Home ರಾಜ್ಯ ಭೋವಿ ಜನೋತ್ಸವ ಅದ್ಧೂರಿ ಆಚರಣೆಗೆ ಪೂರ್ವ ಭಾವಿ ಸಭೆ

ಭೋವಿ ಜನೋತ್ಸವ ಅದ್ಧೂರಿ ಆಚರಣೆಗೆ ಪೂರ್ವ ಭಾವಿ ಸಭೆ

0
ಭೋವಿ ಜನೋತ್ಸವ ಅದ್ಧೂರಿ ಆಚರಣೆಗೆ ಪೂರ್ವ ಭಾವಿ ಸಭೆ

ಬೆಂಗಳೂರು,ಜೂ.21- ಜುಲೈ 18ರಂದು ಚಿತ್ರದುರ್ಗದಲ್ಲಿ ಭೋವಿ ಗುರುಪೀಠವು ಪ್ರತಿ ವರ್ಷದಂತೆ ನಡೆಸುವ ರಾಜ್ಯಮಟ್ಟದ ಬೃಹತ್‌ ಭೋವಿ ಜನೋತ್ಸವ, ಗುರುಗಳ ಹುಟ್ಟುಹಬ್ಬ , ಪ್ರತಿಭಾ ಪುರಸ್ಕಾರ ಮತ್ತು ನೂತನ ಸಂಸದರು, ನಿಗಮ ಮಂಡಳಿಗಳ ಅಧ್ಯಕ್ಷರ ಗೌರವ ಸಮರ್ಪಣೆ, ಯುಪಿಎಸ್‌‍ ಪರೀಕ್ಷೆಯಲ್ಲಿ ಪಾಸಾದ ಸಮಾಜದ ಅಭ್ಯರ್ಥಿಗಳಿಗೆ ಸನಾನ ಕಾರ್ಯಕ್ರಮ ನಡೆಸಲು ಸಮಾಜದ ಮುಖಂಡರ ಪೂರ್ವಭಾವಿ ಸಭೆ ನಿರ್ಧರಿಸಿದೆ.

ಚಿತ್ರದುರ್ಗ- ಬಾಗಲಕೋಟೆ ಭೋವಿ ಮಹಾ ಸಂಸ್ಥಾನದ ಜಗದ್ಗುರು ಇಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳ ಸಾನಿಧ್ಯದಲ್ಲಿ ಹಾಗೂ ಸಚಿವ ಶಿವರಾಜ್‌ ಎಸ್‌‍.ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಜಸಾ ಭವನದಲ್ಲಿ ಸಭೆ ನಡೆಸಲಾಗಿದೆ.

ಈ ವೇಳೆ ಮಾತನಾಡಿದ ಸಚಿವ ಶಿವರಾಜ್‌ ಎಸ್‌‍.ತಂಗಡಗಿ, ಭೋವಿ ನಿಗಮ ಸ್ಥಾವನೆಯಾಗಿದೆ. ಶಾಸಕರ ಸಂಖ್ಯೆ ಹೆಚ್ಚಾಗುತ್ತಿದೆ. ನಿಗಮ ಮಂಡಳಿಗಳ ಆಯಾಕಟ್ಟಿನ ಜಾಗದಲ್ಲಿ ಅಧ್ಯಕ್ಷರು ನಿರ್ದೇಶಕರು ನೇಮಕಗೊಳ್ಳುತ್ತಿದ್ದಾರೆ. ನಮ ಮುಖ್ಯಮಂತ್ರಿಗಳ ಆಪ್ತವಲಯದ ಶ್ರೀಗಳಾಗಿ ಗುರುತಿಸಿಕೊಂಡಿದ್ದಾರೆ.ಪರಿಣಾಮ ಕೆಪಿಎಸ್ಸಿ ಸದಸ್ಯರ ನೇಮಕವಾಗುತ್ತಿದೆ. ಇಮ್ನಡಿ ಶ್ರೀಗಳ ಸಮಾಜ ಬದ್ಧತೆಯಿಂದಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಧಾರ್ಮಿಕವಾಗಿ ಬಲಗೊಳ್ಳುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಭಾಗಲಕೋಟೆ ಭೋವಿ ಗುರುಪೀಠ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಚಿತ್ರದುರ್ಗ ಭೋವಿ ಸಮಾಜದ ಭೂತ, ವರ್ತಮಾನ, ಭವಿಷ್ಯ ದಿಕ್ಸೂಚಿ ಮಹಾಸಂಗಮವೇ ಭೋವಿ ಜನೋತ್ಸವ ಎಂದರು. ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್‌‍. ರವಿಕುಮಾರ್‌ ಮಾತನಾಡಿ, ಇವತ್ತು ಇಲ್ಲಿಸಭೆ ಕರೆದಿರುವುದರ ಉದ್ದೇಶ ಇಷ್ಟೆ. ಸಮಾಜದ ಎಳಿಗೆಗೆ ಶ್ರಮಿಸುವುದು ನಮ್ಮ ಕರ್ತವ್‌ಯವಾಗಿದೆ.

ಸಮಾಜದ ಸಂಘಟನೆ ಇಂದು ತುರ್ತಾಗಿದೆ. ಹಾಗಾಗಿ ಸಮಾಜದ ಸಂಘಟನೆ ತುಂಬಾ ಅಗತ್ಯವಿದೆ. ಅದಕ್ಕೆ ಪೂರಕವಾಗಿ ಭೋವಿ ಜನೋತ್ಸವ ದೊಡ್ಡ ಮಟ್ಟದಲ್ಲಿ ನಡೆಯಬೇಕಿದೆ ಎಂದರು. ರಾಜ್ಯ ಭೋವಿ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಣರಾದ ಸೀತರಾಮ್‌‍, ಗುಲ್ವರ್ಗಾದ ಸಮಾಜದ ಮುಖಂಡರಾದ ತಿಪ್ಪಣ್ಣ ಹಾಗೂ ಹಾವೇರಿ ಜಿಲ್ಲಾಧ್ಯಕ ರವಿಪೂಜಾರ್‌, ಮಾಜದ ಮುಖಂಡರಾದ ಎಂ ರಾಮಪ್ಲ, ಪರುಸಪ್ಪ ಅಮರಾವತಿ, ಕೃಷ್ಣಪ್ಪ, ಬಸವರಾಜ್‌‍, ಸೂಚಪ್ಪದೇವರಮನೆ,ಲಕ್ಷ್ಮಣ್‌ ಭೋವಿ, ರವಿಗುಂಚ್ಕರ್‌, ಮಂಜಪ್ಪ ಹೆಚ್‌.ನರೇಶ್‌ ಮಲೆನಾಡು, ವೆಂಕಟರಾಮ್‌‍, ದಯಾನಂದ್‌ ಭೀಮಣ್‌ ಕಳಸದ್‌‍, ಹನುಮಂತಪ್ಪ , ಸುಭಾಷ್‌ , ವೈ. ತಿಮ್ಮರಾಜು, ವಿರೇಶ್‌ ಕ್ಯಾತಿನಕೊಪ್ಪ, ದೇಶಾದ್ರಿ ಹೊಸಮನೆ ಮುಂತಾದವರು ಇದ್ದರು.