ಈಗಲೇ ರಾಜೀನಾಮೆ ಕೊಡ್ತೀನಿ ತೊಗೊಳ್ಳಿ ಸ್ವಾಮಿ : ನ್ಯಾಯಾಧೀಶರ ಮುಂದೆ ಶಾಸಕ ಮುನಿರತ್ನ ಅಳಲು

ಬೆಂಗಳೂರು,ಸೆ.21– ನಾನು ಬೇಕಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದನಿದ್ದೇನೆ. ಇಂತಹ ಮಾನಸಿಕ ಕಿರುಕುಳ ಯಾರಿಗೂ ಬೇಡ. ಬೇಕಾದರೆ ಈಗಲೇ ರಾಜೀನಾಮೆ ಪತ್ರವನ್ನು ತೆಗೆದುಕೊಳ್ಳಿ ಸ್ವಾಮಿ..!!ಅತ್ಯಾಚಾರ ಆರೋಪದ ಮೇಲೆ ಬಂಧನಕ್ಕೊಳಪಟ್ಟಿರುವ ಬಿಜೆಪಿ ಶಾಸಕ ಮುನಿರತ್ನ ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಅಲವತ್ತುಕೊಂಡಿದ್ದು ಹೀಗೆ. ರಾಮನಗರ ಜಿಲ್ಲೆ ಕಗ್ಗಲಿಪುರ ಪೊಲೀಸರು ವಿಚಾರಣೆ ನಡೆಸಿದ ನಂತರ ಮುನಿರತ್ನ ಅವರನ್ನು ಬೆಳಗ್ಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಈ ವೇಳೆ ನ್ಯಾಯಮೂರ್ತಿಗಳು ಪ್ರಕರಣ ಕುರಿತು ಆರೋಪಿಗೆ ಕೆಲವು ಪ್ರಶ್ನೆಗಳನ್ನು ಮುಂದಿಟ್ಟರು. … Continue reading ಈಗಲೇ ರಾಜೀನಾಮೆ ಕೊಡ್ತೀನಿ ತೊಗೊಳ್ಳಿ ಸ್ವಾಮಿ : ನ್ಯಾಯಾಧೀಶರ ಮುಂದೆ ಶಾಸಕ ಮುನಿರತ್ನ ಅಳಲು