Saturday, July 20, 2024
Homeರಾಜಕೀಯಸಿದ್ದರಾಮಯ್ಯ ಸರ್ಕಾರಕ್ಕೆ ಜನ ಹಿಡಿಶಾಪ ಹಾಕುತ್ತಿದ್ದಾರೆ : ವಿಜಯೇಂದ್ರ

ಸಿದ್ದರಾಮಯ್ಯ ಸರ್ಕಾರಕ್ಕೆ ಜನ ಹಿಡಿಶಾಪ ಹಾಕುತ್ತಿದ್ದಾರೆ : ವಿಜಯೇಂದ್ರ

ಬೆಂಗಳೂರು,ಜೂ.21– ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಕರ್ನಾಟಕ ಇಂದು ಎಲ್ಲಾ ಕ್ಷೇತ್ರಗಳಲ್ಲಿ ವಿಫಲವಾಗಿದ್ದು, ರೈತರು, ಕೂಲಿಕಾರ್ಮಿಕರು, ದೀನದಲಿತರು, ಬಡವರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌‍ ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಬರೀ ಗ್ಯಾರಂಟಿಗಳ ಡಂಗೂರ ಸಾರಲಾಗುತ್ತಿದೆ. ಅಭಿವೃದ್ಧಿ ಕಾರ್ಯ ಸಂಪೂರ್ಣವಾಗಿ ಸ್ಥಗಿತವಾಗಿದ್ದು, ಆಡಳಿತ ಪಕ್ಷದ ಶಾಸಕರ ಕ್ಷೇತ್ರಗಳಿಗೆ ನಯಾಪೈಸಾ ಹಣ ಬಿಡುಗಡೆಯಾಗುತ್ತಿಲ್ಲ. ಆರ್ಥಿಕ ಪರಿಸ್ಥಿತಿ ದಿವಾಳಿ ಹಂತಕ್ಕೆ ತಲುಪಿದೆ ಎಂದು ಆರೋಪಿಸಿದರು.

ರಾಜ್ಯದ ಹಣಕಾಸು ವ್ಯವಸ್ಥೆ ಮೇಲುಸ್ತುವಾರಿಗೆ ವಿದೇಶಿ ಕನ್ಸಲ್ಟೆಂನ್ಸಿ ಸಲಹೆ ಪಡೆಯಲು ಮುಂದಾಗಿರುವುದು ನಮೆಲ್ಲರಿಗೂ ಆಶ್ಚರ್ಯ ಉಂಟು ಮಾಡಿದೆ. 14 ಬಜೆಟ್‌ ಮಂಡಿಸಿರುವ ಮುಖ್ಯಮಂತ್ರಿಗೆ ಹಣಕಾಸು ಇಲಾಖೆ ನಿರ್ವಹಣೆ ಮಾಡಲು ಸಾಧ್ಯವಾಗದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಗಳ ಸುತ್ತಮುತ್ತ ಅನೇಕ ಅಧಿಕಾರಿಗಳು ಇದ್ದಾರೆ. ಅಷ್ಟೇಲ್ಲ ಇರುವಾಗ ವಿದೇಶಿ ಕನ್ಸಲ್ಟೆನ್ಸಿ ನೇಮಕ ಮಾಡಿಕೊಳ್ಳಲು ಮುಂದಾಗಿರುವುದು ಯಾವ ಪುರುಷಾರ್ಥಕ್ಕೆ? ಎಲ್ಲ ರಂಗಗಳಲ್ಲೂ ವಿಫಲವಾಗಿರುವ ಸರ್ಕಾರ ಜನರ ಪಾಲಿಗೆ ಇದ್ದು ಸತ್ತಂತಾಗಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲೇ ಅನೇಕ ಐಎಎಸ್‌‍ ಅಧಿಕಾರಿಗಳು ಇದ್ದಾರೆ. ಆರ್ಥಿಕ ತಜ್ಞರಿಗೂ ಕೊರತೆ ಇಲ್ಲ. ಒಬ್ಬ ಸೂಕ್ತ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದರೆ ಹೇಗೆ? ಯಡಿಯೂರಪ್ಪ, ಎಸ್‌‍.ಎಂ.ಕೃಷ್ಣ ಸೇರಿದಂತೆ ಅನೇಕರು ಅಧಿಕಾರದಲ್ಲಿದ್ದಾಗ ಕರ್ನಾಟಕ ಎಲ್ಲಾ ರಂಗಗಳಲ್ಲೂ ಮುಂದಿತ್ತು. ಈಗ ಹಿನ್ನಡೆ ಅನುಭವಿಸುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರು ಕರ್ನಾಟಕವನ್ನು ಅಭಿವೃದ್ದಿಶೀಲ ರಾಜ್ಯ ಮಾಡಬೇಕೆಂಬ ಇಚ್ಛೆ ಇದೆಯೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಬೇಕು. ಇವರ ಕಿತ್ತಾಟದಿಂದ ಬಂಡವಾಳ ಹೂಡುವವರು ಕರ್ನಾಟಕಕ್ಕೆ ಬರುತ್ತಿಲ್ಲ. ನಿಮ ಆಂತರಿಕ ಕಚ್ಚಾಟದಿಂದ ಕರ್ನಾಟಕವನ್ನು ಹಿಂದುಳಿದ ರಾಜ್ಯ ಮಾಡಬೇಡಿ ಎಂದು ಮನವಿ ಮಾಡಿದರು.

ಕರ್ನಾಟಕಕ್ಕೆ ಕಳೆದ ಒಂದು ವರ್ಷದಿಂದ ವಿದೇಶಿ ಬಂಡವಾಳವೇ ಹರಿದುಬರುತ್ತಿಲ್ಲ. ಇಲ್ಲಿ ಬಂಡವಾಳ ಹೂಡಲು ಮೂಲಭೂತ ಸೌಕರ್ಯಗಳ ಕೊರತೆ ಇದೆ. ಒಂದು ವರ್ಷದಲ್ಲಿ ಒಂದೇ ಒಂದು ಕಿ.ಮೀ ರಸ್ತೆ ಕೂಡ ಅಭಿವೃದ್ಧಿಯಾಗಿಲ್ಲ ಐದು ಗ್ಯಾರಂಟಿ ಕೊಟ್ಟಿದ್ದೇವೆ ಎಂದು ಡಂಗೂರ ಸಾರುತ್ತಿದ್ದಾರೆ. ಇವರ ಗ್ಯಾರಂಟಿಗೆ ಲೋಕಸಭೆ ಚುನಾವಣೆಯಲ್ಲಿ ಮತದಾರ ತಕ್ಕ ಉತ್ತರ ಕೊಟ್ಟಿದ್ದಾರೆಂದು ಟೀಕಾ ಪ್ರಹಾರ ನಡೆಸಿದರು.

ಚನ್ನಪಟ್ಟಣದಲ್ಲಿ ಡಿಕೆಶಿ ಸ್ಪರ್ಧೆ ವಿಚಾರಡಿಕೆಶಿ ಅವರು ಈಗಾಗಲೇ ಶಾಸಕರು ಇದ್ದಾರೆ. ಆದರೂ ಚನ್ನಪಟ್ಟಣದಲ್ಲಿ ಸ್ಪರ್ಧೆಯ ಅಭಿಲಾಷೆ ವ್ಯಕ್ತಪಡಿಸಿದರು.ಇದು ಅವರ ಪಕ್ಷದ ತೀರ್ಮಾನ. ಆದರೂ ಜನರ ಮನದಾಳದಲ್ಲಿ ಏನಿದೆ ಅನ್ನೋದು ಇನ್ನೂ ನಿಗೂಢವಾಗಿದ. ಬೆಂಗಳೂರು ಗ್ರಾಮೀಣ ಕ್ಷೇತ್ರದಲ್ಲಿ ತಮ್ಮನ್ನು ಸೋಲಿಸುವವರೇ ಇಲ್ಲ ಅಂದುಕೊಂಡಿದ್ದರು. ಆದರೆ ಜನರ ತೀರ್ಪು ಏನಿತ್ತು ಎಂಬುದು ಎಲ್ಲರೂ ನೋಡಿದ್ದೀರ ಎಂದರು.

ಚನ್ನಪಟ್ಟಣ ಉಪಚುನಾವಣೆಯಲ್ಲಿ ನಮ ಅಭ್ಯರ್ಥಿ ಯಾರಾಗಬೇಕು ಎಂಬು ನಾವು ಮತ್ತು ಜೆಡಿಎಸ್‌‍ ನಾಯಕರು ಅತೀ ಶೀಘ್ರದಲ್ಲೇ ತೀರ್ಮಾನ ಮಾಡುತ್ತೇವೆ ಅಂತ ಹೇಳಿದರು.

ಹರೀಶ್‌ಗೂ ಎಚ್ಚರಿಕೆ:
ದಾವಣಗೆರೆ ಸೋಲಿಗೆ ಯಡಿಯೂರಪ್ಪ, ವಿಜಯೇಂದ್ರ ಕಾರಣ ಎಂಬ ಶಾಸಕ ಬಿ.ಪಿ.ಹರೀಶ್‌ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ ಶಾಸಕ ಮಿತ್ರ ಹರೀಶ್‌ ಆಗಲೀ ಅಥವಾ ಬೇರೆ ಯಾರೇ ಆಗಲೀ ಅವರಿಗೆ ಒಂದು ಮಾತು ಹೇಳುತ್ತೇನೆ. ಬಹಿರಂಗವಾಗಿ ಹೇಳಿಕೆ ಕೊಡುವುದರಿಂದ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದರೆ ಹೇಳಲಿ, ನನ್ನದೇನೂ ತಕರಾರಿಲ್ಲ. ಆದರೆ ನಾನು ರಾಜ್ಯಾಧ್ಯಕ್ಷ ಆಗಿ ಮನವಿ ಮಾಡುವುದೇನೆಂದರೆ, ಏನೇ ಸಮಸ್ಯೆ ಇದ್ದರೂ ಪಕ್ಷದ ಕಚೇರಿಗೆ ಬಂದು ಚರ್ಚೆ ಮಾಡಿ ಈ ರೀತಿ ಹೇಳಿಕೆ ಕೊಡುವುದರಿಂದ ಪಕ್ಷಕ್ಕೂ ಲಾಭ ಆಗಲ್ಲ. ಸಂಘಟನೆಗೂ ಲಾಭ ಅಲ್ಲ. ಬಿಜೆಪಿಯಲ್ಲಿ ಗುಂಪುಗಾರಿಕೆ ಜಾಸ್ತಿ ಆಗುತ್ತಿಲ್ಲ, ಎಲ್ಲವನ್ನೂ ಸರಿ ಮಾಡುತ್ತೇವೆ ಎಂದು ಹೇಳಿದರು.

ಸಂಸದರಿಗೆ ಸನಾನ:
ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ ಹಾಗೂ ಜೆಡಿಎಸ್‌‍ನ ಕೇಂದ್ರ ಸಚಿವರು ಹಾಗೂ ಸಂಸದರಿಗೆ ನಾಳೆ ದಿನ ನಗರದ ಅರಮನೆ ಮೈದಾನದಲ್ಲಿ ಸನಾನ ಕಾರ್ಯಕ್ರಮ ಹಮಿಕೊಳ್ಳಲಾಗಿದೆ. ರಾಜ್ಯ ಬಿಜೆಪಿ- ಜೆಡಿಎಸ್‌‍ನಿಂದ ಆಯ್ಕೆಯಾಗಿರುವ 19 ಸಂಸದರಿಗೆ ಸನಾನ ಮಾಡಲಾಗುವುದು ಎಂದುಬಿಜೆಪಿ ರಾಜ್ಯಧ್ಯಕ್ಷರಾದ ಬಿ.ವೈವಿಜಯೇಂದ್ರ ಇದೇ ವೇಳೆ ತಿಳಿಸಿದರು.

RELATED ARTICLES

Latest News