Home ಅಂತಾರಾಷ್ಟ್ರೀಯ | International ಟಿಬೆಟ್‌ನಲ್ಲಿ 6.8 ತೀವ್ರತೆಯ ಭೂಕಂಪ, 50ಕ್ಕೂ ಹೆಚ್ಚು ಮಂದಿ ಸಾವು

ಟಿಬೆಟ್‌ನಲ್ಲಿ 6.8 ತೀವ್ರತೆಯ ಭೂಕಂಪ, 50ಕ್ಕೂ ಹೆಚ್ಚು ಮಂದಿ ಸಾವು

0
ಟಿಬೆಟ್‌ನಲ್ಲಿ 6.8 ತೀವ್ರತೆಯ ಭೂಕಂಪ, 50ಕ್ಕೂ ಹೆಚ್ಚು ಮಂದಿ ಸಾವು

ಲಾಸಾ,ಜ. 7 (ಪಿಟಿಐ) ಚೀನಾದ ಟಿಬೆಟ್‌ ಸ್ವಾಯತ್ತ ಪ್ರದೇಶದ ಕ್ಸಿಗೇಜ್‌ ನಗರದಲ್ಲಿ ಸಂಭವಿಸಿದ 6.8 ತೀವ್ರತೆಯ ಭೂಕಂಪದಲ್ಲಿ ಕನಿಷ್ಠ 50ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 38 ಮಂದಿ ಗಾಯಗೊಂಡಿದ್ದಾ. ಪ್ರಾದೇಶಿಕ ವಿಪತ್ತು ಪರಿಹಾರ ಕೇಂದ್ರ ಕಚೇರಿಯ ಪ್ರಕಾರ ಇಂದು ಬೆಳಗ್ಗೆ 9:05 ಕ್ಕೆ (ಬೀಜಿಂಗ್‌ ಸಮಯ) ಚೀನಾದ ಟಿಬೆಟ್‌ ಸ್ವಾಯತ್ತ ಪ್ರದೇಶದ ಕ್ಸಿಗೇಜ್‌ ನಗರದ ಡಿಂಗ್ರಿ ಕೌಂಟಿಯಲ್ಲಿ ಭೂಕಂಪ ಸಂಭವಿಸಿದೆ.

6.8 ತೀವ್ರತೆಯ ಭೂಕಂಪದ ಸಮಯದಲ್ಲಿ ಮೂವತ್ತೆರಡು ಜನರು ಸಾವನ್ನಪ್ಪಿದ್ದಾರೆ ಮತ್ತು 38 ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಕ್ಸಿನ್ಹುವಾ ವರದಿ ಮಾಡಿದೆ.ಭೂಕಂಪದ ಕೇಂದ್ರವನ್ನು 28.5 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 87.45 ಡಿಗ್ರಿ ಪೂರ್ವ ರೇಖಾಂಶದಲ್ಲಿ ಗಮನಿಸಲಾಗಿದೆ.

ಚೀನಾ ಭೂಕಂಪ ನೆಟ್‌ವರ್ಕ್ಸ್‌ ಸೆಂಟರ್‌ ನೀಡಿದ ವರದಿಯ ಪ್ರಕಾರ 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಸರ್ಕಾರಿ ಕ್ಸಿನ್‌ಹುವಾ ವರದಿ ಮಾಡಿದೆ.