Home ಇದೀಗ ಬಂದ ಸುದ್ದಿ ಚಿಕ್ಕಮಗಳೂರು : ಪ್ರವಾಸಕ್ಕೆ ಬಂದಿದ್ದ ಟೆಕ್ಕಿ ಹೃದಯಾಘಾತದಿಂದ ಸಾವು

ಚಿಕ್ಕಮಗಳೂರು : ಪ್ರವಾಸಕ್ಕೆ ಬಂದಿದ್ದ ಟೆಕ್ಕಿ ಹೃದಯಾಘಾತದಿಂದ ಸಾವು

0
ಚಿಕ್ಕಮಗಳೂರು : ಪ್ರವಾಸಕ್ಕೆ ಬಂದಿದ್ದ ಟೆಕ್ಕಿ ಹೃದಯಾಘಾತದಿಂದ ಸಾವು

ಚಿಕ್ಕಮಗಳೂರು, ಜು.14- ಪ್ರವಾಸಕ್ಕೆ ಬಂದಿದ್ದ ಟೆಕ್ಕಿಯೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.ಬೆಂಗಳೂರಿನ ಅಕ್ಷಯ ನಗರ ನಿವಾಸಿ ರಾಹುಲ್‌‍(29) ಮೃತ ದುರ್ದೈವಿ. ಈತ ಸಾಫ್ಟ್ ವೇರ್‌ ಇಂಜಿನಿಯರ್‌ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.

ಈತ ತನ್ನ ಸ್ನೇಹಿತರೊಂದಿಗೆೆ ಚಿಕ್ಕಮಗಳೂರು ಪ್ರವಾಸಕ್ಕೆ ಬಂದಿದ್ದು, ನಗರದ ಹೊರವಲಯದ ಹೋಂ ಸ್ಟೇಯಲ್ಲಿ ವಾಸ್ತವ್ಯ ಹೂ ಡಿದ್ದರು. ರೂಂನಲ್ಲಿದ್ದ ವೇಳೆ ಇದ್ದಕ್ಕಿದ್ದ ಹಾಗೇ ರಾಹುಲ್‌ ಕುಸಿದು ಬಿದ್ದರು.

ಆತನನ್ನು ಕೂಡಲೇ ಸ್ನೇಹಿತರು ಆಸ್ಪತ್ರೆಗೆ ಕರೆದೋಯ್ದರಾದರೂ ಮಾರ್ಗಮಧ್ಯದಲ್ಲೇ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮುಂದಿನ ಕ್ರಮ ಕೈಗೊಂಡಿದ್ದಾರೆ.