Thursday, September 19, 2024
Homeಜಿಲ್ಲಾ ಸುದ್ದಿಗಳು | District Newsಮೈಸೂರು | Mysuruಮೈಸೂರಲ್ಲೊಂದು ಮನಕಲಕುವ ಘಟನೆ, ಮಗಳ ಶವವನ್ನಿಟ್ಟುಕೊಂಡು ತಂದೆಗಾಗಿ ಕಾದು ಕುಳಿತ ಕುಟುಂಬ

ಮೈಸೂರಲ್ಲೊಂದು ಮನಕಲಕುವ ಘಟನೆ, ಮಗಳ ಶವವನ್ನಿಟ್ಟುಕೊಂಡು ತಂದೆಗಾಗಿ ಕಾದು ಕುಳಿತ ಕುಟುಂಬ

ಮೈಸೂರು,ಆ.6- ಸ್ನೇಹಿತರ ಜೊತೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಡಿವೈಡರ್‌ಗೆ ಡಿಕ್ಕಿ ಹೊಡೆದು ಯುವತಿ ಮೃತಪಟ್ಟಿದ್ದು, ಶವಸಂಸ್ಕಾರ ಮಾಡದೇ ಮನೆಬಿಟ್ಟು ಹೋದ ತಂದೆಯ ಬರುವಿಕೆಗಾಗಿ ಕುಟುಂಬ ಕಾಯುತ್ತಿರುವ ಮನಕಲುಕುವ ಘಟನೆ ನಗರದಲ್ಲಿ ನಡೆದಿದೆ.

ನಗರದ ಕನಕಗಿರಿ ನಿವಾಸಿ ಕವನ ಮೃತಪಟ್ಟ ದುರ್ದೈವಿ. ಹೂಟಗಳ್ಳಿ ಸಮೀಪ ಸ್ನೇಹಿತರ ಜೊತೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಡಿವೈಡರ್‌ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಪರಿಣಾಮ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಖಾಸಗಿ ಕಾಲೇಜೊಂದರಲ್ಲಿ ಅಂತಿಮ ವರ್ಷದ ಬಿಕಾಂ ಓದುತ್ತಿರುವ ಕವನ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು. ಕಳೆದ ಮೂರು ತಿಂಗಳ ಹಿಂದೆಯಷ್ಟೇ ಈಕೆಯ ತಂದೆ ನಾಗರಾಜ್‌ ಮನೆಬಿಟ್ಟು ಹೋಗಿದ್ದಾರೆ.ಅಪಘಾತದಲ್ಲಿ ಮಗಳು ಮೃತಪಟ್ಟಿದ್ದಾಳೆ. ನಿಮಗಾಗಿ ಮೃತದೇಹವನ್ನು ಇರಿಸಿಕೊಂಡಿದ್ದೇವೆ.

ಯಾವುದೇ ಬೇಸರವಿದ್ದರೂ ಮರೆತು ಮನೆಗೆ ಬನ್ನಿ ಎಂದು ನೊಂದ ಕುಟುಂಬ ಸದಸ್ಯರು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ.ಅಂತ್ಯಕ್ರಿಯೆಗೆ ಮುನ್ನ ಕವನಳ ತಂದೆ ಮನೆಗೆ ಹಿಂದಿರುಗಲಿ ಎಂಬುದೇ ನಗರದ ಜನತೆಯ ಆಶಯವಾಗಿದೆ.

RELATED ARTICLES

Latest News