Monday, October 14, 2024
Homeರಾಜ್ಯಈಗಲೇ ರಾಜೀನಾಮೆ ಕೊಡ್ತೀನಿ ತೊಗೊಳ್ಳಿ ಸ್ವಾಮಿ : ನ್ಯಾಯಾಧೀಶರ ಮುಂದೆ ಶಾಸಕ ಮುನಿರತ್ನ ಅಳಲು

ಈಗಲೇ ರಾಜೀನಾಮೆ ಕೊಡ್ತೀನಿ ತೊಗೊಳ್ಳಿ ಸ್ವಾಮಿ : ನ್ಯಾಯಾಧೀಶರ ಮುಂದೆ ಶಾಸಕ ಮುನಿರತ್ನ ಅಳಲು

Defiant Munirathna says he'll resign if guilt proven

ಬೆಂಗಳೂರು,ಸೆ.21– ನಾನು ಬೇಕಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದನಿದ್ದೇನೆ. ಇಂತಹ ಮಾನಸಿಕ ಕಿರುಕುಳ ಯಾರಿಗೂ ಬೇಡ. ಬೇಕಾದರೆ ಈಗಲೇ ರಾಜೀನಾಮೆ ಪತ್ರವನ್ನು ತೆಗೆದುಕೊಳ್ಳಿ ಸ್ವಾಮಿ..!!ಅತ್ಯಾಚಾರ ಆರೋಪದ ಮೇಲೆ ಬಂಧನಕ್ಕೊಳಪಟ್ಟಿರುವ ಬಿಜೆಪಿ ಶಾಸಕ ಮುನಿರತ್ನ ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಅಲವತ್ತುಕೊಂಡಿದ್ದು ಹೀಗೆ.

ರಾಮನಗರ ಜಿಲ್ಲೆ ಕಗ್ಗಲಿಪುರ ಪೊಲೀಸರು ವಿಚಾರಣೆ ನಡೆಸಿದ ನಂತರ ಮುನಿರತ್ನ ಅವರನ್ನು ಬೆಳಗ್ಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಈ ವೇಳೆ ನ್ಯಾಯಮೂರ್ತಿಗಳು ಪ್ರಕರಣ ಕುರಿತು ಆರೋಪಿಗೆ ಕೆಲವು ಪ್ರಶ್ನೆಗಳನ್ನು ಮುಂದಿಟ್ಟರು. ಆಗ ಮುನಿರತ್ನ ಅವರು, ಐದು ವರ್ಷದ ನಂತರ ಈ ಪ್ರಕರಣ ಆಚೆ ಬಂದಿದೆ.

ಒಂದು ವೇಳೆ ಅಂತಹ ನೀಚ ಕೆಲಸವನ್ನು ಮಾಡಿದ್ದರೆ ಸಂತ್ರಸ್ತ ಮಹಿಳೆ ಈವರೆಗೂ ಏಕೆ ಸುಮನಿದ್ದರು. ಅಂದೇ ದೂರು ಕೊಡಬಹುದಿತ್ತಲ್ಲವೇ? ಇದು ವ್ಯವಸ್ಥಿತ ರಾಜಕೀಯ ಷಡ್ಯಂತರ ಎಂದು ನೋವು ಹೊರಹಾಕಿದರು.

ಲೋಕಸಭೆಯ ಚುನಾವಣೆ ಫಲಿತಾಂಶ ಬಂದ ನಂತರ ನನ್ನ ಮೇಲೆ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ. ಕೆಲವರು ನಾನು ಪ್ರತಿನಿಧಿಸುವ ಕ್ಷೇತ್ರದಲ್ಲಿ ತನ್ನ ಸಹೋದರನಿಗೆ ಹಿನ್ನಡೆಯಾಯಿತಲ್ಲ ಎಂದು ಸುಳ್ಳು ಮೊಕದ್ದಮೆಗಳನ್ನು ದಾಖಲಿಸುತ್ತಿದ್ದಾರೆ ಸ್ವಾಮಿ.. ನೀವು ಹೇಳಿದರೆ ನನ್ನ ಶಾಸಕ ಸ್ಥಾನಕ್ಕೆ ಈಗಲೇ ರಾಜೀನಾಮೆ ಕೊಟ್ಟು ಮನೆಯಲ್ಲಿ ನೆಮದಿಯಾಗಿರುತ್ತೇನೆ ಎಂದಿದ್ದಾರೆ.

ಆಗ ಮಧ್ಯಪ್ರವೇಶಿಸಿದ ನ್ಯಾಯಾಧೀಶರು, ಇದು ನ್ಯಾಯಾಲಯ ಎಂಬುದು ನಿಮ ಗಮನದಲ್ಲಿರಲಿ. ನೀವು ರಾಜೀನಾಮೆಯನ್ನು ಯಾರಿಗೆ ಕೊಡಬೇಕೋ ಅವರಿಗೆ ಕೊಡಿ. ನಾನು ಕೇಳುತ್ತಿರುವ ಪ್ರಶ್ನೆಗಳಿಗೆ ಮಾತ್ರ ಉತ್ತರ ಕೊಡಿ ಎಂದು ಸೂಚಿಸಿದರು. ಮಾತು ಮುಂದುವರೆಸಿದ ಮುನಿರತ್ನ ಇದು ಆಡಳಿತಾರೂಢ ಕಾಂಗ್ರೆಸ್‌‍ ಪಕ್ಷದ ವ್ಯವಸ್ಥಿತ ಷಡ್ಯಂತ್ರವಾಗಿದೆ. ನಾನು ಯಾವ ಮಹಿಳೆಯ ಮೇಲೂ ಅತ್ಯಾಚಾರ ನಡೆಸಿಲ್ಲ. ಸಾರ್ವಜನಿಕ ಜೀವನದಲ್ಲಿ ನನ್ನದೇ ಆದ ಘನತೆ ಇಟ್ಟುಕೊಂಡಿದ್ದೇನೆ.

ನಿಜ ಹೇಳಬೇಕೆಂದರೆ ಆ ಮಹಿಳೆಯೇ ನನಗೆ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ಕಳುಹಿಸಿ ನೋಡುವಂತೆ ಪ್ರಚೋದನೆ ಮಾಡುತ್ತಿದ್ದರು. ನಾನು ಎಂದೂ ಇಂತಹ ನೀಚ ಕೆಲಸ ಮಾಡಲಿಲ್ಲ. ನನ್ನ ಕ್ಷೇತ್ರದಲ್ಲಿರುವ ರಾಜಕೀಯ ಎದುರಾಳಿಗಳು ಕೆಲವು ಪ್ರಭಾವಿಗಳ ಜೊತೆ ಸೇರಿಕೊಂಡು ಇಂತಹ ಷಡ್ಯಂತ್ರ ನಡೆಸಿದ್ದಾರೆ ಎಂದು ನೋವು ತೋಡಿಕೊಂಡರು.

ರಾಜಕೀಯಕ್ಕೆ ಬಂದ ಮೇಲೆ ನನ್ನ ಮೇಲೆ ಇಂಥ ಆರೋಪಗಳು ಕೇಳಿಬರುತ್ತಲೇ ಇದೆ. ನಮಂಥವರು ಸಾರ್ವಜನಿಕ ಕ್ಷೇತ್ರದಲ್ಲಿ ಇರಬಾರದು ಎಂಬುದು ಕೆಲವರ ದುರಾಲೋಚನೆ. ಹೇಗಾದರೂ ಮಾಡಿ ಐದು ವರ್ಷ ಜೈಲಿನಲ್ಲಿ ಕೂರಿಸಲು ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ನಾನು ಶಾಸಕನಾಗಿ ಮುಂದುವರೆಯಬಾರದೆಂದ ಇಚ್ಛೆ ಇದ್ದರೆ ರಾಜೀನಾಮೆ ಕೊಟ್ಟುಬಿಡುತ್ತೇನೆ ಎಂದು ಹೇಳಿದರು.

ನೀವು ರಾಜೀನಾಮೆ ನೀಡಬೇಡಿ. ಜನಪ್ರತಿನಿಧಿಯಾಗಿ ಮುಂದುವರೆಯುವ ಆಸಕ್ತಿ ಇಲ್ಲದಿದ್ದರೆ ಸಂಬಂಧಪಟ್ಟವರ ಬಳಿ ರಾಜೀನಾಮೆ ವಿಷಯವನ್ನು ಮಾತನಾಡಿ ಎಂದು ಸೂಚಿಸಿ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದರು.

RELATED ARTICLES

Latest News