Monday, December 2, 2024
Homeಕ್ರೀಡಾ ಸುದ್ದಿ | Sportsಸೂಪರ್‌-8 ಮೊದಲ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌‍ ವಿರುದ್ಧ ಇಂಗ್ಲೆಂಡ್‌ಗೆ ಭರ್ಜರಿ ಜಯ

ಸೂಪರ್‌-8 ಮೊದಲ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌‍ ವಿರುದ್ಧ ಇಂಗ್ಲೆಂಡ್‌ಗೆ ಭರ್ಜರಿ ಜಯ

ಗ್ರಾಸ್‌‍ ಐಲೆಟ್‌ (ಸೇಂಟ್‌ ಲೂಸಿಯಾ),ಇಲ್ಲಿ ನಡೆದ ಟಿ-20 ವಿಶ್ವಕಪ್‌ ಸೂಪರ್‌-8 ಹಂತದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಎದುರಾಳಿ ವೆಸ್ಟ್‌ಇಂಡೀಸ್‌‍ ವಿರುದ್ಧ ಎಂಟು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ವೆಸ್ಟ್‌ಇಂಡೀಸ್‌‍ ಪರವಾಗಿ ಆರಂಭಿಕರಾದ ಬ್ರಾಂಡನ್‌ ಕಿಂಗ್‌ ಮತ್ತು ಜಾನ್ಸನ್‌ ಚಾರ್ಲ್ಸ್‌ ಜೋಡಿ ಇಂಗ್ಲೆಂಡ್‌ ಬೌಲರ್‌ಗಳನ್ನು ದಂಡಿಸಿದರು. ಆದರೆ ಬ್ರಾಂಡನ್‌ ಕಿಂಗ್‌(23) ಗಾಯಗೊಂಡು ನಿರ್ಗಮಿಸಿದ ನಂತರ ಬಂದ ನಿಕೋಲಸ್‌‍ ಪೂರನ್‌ ಕೂಡ ಚಾರ್ಲ್ಸ್‌ ಜೊತೆಗೂಡಿ ತಮ ಸ್ಪೋಟಕ ಆಟದ ಮೂಲಕ 10 ಓವರ್‌ಗಳಲ್ಲಿ ವಿಂಡೀಸ್‌‍ ತಂಡ 82 ರನ್‌ ಕಲೆ ಹಾಕಿದರು .

ಅಪಾಯಕರವಾಗಿ ಕಂಡುಬಂದ ಈ ಜೋಡಿಯನ್ನು 12ನೇ ಓವರ್‌ನಲ್ಲಿ ಅನುಭವಿ ಸ್ಪಿನರ್‌ ಅಲಿ ಬೇರ್ಪಡಿಸಿದರು. ಜಾನ್ಸನ್‌ ಚಾರ್ಲ್ಸ್‌(36) ವಿಕೆಟ್‌ ಉರುಳಿದ ನಂತರ ನಿಕೋಲಸ್‌‍ ಪೂರನ್‌ ಕೂಡ (38)ಆರ್ಚರ್‌ ಬೌಲಿಂಗ್‌ನಲ್ಲಿ ಔಟಾದರು.

ನಂತರ ಬಂದ ರಸೆಲ್‌ ಕೇವಲ 1 ರನ್‌ಗೆ ನಿರ್ಗಮಿಸಿದರೆ ರೋವ್‌ಮನ್‌ ಪೊವೆಲ್‌ (36) ಮತ್ತು ಶೆರ್ಫೇನ್‌ ರುದರ್ಫೋರ್ಡ್‌ ಸ್ಲಾಗ್‌ ಓವರ್‌ನಲ್ಲಿ ಆರ್ಭಟಿಸಿದರು ಅಂತಿಮವಾಗಿ ವಿಂಡೀಸ್‌‍ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದು ಕೊಂಡು 180 ರನ್‌ ಕಲೆ ಹಾಕಿತು.

ಸವಾಲಿನ ಮೊತ್ತ ಬೆನ್ನಟ್ಟಲು ಇಂಗ್ಲೆಂಡ್‌ ತಂಡದ ಪರವಾಗಿ ಆರಂಭಿಕರಾಗಿ ನಾಯಕ ಬಟ್ಲರ್‌ ಹಾಗು ಫಿಲ್‌ ಸಾಲ್ಟ್‌‍ ಜಾಣೆಯ ಆಟ ಪ್ರದರ್ಶಿಸಿದರು.ವಿಂಡೀಸ್‌‍ ವೇಗದ ಬೌಲರ್‌ ಅಕೇಲ್‌ ಹೋಸೇನ್‌ ಮತ್ತು ರೊಮಾರಿಯೋ ಶೆಫರ್ಡ್‌ ಅವರ ಬೌನ್ಸರ್‌,ಶಾರ್ಟ್‌ ಪಿಚ್‌ ಚೆಂಡುಗಳನ್ನು ದಿಟ್ಟವಾಗಿ ಎದುರಿಸಿ ರನ್‌ ಹೊಳೆ ಹರಿಸಿದರು.

ಕೊನೆಗೆ ಆಂಡ್ರೆ ರಸೆಲ್‌ ಬೌಲಿಂಗ್‌ ದಾಳಿಗಿಳಿದು ಗಮನ ಸೆಳೆದರು .ಈ ವೇಳೆ 8ನೇ ಓವರ್‌ನಲ್ಲಿ ಚೇಸ್‌‍ ಬೌಲಿಂಗ್‌ನಲ್ಲಿ ನಾಯಕ ಬಟ್ಲರ್‌(26) ವಿಕೆಟ್‌ ಪಡೆದರೆ ನಂತರ ಬಂದ ಅನುಭವಿ ಮೊಹಮದ್‌ ಅಲಿ(12)ಗೆ ರಸೆಲ್‌ ಪವಿಲಿಯನ್‌ ಹಾದಿ ತೋರಿದರು.

3ನೇ ಕ್ರಮಾಂಕದಲ್ಲಿ ಬಂದ ಜಾನಿ ಬೈರ್ಸ್ಟೋವ್‌ ಪಂದ್ಯದ ದಿಕ್ಕನ್ನೇ ಬದಲಿಸಿದರು ಫಿಲ್‌ ಸಾಲ್ಟ್‌‍ ಜೊತೆಗೂಡಿ ಅಬ್ಬರಿಸಿದರು ಆರಂಭಿಕ ಆಟಗಾರ ಫಿಲ್‌ ಸಾಲ್ಟ್‌‍ 47 ಎಸೆತಗಳಲ್ಲಿ ಅಜೇಯ 87 ಮತ್ತು ಜಾನಿ ಬೈರ್‌ಸ್ಟೋವ್‌ 26 ಎಸೆತಗಳಲ್ಲಿ ಔಟಾಗದೆ 48 ರನ್‌ ಗಳಿಸುವುದರೊಂದಿಗೆ 17.3 ಓವರ್‌ಗಳಲ್ಲಿ 181ಚಚ್ಚಿ ಗೆಲುವಿನ ಕೇಕೆ ಹಾಕಿದರು .ಗೆಲುವಿನೊಂದಿಗೆ ಇಂಗ್ಲೆಂಡ್‌ ಸಂಭ್ರಮಿಸಿದರೆ.ವಿಂಡೀಸ್‌‍ ನಿರಾಸೆ ಅನುಭವಿಸಿದೆ.

ಸಂಕ್ಷಿಪ್ತಸ್ಕೂರ್‌:- ವೆಸ್ಟ್‌ ಇಂಡೀಸ್‌‍ 20 ಓವರ್‌ಗಳಲ್ಲಿ 180/4 (ರೋವ್‌ಮನ್‌ ಪೊವೆಲ್‌ 36, ನಿಕೋಲಸ್‌‍ ಪೂರನ್‌ 36, ಶೆರ್ಫೇನ್‌ ರುದರ್‌ಫೋರ್ಡ್‌ ಔಟಾಗದೆ 28)
ಇಂಗ್ಲೆಂಡ್‌:-17.3 ಓವರ್‌ಗಳಲ್ಲಿ 181/2 (ಫಿಲ್‌ ಸಾಲ್ಟ್‌‍ ಔಟಾಗದೆ 87, ಜಾನಿ ಬೈರ್‌ಸ್ಟೋವ್‌ ಔಟಾಗದೆ 48) ಪಲಿತಾಂಶ -8 ವಿಕೆಟ್‌ಗಳಿಂದ ಇಂಗ್ಲೆಂಡ್‌ಗೆ ಜಯ

RELATED ARTICLES

Latest News