ಶೃಂಗೇರಿಯಲ್ಲಿ 100 ಬೆಡ್‍ ಆಸ್ಪತ್ರೆ ನಿರ್ಮಾಣಕ್ಕೆ ಅಹೋರಾತ್ರಿ ಧರಣಿ

ಬೆಂಗಳೂರು,ನ.25- ದಕ್ಷಿಣ ಭಾರತದ ಪ್ರಸಿದ್ದ ಧಾರ್ಮಿಕ ಶ್ರದ್ದಾ ಕೇಂದ್ರ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದಲ್ಲಿ 100 ಬೆಡ್‍ಗಳ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಾಣ ಮಾಡಬೇಕೆಂದು ಅಹೋರಾತ್ರಿ ಧರಣಿಯನ್ನು ಆರಂಭಿಸಲಾಗಿದೆ. ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ವತಿಯಿಂದ ಶೃಂಗೇರಿಯ ಸಂತೆ ಮಾರುಕಟ್ಟೆ ಬಸ್ ನಿಲ್ದಾಣದ ಎದುರು ಇಂದಿನಿಂದ ಕ್ಷೇತ್ರದ ನೂರಾರು ಯುವಕರು ಪಕ್ಷಾತೀತವಾಗಿ ಅಹೋರಾತ್ರಿ ಧರಣಿಯನ್ನು ಆರಂಭಿಸಿದ್ದು, ತಕ್ಷಣವೇ ರಾಜ್ಯ ಸರ್ಕಾರ 100 ಬೆಡ್ ಆಸ್ಪತ್ರೆಯನ್ನು ನಿರ್ಮಿಸಲು ಆದೇಶ ನೀಡಬೇಕೆಂದು ಒತ್ತಾಯಿಸಿದ್ದಾರೆ. ಸರ್ಕಾರಿ ಕಚೇರಿ ದುರ್ಬಳಕೆ : ಜೀವರಾಜ್ […]

ಸರ್ಕಾರಿ ಕಚೇರಿ ದುರ್ಬಳಕೆ : ಜೀವರಾಜ್ ವಿರುದ್ಧ ಕ್ರಮಕ್ಕೆ ಮುರೊಳ್ಳಿ ಆಗ್ರಹ

ಚಿಕ್ಕಮಗಳೂರು, ನ.25- ತಮ್ಮ ಆಪ್ತರಿಗೆ ಹಾಗೂ ಪಕ್ಷದ ಮುಖಂಡರಿಗೆ ಸರ್ಕಾರಿ ಸಂಬಳ ಕೊಡಿಸುವ ಮೂಲಕ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ಅವರು ಸರ್ಕಾರಿ ಕಚೇರಿಯನ್ನು ದುರುಪಯೋಗಪಡಿಸಿಕೊಂಡಿದ್ದು, ಅವರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಕೆಪಿಸಿಸಿ ವಕ್ತಾರ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುೀಧಿರ್ ಕುಮಾರ್ ಮುರೊಳ್ಳಿ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಿ.ಪಿ.ವಿಜಯಾನಂದ ಅವರನ್ನು ಕಳೆದ 2021ರಲ್ಲಿ ತಮ್ಮ ಕಾರು ಚಾಲಕ ಎಂದು ನೇಮಕ ಮಾಡಿಕೊಂಡ ಜೀವರಾಜ್ […]

ಮಹಿಳೆಯನ್ನು ಕ್ರೂರವಾಗಿ ಕೊಂದುಹಾಕಿದ ಕಾಡಾನೆ

ಚಿಕ್ಕಮಗಳೂರು,ನ.21- ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡಾನೆಯೊಂದು ಮಹಿಳೆಯನ್ನು ಸೊಂಡಿಲಿನಿಂದ ಎತ್ತಿ ನೆಲಕ್ಕೆ ಬಡಿದು ಸಾಯಿಸಿರು ಘಟನೆ ಹುಲ್ಲೇ ಮನೆ ಕುಂದೂರಿನಲ್ಲಿ ನಡೆದಿದೆ.ಗ್ರಾಮದ ಶೋಭಾ (45) ಕಾಡಾನೆ ದಾಳಿಗೆ ಮೃತಪಟ್ಟ ದುರ್ದೇವಿ. ಮನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆಕೆ ಹಸುವಿನ ಹಾಲು ಕರೆದು ಅದನ್ನು ಗ್ರಾಮದ ಕೆಲ ಮನೆಗಳಿಗೆ ವಿತರಿಸಿ ತನ್ನ ಪತಿ ಸತೀಶ್ ಗೌಡ ಅವರೊಂದಿಗೆ ಅಡಿಕೆ ತೋಟದಲ್ಲಿ ಹುಲ್ಲು ಕುಯ್ಯುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಕಾಡಾನೆ ಪ್ರತ್ಯಕ್ಷವಾಗಿದ್ದು ಏಕಾಏಕಿ ದಾಂಧಲೆ ಶುರು ಮಾಡಿಕೊಂಡಿದೆ. ಜೊತೆಯಲ್ಲಿದ್ದ ಗ್ರಾಮದ […]

100 ವರ್ಷ ಪೂರೈಸಿದ ಬೆಳ್ಳಜ್ಜಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಅರ್ಥಪೂರ್ಣ ಅಭಿನಂದನೆ

ಚಿಕ್ಕಮಗಳೂರು, ಆ.10- ನೂರು ವರ್ಷಗಳ ಗಡಿದಾಟಿರುವ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಸಂಪೇಕೊಳಲು ಗ್ರಾಮದ ಬೆಳ್ಳಜ್ಜಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅವರ ಬದುಕಿನ ಬೆಳ್ಳಿ ನೆನಪುಗಳನ್ನು ಹಂಚಿಕೊಂಡಿದ್ದಾರೆ.ಸ್ವಾತಂತ್ರ್ಯ ಪೂರ್ವದಲ್ಲಿ ವಿವಾಹವಾಗಿ ಇಂದಿಗೂ ಬದುಕು ಸಾಗಿಸುತ್ತಿರುವ ನೂರು ದಾಟಿದ ಬೆಳ್ಳಿಯಜ್ಜಿ. ಊರಿನ ಮಾದಾರ ಮಾಸ್ತಿಯವರ ಪತ್ನಿ. ಇವರ ಗಂಡ ಮಾದಾರ ಮಾಸ್ತಿ ತೀರಿಕೊಂಡು ಹಲವು ವರ್ಷಗಳೇ ಕಳೆದಿವೆ. ಸುತ್ತ 10 ಹಳ್ಳಿಯ ಮಾದಾರನಾದ ಮಾಸ್ತಿ ಬಹಳ ಗಟ್ಟಿಗ ಅವನೊಬ್ಬನೇ ದಿನಕ್ಕೆ ನಾಲ್ಕಾಳುಗಳ ಕೆಲಸ ಮಾಡುತ್ತಿದ್ದ ಎಂಬುದನ್ನು ಊರಿನವರೆಲ್ಲ […]

ವಿಕ್ರಾಂತ್ ರೋಣ ಸಿನಿಮಾ ಪ್ರದರ್ಶನವಾಗುತ್ತಿದ್ದ ಚಿತ್ರಮಂದಿರದ ಬಳಿ ಯುವಕರ ಮಾರಾಮಾರಿ

ಚಿಕ್ಕಮಗಳೂರು,ಜು.29- ನಗರದ ಮಿಲನ್ ಚಿತ್ರಮಂದಿರದಲ್ಲಿ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ವೀಕ್ಷಣೆಗೆ ತೆರಳಿದ್ದ ಯುವಕರ ತಂಡ ಹೊಡೆದಾಡಿಕೊಂಡು ಮರಣಾಂತಿಕ ಹಲ್ಲೆ ಮಾಡಿಕೊಂಡಿರುವ ಘಟನೆ ನಡೆದಿದೆ. ನಗರದ ಕೋಟೆ ನಿವಾಸಿ ಭರತ್(25)ಗೆ ದುಷ್ಕರ್ಮಿಗಳು ಕತ್ತಿಯಿಂದ ಬೆನ್ನು, ಕೈ, ತಲೆ, ಹೊಟ್ಟೆ ಭಾಗಕ್ಕೆ ಚುಚ್ಚಿದ್ದು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳು ಭರತ್‍ನನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕರೆದೊಯ್ಯಲಾಗಿದೆ. ಹಳೆ ದ್ವೇಷದಿಂದ ಈ ಜಗಳ ನಡೆದಿರಬಹುದು ಎಂದು ಪೆÇಲೀಸರು ಶಂಕಿಸಿದ್ದಾರೆ. ಸಿನಿಮಾ ನೋಡಲು ಹೋಗಿ […]

ಚಿಕ್ಕಮಗಳೂರು ಪೊಲೀಸರಿಗೆ ಶರಣಾದ ರೌಡಿ ಹಂದಿ ಅಣ್ಣಿ ಹಂತಕರು

ಚಿಕ್ಕಮಗಳೂರು, ಜು.20- ರೌಡಿ ಹಂದಿ ಅಣ್ಣಿ ಹತ್ಯೆ ಪ್ರಕರಣದ 8 ಮಂದಿ ಶಂಕಿತ ಆರೋಪಿಗಳು ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಕಚೇರಿಗೆ ಬಂದು ಶರಣಾಗಿದ್ದಾರೆ. ಶಿವಮೊಗ್ಗದ ವಿನೋಬಾ ನಗರದ ಕಾರ್ತಿಕ್ ಆಲಿಯಾಸ್ ಕಡಾ ಕಾರ್ತಿಕ್ (33), ಫಾರೂಕ್ (40), ಹರಿಹರ ತಾಲೂಕು ಮಲೆಬೆನ್ನೂರಿನ ಆಂಜನೇಯ ಅಲಿಯಾಸ್ ಅಂಜನಿ (26), ಮಧು (27), ಮಧುಸೂದನ್ ಅಲಿಯಾಸ್ ಕರಿಯ (32), ಚೌಡೇಶ್ವರಿ ಕಾಲೋನಿಯ ಮದನ್ (25), ಕಡೂರಿನ ನಿತಿನ್ ಅಲಿಯಾಸ್ ಭಜರಂಗಿ ಭಾಯಿ (29), ಹುಳ ಗಟ್ಟಿಯ ಚಂದನ್ (22) ಶರಣದವರು. […]

ಕೆಸರಲ್ಲಿ ಸಿಲುಕಿದ ಸಚಿವ ಬೈರತಿ ಬಸವರಾಜ ಕಾಲು

ಚಿಕ್ಕಮಗಳೂರು, ಜು.17- ಮಳೆಯಿಂದ ಹಾನಿಗೊಂಡ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರ ಕಾಲು ಕೆಸರಿನಲ್ಲಿ ಸಿಲುಕಿಕೊಂಡು ಮಳೆ ಅನಾಹುತದಲ್ಲಿ ಸಂಕಷ್ಟ ಅನುಭವಿಸಿದ ಘಟನೆ ಮೂಡಿಗೆರೆಯಲ್ಲಿ ನಡೆದಿದೆ. ಆಲ್ದೂರು ಸಮೀಪದ ಅರೆನೂರಿನ ಅತಿವೃಷ್ಟಿ ಪ್ರದೇಶಕ್ಕೆ ಭೇಟಿ ನೀಡಿ ಕಾಫಿ ತೋಟ ಕೊಚ್ಚಿ ಹೋಗಿದ್ದ ಸ್ಥಳಕ್ಕೆ ಬಂದ ಸಂದರ್ಭದಲ್ಲಿ ಮಂಡಿವರೆಗೂ ಕೆಸರಿನಲ್ಲಿ ಕಾಲು ಸಿಲುಕಿಕೊಂಡಿದ್ದು, ಎಚ್ಚೆತ್ತ ಗನ್‍ಮ್ಯಾನ್ ಹಾಗೂ ಸ್ಥಳೀಯರು ಸಚಿವರನ್ನು ಮೇಲೆತ್ತಿದರು. ಮಳೆಯಿಂದ ಆಗಿರುವ ಅನಾಹುತದ ಬಗ್ಗೆ ಸಚಿವರು ಖುದ್ದು ವೀಕ್ಷಿಸಿ […]

ಆಗುಂಬೆ ಘಾಟ್‍ನಲ್ಲಿ ಭೂ ಕುಸಿತದ ಪರಿಶೀಲಿಸಿದ ಕಿಮ್ಮನೆ

ಶೃಂಗೇರಿ, ಜು.13- ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಅವರು ಆಗುಂಬೆ ಘಾಟ್‍ನ ಧರೆ ಕುಸಿತ ಪ್ರದೇಶಕ್ಕೆ ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್‍ಗಳಿಂದ ಮಾಹಿತಿ ಪಡೆದರು. ಭೂ ಕುಸಿದ ಪ್ರದೇಶದ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ತಮ್ಮ ಅವಯಲ್ಲಿಯೇ ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಮಾಡಿದ್ದಾಗಿ ತಿಳಿಸಿದರು. ಇದೇ ವೇಳೆ ಈ ಪ್ರದೇಶದಲ್ಲಿ ಭೂ ಕುಸಿತ ದಿಂದಾಗಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ […]

ಎಫ್‍ಡಿಎ ಪ್ರಕಾಶ್ ವಿರುದ್ಧ ಕ್ರಮ ; ತಹಶೀಲ್ದಾರ್ ಭರವಸೆ

ಕೊಪ್ಪ, ಫೆ.9- ತಾಲ್ಲೂಕು ಕಚೇರಿಯಲ್ಲಿ ಕಡತ ನಾಪತ್ತೆ ಪ್ರಕರಣದ ಆರೋಪ ಎದುರಿಸುತ್ತಿರುವ ಈ ಹಿಂದಿನ ಪ್ರಥಮ ದರ್ಜೆ ಸಹಾಯಕ ಪ್ರಕಾಶ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಸಂಬಂಧ ಕ್ರಮ ವಹಿಸುವುದಾಗಿ ತಹಶೀಲ್ದಾರ್ ತಿಳಿಸಿದ್ದಾರೆ. ರೈತರು, ಬಡವರ ಫಾರಂ 50,53,57ರ ಕಡತ ನಿರ್ವಹಣೆ ಮಾಡುತ್ತಿದ್ದ ವಿಷಯ ನಿರ್ವಾಹಕ ಆರ್.ಪ್ರಕಾಶ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುೀರ್‍ಕುಮಾರ್ ಮುರೊಳ್ಳಿ ಮತ್ತು ಶಾಸಕ ಟಿ.ಡಿ.ರಾಜೇಗೌಡ ಅವರ ನೇತೃತ್ವದಲ್ಲಿ ಕೊಪ್ಪ ತಾಲ್ಲೂಕು ಕಚೇರಿ ಬಳಿ ನಿನ್ನೆ ಅನಿರ್ದಿಷ್ಟಾವ […]

ದಾಖಲೆ ಕಳ್ಳರ ರಕ್ಷಣೆಗೆ ನಿಂತ ಎಸಿ, ತಹಸೀಲ್ದಾರ್: ಸುಧೀರ್ ಮುರೊಳ್ಳಿ ಗಂಭೀರ ಆರೋಪ

ಕೊಪ್ಪ, ಫೆ.4- ತಾಲ್ಲೂಕು ಕಚೇರಿಯ ಕಡತಗಳನ್ನು ಬಚ್ಚಿಟ್ಟುಕೊಂಡು ಭಾರೀ ಭ್ರಷ್ಟಾಚಾರದಲ್ಲಿ ತೊಡಗಿರುವ ಪ್ರಥಮ ದರ್ಜೆ ಸಹಾಯಕ ಪ್ರಕಾಶ್ ಎಂಬುವವರನ್ನು ಕೊಪ್ಪ ತಹಸೀಲ್ದಾರ್ ಪರಮೇಶ್ ಹಾಗೂ ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಡಾ.ಎಚ್.ಎನ್.ನಾಗರಾಜ್ ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು  ಆರೋಪಿಸಿರುವ ಕಾಂಗ್ರೆಸ್ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಭಾರೀ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಸುಧೀರ್ ಕುಮಾರ್ ಮುರೊಳ್ಳಿ , ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಇನೇಶ್, ನುಗ್ಗಿ ಮಂಜುನಾಥ್ ಸೇರಿದಂತೆ ಹಲವು ಮುಖಂಡರು ಈ ಕುರಿತು ಗಂಭೀರ ಆರೋಪ […]