Home ಇದೀಗ ಬಂದ ಸುದ್ದಿ ಕ್ರಿಕೆಟ್‌ ಪಂದ್ಯಾವಳಿ ವೀಕ್ಷಕರಿಗೆ ಬಿಎಂಟಿಸಿ ಬಸ್‌‍ ಸೌಲಭ್ಯ

ಕ್ರಿಕೆಟ್‌ ಪಂದ್ಯಾವಳಿ ವೀಕ್ಷಕರಿಗೆ ಬಿಎಂಟಿಸಿ ಬಸ್‌‍ ಸೌಲಭ್ಯ

0
ಕ್ರಿಕೆಟ್‌ ಪಂದ್ಯಾವಳಿ ವೀಕ್ಷಕರಿಗೆ ಬಿಎಂಟಿಸಿ ಬಸ್‌‍ ಸೌಲಭ್ಯ

ಬೆಂಗಳೂರು,ಜೂ.11– ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಾವಳಿ ವೀಕ್ಷಣೆಗೆ ಬಂದುಹೋಗುವ ಸಾರ್ವಜನಿಕರ ಅನುಕೂಲಕ್ಕಾಗಿ ಬಸ್‌‍ ಸೌಲಭ್ಯ ಒದಗಿಸಲಿದೆ.

ಜೂ.13, 16, 19 ಹಾಗೂ 23ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಾವಳಿಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆಯಾ ದಿನಗಳಂದು ಕ್ರಿಕೆಟ್‌ ಪಂದ್ಯಾವಳಿ ವೀಕ್ಷಣೆಗೆ ಬಂದುಹೋಗುವ ಸಾರ್ವಜನಿಕರ ಅನುಕೂಲಕ್ಕಾಗಿ ಬಿಎಂಟಿಸಿ ವ್ಯವಸ್ಥಿತ ಸಾರಿಗೆ ಸೌಲಭ್ಯವನ್ನು ಒದಗಿಸಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕಾಡುಗೋಡಿ, ಬಸ್‌‍ ನಿಲ್ದಾಣ, ಸರ್ಜಾಪುರ, ಎಲೆಕ್ಟ್ರಾನಿಕ್‌ ಸಿಟಿ, ಬನ್ನೇರುಘಟ್ಟ ಮೃಗಾಲಯ, ಜನಪ್ರಿಯ ಟೌನ್‌ಶಿಪ್‌, ಆರ್‌.ಕೆ.ಹೆಗಡೆ ನಗರ, ಹೊಸಕೋಟೆ ಹಾಗೂ ಬನಶಂಕರಿಗೆ ಬಸ್‌‍ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಬಿಎಂಟಿಸಿ ತಿಳಿಸಿದೆ.