರೂ ತೆರಿಗೆ ವಿಚಾರ ಬಂದಾಗಲೆಲ್ಲಾ ಕೋರ್ಟ್‌ ಮೆಟ್ಟಿಲೇರಿ ತಡೆಯಾಜ್ಞೆ ತರುತ್ತಿದ್ದ ಮಾಲ್‌ನವರಿಗೆ ಈ ಬಾರಿ ನ್ಯಾಯಾಲಯವೇ ಮೊದಲ ಕಂತಿನಲ್ಲಿ 18 ಕೋಟಿ ರೂ. ತೆರಿಗೆ ಪಾವತಿಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಮಾಲ್‌ ಬಾಗಿಲು ತೆರೆಯುವುದು ಅನುಮಾನ ಎನ್ನುವಂತಾಗಿದೆ.