Friday, December 6, 2024
Homeಮನರಂಜನೆಸ್ನೇಹಿತನ ವಿರುದ್ದ ಅತ್ಯಾಚಾರ ಆರೋಪ ಮಾಡಿದ ಬಿಗ್‍ಬಾಸ್ ಸ್ಪರ್ಧಿ

ಸ್ನೇಹಿತನ ವಿರುದ್ದ ಅತ್ಯಾಚಾರ ಆರೋಪ ಮಾಡಿದ ಬಿಗ್‍ಬಾಸ್ ಸ್ಪರ್ಧಿ

ನವದೆಹಲಿ,ಫೆ.1- ಬಿಗ್ ಬಾಸ್‍ನ ಮಾಜಿ ಸ್ಪರ್ಧಿ ಮತ್ತು ಕಿರುತೆರೆ ನಟ ದಕ್ಷಿಣ ದೆಹಲಿಯ ಫ್ಲಾಟ್‍ನಲ್ಲಿ ತನ್ನ ಸ್ನೇಹಿತ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಪ್ರಕಾರ, ಆಪಾದಿತ ಘಟನೆಯು 2023 ರಲ್ಲಿ ಡಿಯೋಲಿ ರಸ್ತೆಯ ಫ್ಲಾಟ್‍ನಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಾವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಒಬ್ಬ ವ್ಯಕ್ತಿಯ ವಿರುದ್ಧ ಟಿಗ್ರಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದೇವೆ. ಇಲ್ಲಿಯವರೆಗೆ ಯಾವುದೇ ಬಂಧನವಾಗಿಲ್ಲ. ಈ ವಿಷಯದ ಬಗ್ಗೆ ತನಿಖೆ ನಡೆಸಲು ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ನಟನೆಯ ಸಮಯದಲ್ಲಿ ಜನಪ್ರಿಯತೆಯನ್ನು ಗಳಿಸಿದ್ದ ನಟಿ ಮೂಲತಃ ಮುಂಬೈನವರಾಗಿದ್ದು, ಅವರು ಮಾಡೆಲಿಂಗ್ ಮತ್ತು ದೂರದರ್ಶನ ಧಾರಾವಾಹಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದು ನಕ್ಸಲೀಯ ದೇವ ಪಡೆ

ಆರೋಪಿಯು ನಟಿಯನ್ನು ತನ್ನ ನಿವಾಸಕ್ಕೆ ಆಹ್ವಾನಿಸಿ ಅಲ್ಲಿ ಆಕೆಗೆ ಆಹಾರ ಮತ್ತು ಪಾನೀಯಗಳನ್ನು ನೀಡಿದ ನಂತರ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಪೊಲೀಸರು ವಿಚಾರಣೆ ಆರಂಭಿಸಿದ್ದು, ಆರೋಪಿಗಳ ಬಂಧನಕ್ಕೆ ಪ್ರಯತ್ನ ನಡೆಸುತ್ತಿದ್ದಾರೆ.

RELATED ARTICLES

Latest News